Thomas Kurian: ಗೂಗಲ್‌ನಲ್ಲಿ ಕೆಲ್ಸ ಮಾಡುತ್ತಿರುವ ಇವ್ರು ಐಐಟಿ ಡ್ರಾಪ್‌ ಔಟ್! ಆದ್ರೆ ಸುಂದರ್​ ಪಿಚೈಗಿಂತ ಹೆಚ್ಚು ಶ್ರೀಮಂತ!

Thomas Kurian: ಕೇರಳ ಮೂಲದ ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್, ಅವರ ಬಾಸ್ ಸುಂದರ್ ಪಿಚೈ ಅವರ ಆಸ್ತಿಗಿಂತ ಎರಡು ಪಟ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ.

First published:

  • 18

    Thomas Kurian: ಗೂಗಲ್‌ನಲ್ಲಿ ಕೆಲ್ಸ ಮಾಡುತ್ತಿರುವ ಇವ್ರು ಐಐಟಿ ಡ್ರಾಪ್‌ ಔಟ್! ಆದ್ರೆ ಸುಂದರ್​ ಪಿಚೈಗಿಂತ ಹೆಚ್ಚು ಶ್ರೀಮಂತ!

    ಥಾಮಸ್ ಕುರಿಯನ್, ಕೇರಳದ ಮೂಲದವರಾಗಿದ್ದು, ವಿಶ್ವದ ಅತ್ಯುತ್ತಮ ಭಾರತೀಯ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ. 1996 ರಲ್ಲಿ ಕೊಟ್ಟಾಯಂನಲ್ಲಿ ಪಿಸಿ ಕುರಿಯನ್ ಮತ್ತು ಮೊಲ್ಲಿ ಎಂಬ ದಂಪತಿಗೆ ಜನಿಸಿದ ಥಾಮಸ್ ಕುರಿಯನ್ ಅವರು 2018 ರಿಂದ ಗೂಗಲ್ ಕ್ಲೌಡ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಅವರು ವಿಶ್ವದ ಎರಡನೇ ಶ್ರೀಮಂತ ಭಾರತೀಯ ಸಿಇಒ ಆಗಿದ್ದಾರೆ. ವಿಶೇಷವೆಂದರೆ ಕುರಿಯನ್​ ಅವರ ಕಾರ್ಯ ನಿರ್ವಹಿಸುವ ಗೂಗಲ್​ ಸಂಸ್ಥೆಯ ಸಿಇಒ​ ಸುಂದರ್ ಪಿಚೈ ಅವರ ನಿವ್ವಳ ಮೌಲ್ಯಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಅವರ ಅವಳಿ ಸಹೋದರ ಜಾರ್ಜ್ ಕುರಿಯನ್ 2015 ರಿಂದ NetApp ನ CEO ಆಗಿದ್ದಾರೆ.

    MORE
    GALLERIES

  • 28

    Thomas Kurian: ಗೂಗಲ್‌ನಲ್ಲಿ ಕೆಲ್ಸ ಮಾಡುತ್ತಿರುವ ಇವ್ರು ಐಐಟಿ ಡ್ರಾಪ್‌ ಔಟ್! ಆದ್ರೆ ಸುಂದರ್​ ಪಿಚೈಗಿಂತ ಹೆಚ್ಚು ಶ್ರೀಮಂತ!

    ಥಾಮಸ್ ಕುರಿಯನ್ ಅವರ ತಂದೆ ಕೆಮಿಕಲ್ ಇಂಜಿನಿಯರ್. ಥಾಮಸ್ ಮತ್ತು ಜಾರ್ಜ್ ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ಇಬ್ಬರೂ ಅತ್ಯುತ್ತಮ ವಿದ್ಯಾರ್ಥಿಗಳಾಗಿದ್ದರು. ನಂತರ ಇಬ್ಬರೂ ಮದ್ರಾಸ್‌ನ ಐಐಟಿಗೆ ಸೇರಿದರು, ಆದರೆ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದರಿಂದ ಅಲ್ಲಿ ಓದಲು ಸಾಧ್ಯವಾಗಲಿಲ್ಲ.

    MORE
    GALLERIES

  • 38

    Thomas Kurian: ಗೂಗಲ್‌ನಲ್ಲಿ ಕೆಲ್ಸ ಮಾಡುತ್ತಿರುವ ಇವ್ರು ಐಐಟಿ ಡ್ರಾಪ್‌ ಔಟ್! ಆದ್ರೆ ಸುಂದರ್​ ಪಿಚೈಗಿಂತ ಹೆಚ್ಚು ಶ್ರೀಮಂತ!

    16 ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದರು. ಅಲ್ಲಿ, ಥಾಮಸ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ನಂತರ ಅವರು ಸ್ಟ್ಯಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ತಮ್ಮ MBA ಪದವಿ ಪಡೆದರು. ನಂತರ ಮೆಕಿನ್ಸೆ & ಕಂಪನಿಯಲ್ಲಿ ಮೊದಲ ಕೆಲಸ ಪಡೆದರು. (ಫೋಟೋ-CNBC)

    MORE
    GALLERIES

  • 48

    Thomas Kurian: ಗೂಗಲ್‌ನಲ್ಲಿ ಕೆಲ್ಸ ಮಾಡುತ್ತಿರುವ ಇವ್ರು ಐಐಟಿ ಡ್ರಾಪ್‌ ಔಟ್! ಆದ್ರೆ ಸುಂದರ್​ ಪಿಚೈಗಿಂತ ಹೆಚ್ಚು ಶ್ರೀಮಂತ!

    ಅವರು ಆ ಕಂಪನಿಯಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದರು. ಅವರು CEO ಗಳೊಂದಿಗೆ ಕೆಲಸ ಮಾಡುವ ಸಲಹಾ ತಂಡಗಳನ್ನು ಮುನ್ನಡೆಸಿದ್ದರು. 1996ರಲ್ಲಿ ಮೆಕಿನ್ಸೇಯನ್ನ ಬಿಟ್ಟು ಅವರು ಒರಾಕಲ್ (Oracle) ಕಂಪನಿಯಲ್ಲಿ ಕೆಲಸ ಪಡೆದರು. 22 ವರ್ಷ ಕಾಲ ಅವರು ಕಂಪನಿಯಲ್ಲಿ ಹಂತಹಂತವಾಗಿ ಮೇಲೇರುತ್ತಾ ಕಂಪನಿಯ ಎಕ್ಸಿಕ್ಯೂಟಿವ್ ಕಮಿಟಿ ಸದಸ್ಯರಾಗುವ ಮಟ್ಟಕ್ಕೆ ಹೋದರು.

    MORE
    GALLERIES

  • 58

    Thomas Kurian: ಗೂಗಲ್‌ನಲ್ಲಿ ಕೆಲ್ಸ ಮಾಡುತ್ತಿರುವ ಇವ್ರು ಐಐಟಿ ಡ್ರಾಪ್‌ ಔಟ್! ಆದ್ರೆ ಸುಂದರ್​ ಪಿಚೈಗಿಂತ ಹೆಚ್ಚು ಶ್ರೀಮಂತ!

    ಒರಾಕಲ್​ನಲ್ಲಿ ಇವರ ನಾಯಕತ್ವದ ತಂಡದಲ್ಲಿ 32 ದೇಶಗಳಿಂದ 35 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಕ್ಲೌಡ್ ಸೇವೆಗಳನ್ನ (Cloud Service) ಒರಾಕಲ್ ಶಕ್ತಿಯಾಗಿ ಮಾರ್ಪಡಿಸಿದರು. ಇವರ ಸಾಹಸ ಮತ್ತು ದೂರದೃಷ್ಟಿಗೆ ಫಲವೆಂಬಂತೆ ಒರಾಕಲ್ ಅಧ್ಯಕ್ಷರೂ ಆದರು. ಆದರೆ, ಒರಾಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಮತ್ತು ಥಾಮಸ್ ಕುರಿಯನ್ ಮಧ್ಯೆ ಕ್ಲೌಡ್ ಸೇವೆಗಳ ಮುಂದಿನ ಕಾರ್ಯತಂತ್ರದ ವಿಚಾರವಾಗಿ ಭಿನ್ನಾಭಿಪ್ರಾಯ ಎದ್ದಿದ್ದರಿಂದ 2018 ಸೆಪ್ಟೆಂಬರ್​ನಲ್ಲಿ ಅವರು ಕಂಪನಿಗೆ ರಾಜೀನಾಮೆ ನೀಡಿ ಹೊರಬಂದರು.

    MORE
    GALLERIES

  • 68

    Thomas Kurian: ಗೂಗಲ್‌ನಲ್ಲಿ ಕೆಲ್ಸ ಮಾಡುತ್ತಿರುವ ಇವ್ರು ಐಐಟಿ ಡ್ರಾಪ್‌ ಔಟ್! ಆದ್ರೆ ಸುಂದರ್​ ಪಿಚೈಗಿಂತ ಹೆಚ್ಚು ಶ್ರೀಮಂತ!

    ಒರಾಕಲ್ ಬಿಟ್ಟು ಎರಡು ತಿಂಗಳ ಬಳಿಕ ಥಾಮಸ್ ಕುರಿಯನ್ ಅವರು ಗೂಗಲ್ ಕ್ಲೌಡ್​ಗೆ ಸಿಇಒ ಆಗಿ ಸೇರ್ಪಡೆಯಾದರು. ಆದರೆ, ಗೂಗಲ್ ಶಕ್ತಿ ಇದ್ದರೂ ಗೂಗಲ್ ಕ್ಲೌಡ್ ಚಿಂತಾಜನಕ ಸ್ಥಿತಿಯಲ್ಲಿತ್ತು. ಗೂಗಲ್ ಕ್ಲೌಡ್ ಅನ್ನು ಪುನರುಜ್ಜೀವನಗೊಳಿಸುವ ಕೆಲಸವನ್ನು ಥಾಮಸ್ ಕುರಿಯನ್ ಅವರಿಗೆ ವಹಿಸಲಾಯಿತು. ಅವರು ಕಂಪನಿಯ ತಂತ್ರವನ್ನು ಬದಲಾಯಿಸಿದರು ಮತ್ತು ಗ್ರಾಹಕ ಸೇವೆಯತ್ತ ಗಮನ ಹರಿಸಿದರು. ಗೂಗಲ್ ಕ್ಲೌಡ್​ನ ಸೇಲ್ಸ್ ವಿಭಾಗದ ಉದ್ಯೋಗಿಗಳಿಗೆ ದೊಡ್ಡ ಮಟ್ಟದಲ್ಲಿ ಸಂಬಳಹೆಚ್ಚಳ ಮಾಡಿದರು. ಸೇಲ್ಸ್ ಎಕ್ಸಿಕ್ಯೂಟಿವ್​ಗಳಲ್ಲಿ ಹುರುಪು ತುಂಬುವುದು ಇವರ ಉದ್ದೇಶವಾಗಿತ್ತು. ಸೇಲ್ಸ್ ವಿಭಾಗಕ್ಕೆ ಇನ್ನಷ್ಟು ಮಂದಿಯನ್ನ ನೇಮಕ ಮಾಡಿಕೊಂಡರು. (ಫೋಟೋ-CNBC).

    MORE
    GALLERIES

  • 78

    Thomas Kurian: ಗೂಗಲ್‌ನಲ್ಲಿ ಕೆಲ್ಸ ಮಾಡುತ್ತಿರುವ ಇವ್ರು ಐಐಟಿ ಡ್ರಾಪ್‌ ಔಟ್! ಆದ್ರೆ ಸುಂದರ್​ ಪಿಚೈಗಿಂತ ಹೆಚ್ಚು ಶ್ರೀಮಂತ!

    ಒರಾಕೆಲ್‌ನಲ್ಲಿ ಅವರು ವಾರ್ಷಿಕ 35 ಮಿಲಿಯನ್‌ ಆದಾಯ ಗಳಿಸುವ ಪ್ರಾಡೆಕ್ಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ನೇತೃತ್ವದಲ್ಲಿ ಕಂಪೆನಿಯ ಕ್ಲೌಡ್‌ ಆದಾಯವು 5.5 ಬಿಲಿಯನ್‌ ಡಾಲರ್‌ ಆಗಿದೆ. ಅಷ್ಟೇಅಲ್ಲ 250 ಬಲಿಷ್ಠ ಸೇಲ್ಸ್‌ ಟೀಂ ಅನ್ನು ಕೂಡ ಮುನ್ನಡೆಸುತ್ತಿದ್ದಾರೆ.

    MORE
    GALLERIES

  • 88

    Thomas Kurian: ಗೂಗಲ್‌ನಲ್ಲಿ ಕೆಲ್ಸ ಮಾಡುತ್ತಿರುವ ಇವ್ರು ಐಐಟಿ ಡ್ರಾಪ್‌ ಔಟ್! ಆದ್ರೆ ಸುಂದರ್​ ಪಿಚೈಗಿಂತ ಹೆಚ್ಚು ಶ್ರೀಮಂತ!

    IIFL Hurun India List ಪ್ರಕಾರ, 2022 ರಲ್ಲಿ Google CEO ಸುಂದರ್ ಪಿಚೈ ಅವರ ನಿವ್ವಳ ಮೌಲ್ಯವು 5300 ಕೋಟಿ ರೂಪಾಯಿ ಆಗಿದೆ. ಅಡೋಬ್ ಸಿಇಒ ಶಾಂತು ನಾರಾಯಣ್ ಅವರ ನಿವ್ವಳ ಮೌಲ್ಯ 3800 ಕೋಟಿಗಳು. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ನಿವ್ವಳ ಮೌಲ್ಯ 6200 ಕೋಟಿ ರೂಪಾಯಿ ಇದೆ. ಆದರೆ ಥಾಮಸ್ ಕುರಿಯನ್ ಅವರ ಒಟ್ಟು ಆಸ್ತಿ 12,100 ಕೋಟಿ ರೂಪಾಯಿ ಇದ್ದು, ಅವರು ಅರಿಸ್ಟಾ ನೆಟ್‌ವರ್ಕ್‌ನ ಜಯಶ್ರೀ ಉಳ್ಳಾಲ್ ಅವರ ನಂತರದ ಸ್ಥಾನದಲ್ಲಿದ್ದಾರೆ. (ಫೋಟೋ-CNBC)

    MORE
    GALLERIES