Salary Hike: ಈ ವರ್ಷ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಬಂಪರ್: ಭಾರೀ ಪ್ರಮಾಣದಲ್ಲಿ ವೇತನ ಹೆಚ್ಚಳ
Good news for Employees: ಉದ್ಯೋಗದಿಂದ ವಜಾ, ಆರ್ಥಿಕ ಹಿಂಜರಿತದಿಂದ ಬೇಸತ್ತಿದ್ದ ಭಾರತೀಯ ಉದ್ಯೋಗಿಗಳಿಗೆ ಆಶಾದಾಯಕ ಸುದ್ದಿ ಹೊರ ಬಿದ್ದಿದೆ. 2023ರಲ್ಲಿ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ವೇತನ ಹೆಚ್ಚಳ ಭಾರೀ ಪ್ರಮಾಣದಲ್ಲಿ ಆಗಲಿದೆ ಎಂದು ವರದಿಯೊಂದು ಅಂದಾಜಿಸಿದೆ.
ಏಷ್ಯನ್ ದೇಶಗಳಲ್ಲಿನ ಭಾರತೀಯ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವೇತನವು ಶೇಕಡಾ 15 ರಿಂದ 30 ರಷ್ಟು ಹೆಚ್ಚಾಗಲಿದೆ ಎಂದು ಕಾರ್ನ್ ಫೆರಿ ವರದಿಯಲ್ಲಿ ತಿಳಿಸಿದೆ. ಈ ವರದಿ ಖಾಸಗಿ ಉದ್ಯೋಗರಂಗದಲ್ಲಿ ಸಂಚಲನ ಮೂಡಿಸಿದೆ.
2/ 8
ಕಾರ್ನ್ ಫೆರ್ರಿ ತನ್ನ ವರದಿಯಲ್ಲಿ ದಕ್ಷಿಣ ಏಷ್ಯಾದ ದೇಶಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸರಾಸರಿ ವೇತನವು ಈ ವರ್ಷ ಶೇ. 9.8 ರಷ್ಟು ಹೆಚ್ಚಾಗುತ್ತದೆ ಎಂದು ಹೇಳಿದೆ. ಕಳೆದ ವರ್ಷ ಇದೇ ಸರಾಸರಿ ವೇತನವು ಶೇ 9.4 ಇತ್ತು. ಜೀವ ವಿಜ್ಞಾನ, ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸೇರಿದ ಉದ್ಯೋಗಿಗಳಿಗೆ ವೇತನ ಏರಿಕೆ ಆಗಲಿದೆ ಎನ್ನಲಾಗ್ತಿದೆ (ಸಾಂದರ್ಭಿಕ ಚಿತ್ರ)
3/ 8
ಈ ವರದಿ ದೇಶಾದ್ಯಂತ 818 ಕಂಪನಿಗಳ 8 ಲಕ್ಷ ಉದ್ಯೋಗಿಗಳನ್ನು ಒಳಗೊಂಡಿದೆ. ಶೇ.61 ರಷ್ಟು ಕಂಪನಿಗಳು ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿವೆ.
4/ 8
ಏಷ್ಯನ್ ದೇಶಗಳಲ್ಲಿ ಭಾರತೀಯ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ, ಹೆಚ್ಚಾಗಿ ಭಾರತದಲ್ಲಿ ನೆಲೆಸಿರುವ ಉದ್ಯೋಗಿಗಳ ಸಂಬಳವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಸರಾಸರಿ ನೋಡಿದರೆ ಶೇ.9.8ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾದಲ್ಲಿ ಉದ್ಯೋಗಿಗಳಿಗೆ 3.5 ಪ್ರತಿಶತ ಸಂಬಳ ಹೆಚ್ಚಳವಾಗಲಿದೆಯಂತೆ. (ಸಾಂಕೇತಿಕ ಚಿತ್ರ)
5/ 8
ಚೀನಾದಲ್ಲಿ ಶೇಕಡಾ ಶೇ. 5.5, ಹಾಂಗ್ ಕಾಂಗ್ನಲ್ಲಿ ಶೇಕಡಾ 3.6, ಇಂಡೋನೇಷ್ಯಾದಲ್ಲಿ 7 , ಕೊರಿಯಾದಲ್ಲಿ ಶೇ. 4.5, ಮಲೇಷ್ಯಾದಲ್ಲಿ ಶೇಕಡಾ 5 ಮತ್ತು ನ್ಯೂಜಿಲೆಂಡ್ ನಲ್ಲಿ ಶೇ. 3.5 ರಷ್ಟು ಸಂಬಳ ಹೆಚ್ಚಾಗುತ್ತದೆ.
6/ 8
ಸಿಂಗಾಪುರದಲ್ಲಿ ಕೆಲಸ ಮಾಡುವ ಭಾರತೀಯ ಉದ್ಯೋಗಿಗಳ ವೇತನವು ಶೇಕಡಾ 4 ರಷ್ಟು, ಥೈಲ್ಯಾಂಡ್ ನಲ್ಲಿ 5 ಮತ್ತು ವಿಯೆಟ್ನಾಂನಲ್ಲಿ ಶೇ 8 ಹೆಚ್ಚಳವಾಗಲಿದೆ. ಆದರೆ ಹೆಚ್ಚಿನ ಕಂಪನಿಗಳು ಇನ್ನೂ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಆದ್ಯತೆ ನೀಡುತ್ತಿವೆ. (ಸಾಂಕೇತಿಕ ಚಿತ್ರ)
7/ 8
ಏಷ್ಯನ್ ದೇಶಗಳಲ್ಲಿ ಸುಮಾರು ಶೇ. 60 ರಷ್ಟು ಕಂಪನಿಗಳು ಮನೆಯಿಂದ ಕೆಲಸವನ್ನು (WFH) ಬಯಸುತ್ತವೆ ಎಂದು ಕಾರ್ನ್ ಫೆರ್ರಿ ವರದಿ ಹೇಳಿದೆ. ಟೈರ್ ಒನ್ ನಗರಗಳೆಂದು ಕರೆಯಲ್ಪಡುವ ಮೆಟ್ರೋಪಾಲಿಟನ್ ಕೇಂದ್ರಗಳಲ್ಲಿನ ಉದ್ಯೋಗಿಗಳು ಗರಿಷ್ಠ ಸಂಬಳವನ್ನು ಗಳಿಸುತ್ತಾರಂತೆ.
8/ 8
ಹೈಬ್ರಿಡ್ ಮತ್ತು ರಿಮೋಟ್ ವರ್ಕಿಂಗ್ ನಂತಹ ಹೊಸ ಕೆಲಸದ ಸಂಸ್ಕೃತಿಯ ಆಗಮನದೊಂದಿಗೆ, ಅನೇಕ ಕಂಪನಿಗಳು ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಕೇಳುತ್ತಿವೆ. (ಸಾಂಕೇತಿಕ ಚಿತ್ರ)