ಇವರು ದುಡಿದ ಹಣದಿಂದ ಗ್ರಾಮ ಕಳೆದ ಐದು ದಶಕಗಳಿಂದ ಏಳಿಗೆಯಾಗಿದೆ. ಈ ಸಂದರ್ಭದಲ್ಲಿ ಜಯಂತ್ ಭಾಯ್ ಮಾಧಪರಿಯಾ ಮಾತನಾಡಿ, ಈಗ ಗ್ರಾಮ ಬ್ಯಾಂಕ್‌ಗಳಲ್ಲಿ ಒಟ್ಟು 5000 ಕೋಟಿ ರೂಪಾಯಿ ಡೆಪಾಸಿಟ್ ಮಾಡಿದ್ದಾರಂತೆ. 1975ರಲ್ಲಿಯೇ ಗ್ರಾಮ ಅಂಚೆ ಕಚೇರಿಯಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಠೇವಣಿ ಇತ್ತಂತೆ. ಪ್ರಸ್ತುತ ಒಂದು ಲಕ್ಷ ಜನರು ಈ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.