Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

Indian Railways: ನೀವು ಎಂದಾದರೂ ಭಾರತದಲ್ಲಿ ಅತ್ಯಂತ ನಿಧಾನವಾದ ರೈಲನ್ನು ಹತ್ತಿದ್ದಿರಾ? ಭಾರತದ ಅತ್ಯಂತ ನಿಧಾನವಾದ ರೈಲು ಎಂದು ಕರೆಯಲ್ಪಡುವ ರೈಲಿನ ಬಗ್ಗೆ ನಿಮಗೆ ಗೊತ್ತಿದ್ಯಾ? ಈ ರೈಲಿನ ಸ್ಪೀಡ್​ ತಿಳಿದುಕೊಂಡರೇ ನಿಜಕ್ಕೂ ನೀವೂ ಶಾಕ್​ ಆಗ್ತೀರಾ.

First published:

  • 110

    Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

    ವಿಸ್ತಾರವಾದ ರೈಲ್ವೇ ಜಾಲವನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ನಮ್ಮ ದೇಶವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ರೈಲ್ವೆ ಜಾಲ ಮತ್ತು ಸಂಪರ್ಕವನ್ನು ಹೊಂದಿದೆ. ರೈಲ್ವೆ ವ್ಯವಸ್ಥೆಯು ಪ್ರತಿದಿನ ನೂರಾರು ಜನರನ್ನು ಅವರ ಸ್ಥಳಗಳಿಗೆ ಸಾಗಿಸುತ್ತದೆ. ನಮ್ಮಲ್ಲಿ ಹೆಚ್ಚಿನವರು ಒಂದಕ್ಕಿಂತ ಹೆಚ್ಚು ಬಾರಿ ರೈಲಿನಲ್ಲಿ ಪ್ರಯಾಣಿಸಿದ್ದಾರೆ. (PC: ಭಾರತೀಯ ರೈಲ್ವೆ)

    MORE
    GALLERIES

  • 210

    Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

    ಹಳಿಗಳ ಮೇಲೆ ವೇಗವಾಗಿ ಚಲಿಸುವ ರೈಲಿನಲ್ಲಿ ಕುಳಿತು ಕಿಟಕಿಯ ಮೂಲಕ ಜಗತ್ತನ್ನು ನೋಡುವ ಕುತೂಹಲ ಅನೇಕರಿಗೆ ಇರುತ್ತದೆ. ಅದೇ ರೀತಿ ಪಟ್ಟಣದಿಂದ ದೂರ ಓಡುವ ರೈಲಿನ ವಿವರ ತಿಳಿದುಕೊಳ್ಳುವ ಆಸಕ್ತಿಯೂ ಅನೇಕರಿಗೆ ಇದೆ.(PC : ಭಾರತೀಯ ರೈಲ್ವೆ)

    MORE
    GALLERIES

  • 310

    Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

    2019 ರಲ್ಲಿ, ಭಾರತವು ತನ್ನ ಮೊದಲ ಸೆಮಿ-ಹೈ ಸ್ಪೀಡ್ ರೈಲನ್ನು ಪಡೆದುಕೊಂಡಿತು. ಈ ರೈಲಿನ ಗರಿಷ್ಠ ವೇಗ ಗಂಟೆಗೆ 180 ಕಿ.ಮೀ. ಇದರೊಂದಿಗೆ ವಂದೇ ವಂದೇ ಭಾರತ್ ರೈಲು, ಗತಿಮಾನ್ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್, ತೇಜಸ್ ಎಕ್ಸ್‌ಪ್ರೆಸ್ಈ ಎಲ್ಲಾ ರೈಲುಗಳು ವೇಗವಾಗಿ ಓಡುತ್ತವೆ. (PC: ಭಾರತೀಯ ರೈಲ್ವೆ)

    MORE
    GALLERIES

  • 410

    Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

    ಆದರೆ ನೀವು ಎಂದಾದರೂ ಭಾರತದ ಅತ್ಯಂತ ನಿಧಾನವಾದ ರೈಲನ್ನು ಹತ್ತಿದ್ದಿರಾ? ಭಾರತದ ಅತ್ಯಂತ ನಿಧಾನವಾದ ರೈಲು ಎಂದು ಕರೆಯಲ್ಪಡುವ ರೈಲಿನ ಬಗ್ಗೆ ನಿಮಗೆ ತಿಳಿದಿದೆಯೇ? ಅದರ ಸಂಪೂರ್ಣ ವಿವರಗಳು ಇಲ್ಲಿದೆ ನೋಡಿ. (PC: ಭಾರತೀಯ ರೈಲ್ವೆ)

    MORE
    GALLERIES

  • 510

    Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

    ಈ ರೈಲಿನ ವೇಗವನ್ನು ತಿಳಿದರೆ ನೀವು ಖಂಡಿತವಾಗಿಯೂ ಶಾಕ್ ಆಗ್ತೀರಾ. ಈ ರೈಲು ಗಂಟೆಗೆ ಕೇವಲ 10 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಭಾರತದ ಅತ್ಯಂತ ನಿಧಾನಗತಿಯ ರೈಲು ಎಂದು ಹೆಸರಿಸಲಾದ ಈ ರೈಲನ್ನು ಮೆಟ್ಟುಪಾಳ್ಯಂ ಟು ಊಟಿ ನೀಲಗಿರಿ ಪ್ಯಾಸೆಂಜರ್ ರೈಲು ಎಂದು ಕರೆಯಲಾಗುತ್ತದೆ. (PC: ಭಾರತೀಯ ರೈಲ್ವೆ)

    MORE
    GALLERIES

  • 610

    Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

    ಈ ಪ್ರಯಾಣಿಕ ರೈಲು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ನಡುವೆ ನೀಲಗಿರಿ ಜಿಲ್ಲೆಯ ಊಟಿಗೆ ಚಲಿಸುತ್ತದೆ. ಮೆಟ್ಟುಪಾಳ್ಯಂ - ಊಟಿ ನಡುವಿನ ಅಂತರವು ಕೇವಲ 46 ಕಿಮೀ ಆದರೆ ಗಮ್ಯಸ್ಥಾನವನ್ನು ತಲುಪಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. (PC: ಭಾರತೀಯ ರೈಲ್ವೆ)

    MORE
    GALLERIES

  • 710

    Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

    ಇದರ ನಡುವೆ ಕೆಲ್ಲರ್, ಕೂನೂರು, ವೆಲ್ಲಿಂಗ್ಟನ್, ಲವ್‌ಡೇಲ್ ಮತ್ತು ಊಟಕಮಂಡ್ ಎಂಬ ಐದು ರೈಲು ನಿಲ್ದಾಣಗಳಿವೆ. ಗುಡ್ಡಗಾಡು ಪ್ರದೇಶದಲ್ಲಿ ಓಡುವುದರಿಂದ ಅದರ ವೇಗ ಕಡಿಮೆಯಾಗಿ 5 ಗಂಟೆಗಳಲ್ಲಿ ಕೇವಲ 46 ಕಿ.ಮೀ. ಕ್ರಮಿಸುತ್ತೆ. (PC: ಭಾರತೀಯ ರೈಲ್ವೆ)

    MORE
    GALLERIES

  • 810

    Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

    ಭಾರತದ ಅತಿ ವೇಗದ ರೈಲುಗಳಿಗೆ ಹೋಲಿಸಿದರೆ ಇದರ ವೇಗ 18 ಪಟ್ಟು ಕಡಿಮೆ. ಇಷ್ಟು ನಿಧಾನಗತಿಯ ರೈಲಿನಲ್ಲಿ ಯಾರು ಪ್ರಯಾಣಿಸುತ್ತಾರೆ ಎಂದು ನೀವು ಯೋಚಿಸಿದರೆ, ನಿಮ್ಮ ಊಹೆ ತಪ್ಪು. ಏಕೆಂದರೆ ಈ ರೈಲಿಗೆ ಭಾರೀ ಬೇಡಿಕೆ ಇದೆ. ಏಕೆಂದರೆ ಮೆಟ್ಟುಪಾಳ್ಯಂನಿಂದ ಊಟಿಗೆ ರೈಲು ಮಾರ್ಗವು ಎರಡೂ ಬದಿಗಳಲ್ಲಿ ಪ್ರಕೃತಿಯಿಂದ ಆವೃತವಾಗಿದೆ. ನಿಸರ್ಗದ ಸೊಬಗು ಮತ್ತು ನೀಲಗಿರಿ ಬೆಟ್ಟಗಳ ಸೊಬಗನ್ನು ಕಣ್ತುಂಬಿಕೊಳ್ಳಬೇಕೆಂದರೆ ನಿಜವಾದ ಮೋಜು ರೈಲಿನಲ್ಲಿದೆ. (PC: ಭಾರತೀಯ ರೈಲ್ವೆ)

    MORE
    GALLERIES

  • 910

    Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

    ಆದ್ದರಿಂದಲೇ ಊಟಿಗೆ ಹೋಗುವ ಹೆಚ್ಚಿನ ಪ್ರವಾಸಿಗರು ಈ ರೈಲಿನಲ್ಲಿ ಹೋಗಿ ಪ್ರಕೃತಿಯ ಸೊಬಗನ್ನು ಸವಿಯುತ್ತಾರೆ. ಎಲ್ಲಾ ರೈಲುಗಳಂತೆ ಈ ರೈಲು ಕೂಡ ಪ್ರಥಮ ದರ್ಜೆ ಮತ್ತು ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಹೊಂದಿದೆ. ಅನುಕೂಲಕ್ಕೆ ತಕ್ಕಂತೆ ಟಿಕೆಟ್ ಬುಕ್ ಮಾಡಬಹುದು. (PC: ಭಾರತೀಯ ರೈಲ್ವೆ)

    MORE
    GALLERIES

  • 1010

    Indian Railways: ನಮ್ಮ ದೇಶದಲ್ಲಿ ಈ ರೈಲು ತುಂಬಾ ನಿಧಾನ, ಇದರ ವೇಗ ತಿಳಿದುಕೊಂಡ್ರೆ ಪಕ್ಕಾ ನಗ್ತೀರಾ!

    UNESCO ವೆಬ್‌ಸೈಟ್ ಪ್ರಕಾರ ನೀಲಗಿರಿ ಮೌಂಟೇನ್ ರೈಲ್ವೇ 1854 ರಲ್ಲಿ ನಿರ್ಮಾಣವಾಗಬೇಕಿತ್ತು ಆದರೆ ಗುಡ್ಡಗಾಡು ಪ್ರದೇಶಗಳ ಸಮಸ್ಯೆಯಿಂದಾಗಿ ಇದನ್ನು 1891 ರಲ್ಲಿ ಪ್ರಾರಂಭಿಸಲಾಯಿತು. 1908 ರಲ್ಲಿ ಪೂರ್ಣಗೊಳಿಸಲಾಯಿತು. ಯುನೆಸ್ಕೋ ಪ್ರಕಾರ, ಈ ರೈಲು ಹೊಸ ತಂತ್ರಜ್ಞಾನದೊಂದಿಗೆ 326 ಮೀಟರ್‌ಗಳಿಂದ 2,203 ಮೀಟರ್ ಎತ್ತರವನ್ನು ತಲುಪುತ್ತದೆ. ಈ ರೈಲು ಮೆಟ್ಟುಪಾಳ್ಯಂ ರೈಲು ನಿಲ್ದಾಣದಿಂದ ಬೆಳಗ್ಗೆ 7.10ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಊಟಿಗೆ ತಲುಪುತ್ತದೆ. (PC: ಭಾರತೀಯ ರೈಲ್ವೆ)

    MORE
    GALLERIES