ಆಗಾಗ ಫುಡ್ ಸ್ಟಾಲ್ ಗಳಲ್ಲಿ ಜನಜಂಗುಳಿಯನ್ನು ನೋಡಿ ನಮಗೂ ಇಂತಹ ಸ್ಟಾಲ್ ಆರಂಭಿಸಿ ಸಂಪಾದಿಸಬೇಕು ಅನ್ನಿಸುತ್ತದೆ. ಆದರೆ ಎಲ್ಲರೂ ಹಾಗೆ ಮಾಡಲು ಸಾಧ್ಯವಿಲ್ಲ. ಆದರೆ ಪುಣೆಯ ಯುವ ಇಂಜಿನಿಯರ್ ಒಬ್ಬರು ಇದನ್ನು ಮಾಡಿದ್ದಾರೆ. ನಿತಿನ್ ರಾಥೋಡ್ ಎಂಬ ಯುವ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಕಡಿಮೆ ಸಂಬಳದ ಕೆಲಸವನ್ನು ತೊರೆದು ತನ್ನದೇ ಆದ ಫುಡ್ ಸ್ಟಾಲ್ ಪ್ರಾರಂಭಿಸಿದ್ದಾರೆ.
ನಿತಿನ್ ರಾಥೋಡ್ ಕೇವಲ ಐದು ವರ್ಷಗಳಲ್ಲಿ ತನ್ನ ವ್ಯವಹಾರವನ್ನು ರಾಜ್ಯದ ಹೊರಗೆ ತೆಗೆದುಕೊಂಡು ಹೋಗಿದ್ದಾರೆ. ಇಂದು ಅವರು ಪುಣೆಯ ಕೊತ್ರುಡ್, ವಾಕಾಡ್, ಸಾಂಗ್ವಿ, ಅಕುರ್ಡಿ ಮತ್ತು ಕರ್ನಾಟಕದ ಬಿಜಾಪುರದಲ್ಲಿ ಮಳಿಗೆಗಳನ್ನು ಹೊಂದಿದ್ದಾರೆ. ಇದರಿಂದ ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದಾರೆ. ಅಷ್ಟೇ ಅಲ್ಲ ಇಂದು ಈ ಯುವಕ ಸುಮಾರು 45ರಿಂದ 50 ಮಂದಿಗೆ ಉದ್ಯೋಗ ನೀಡಿದ್ದಾರೆ.