Tirupati Income: ತಿರುಪತಿ ಗಿರಿವಾಸ ಮತ್ತಷ್ಟು ಶ್ರೀಮಂತ! ಕಳೆದ ವರ್ಷ 1,400 ಕೋಟಿ ರೂಪಾಯಿ ಆದಾಯ
2022ರಲ್ಲಿ ಟಿಟಿಡಿ ಮಾರಾಟ ಮಾಡಿರುವ ಲಡ್ಡುಗಳ ಸಂಖ್ಯೆ 11.54 ಲಕ್ಷ. ಕಳೆದ ವರ್ಷ 5.96 ಲಕ್ಷ ಲಡ್ಡುಗಳು ಮಾರಾಟವಾಗಿದ್ದವು.ಡಿಸೆಂಬರ್ವೊಂದರಲ್ಲಿಯೇ 129 ಕೋಟಿ ರೂಪಾಯಿ ಹುಂಡಿ ಆದಾಯ ಸಂಗ್ರಹವಾಗಿದೆ.
Tirupati: ವಿಶ್ವದ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಾತ್ರವಾಗಿದೆ. ತಿರುಪತಿ ದೇಗುಲದ ಸಂಪತ್ತು 2.26 ಲಕ್ಷ ಕೋಟಿ ಎಂಬುದು ಮೊದಲ ಬಾರಿಗೆ ಬಹಿರಂಗವಾಗಿತ್ತು.
2/ 9
1933ರಲ್ಲಿ ಆಂಧ್ರಪ್ರದೇಶದಲ್ಲಿ ದೇವಾಲಯ ಸ್ಥಾಪನೆಯಾದಾಗಿನಿಂದ ಈವರೆಗೂ ಬಹಿರಂಗವಾಗದ ರಹಸ್ಯವನ್ನು ದೇವಾಲಯದ ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ.
3/ 9
ಕಳೆದ ವರ್ಷ 2022ರಲ್ಲಿ ಹುಂಡಿಯಲ್ಲಿ 1,450 ಕೋಟಿ ರೂಪಾಯಿ ಸಂಗ್ರಹವಾಗಿದೆ. 2021ರಲ್ಲಿ 833 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಹುಂಡಿ ಆದಾಯವು ಶೇ. 75ರಷ್ಟು ವೃದ್ಧಿಯಾಗಿದೆ.
4/ 9
2021ರಲ್ಲಿ ಮತ್ತು 2022ರ ಆರಂಭದಲ್ಲಿ ಕೋವಿಡ್ ನಿರ್ಬಂಧಗಳಿಂದ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ವರ್ಷದ ಕೊನೆ ಹೊತ್ತಿಗೆ ಭಕ್ತರ ಸಂಖ್ಯೆ ಮತ್ತು ಆದಾಯವು ಗಣನೀಯವಾಗಿ ವೃದ್ಧಿಯಾಗಿದೆ.
5/ 9
2022ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 2.37 ಕೋಟಿ. ಇದರ ಹಿಂದಿನ ವರ್ಷ 2021ರಲ್ಲಿ 1.04 ಕೋಟಿ ಭಕ್ತರು ಭೇಟಿ ನೀಡಿದ್ದರು.
6/ 9
ಸುಮಾರು 90 ವರ್ಷಗಳ ನಂತರ ಇದೇ ಮೊದಲ ಬಾರಿಗೆ ದೇವಾಲಯದ ಆಸ್ತಿಯನ್ನು ಬಹಿರಂಗಪಡಿಸಲಾಗುತ್ತಿದೆ. ವೆಂಕಟೇಶ್ವರ ದೇವರಿಗೆ ಸಮರ್ಪಿತವಾದ ತಿರುಪತಿ ದೇವಸ್ಥಾನದ ವ್ಯವಸ್ಥಾಪಕ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅವರು ಆಸ್ತಿಯನ್ನು ಬಹಿರಂಗಪಡಿಸಿದ್ದಾರೆ.
7/ 9
2022ರಲ್ಲಿ ಟಿಟಿಡಿ ಮಾರಾಟ ಮಾಡಿರುವ ಲಡ್ಡುಗಳ ಸಂಖ್ಯೆ 11.54 ಲಕ್ಷ. ಕಳೆದ ವರ್ಷ 5.96 ಲಕ್ಷ ಲಡ್ಡುಗಳು ಮಾರಾಟವಾಗಿದ್ದವು.ಡಿಸೆಂಬರ್ವೊಂದರಲ್ಲಿಯೇ 129 ಕೋಟಿ ರೂ ಹುಂಡಿ ಆದಾಯ ಸಂಗ್ರಹವಾಗಿದೆ.
8/ 9
ಡಿಸೆಂಬರ್ ತಿಂಗಳು ಒಂದರಲ್ಲಿಯೇ ಟಿಟಿಡಿಗೆ 129.37 ಕೋಟಿ ರೂ ಹುಂಡಿ ಸಂಗ್ರಹವಾಗಿದೆ.
9/ 9
ದೇವಾಲಯದ ಆಸ್ತಿಗಳು ಪ್ರಪಂಚದ ಅನೇಕ ದೇಶಗಳ GPP ಗಿಂತ ಹೆಚ್ಚು ಎಂದು ಅಂದಾಜುಗಳು ಸೂಚಿಸುತ್ತವೆ. ತಿರುಪತಿ ದೇವಸ್ಥಾನವು 2.5 ಲಕ್ಷ ಕೋಟಿ ರೂಪಾಯಿಗಳಷ್ಟು (ಸುಮಾರು $30 ಬಿಲಿಯನ್) ಆಸ್ತಿಯನ್ನು ಹೊಂದಿದೆ.