ಶಿಕ್ಷಣ ಮತ್ತು ಜ್ಞಾನ ಎರಡಕ್ಕೂ ವ್ಯತ್ಯಾಸವಿದೆ. ಶಿಕ್ಷಣವಿಲ್ಲದವರಿಗೂ ಜ್ಞಾನ, ಅರಿವು ಇರುತ್ತದೆ. ಆದರೆ ಹಣ ಸಂಪಾದಿಸುವುದು ಯಾವ ಶಾಲೆಯೂ ಕಲಿಸದ ಕಲೆ. ಈ ಕಲೆಗೆ ಶಿಕ್ಷಣವಿಲ್ಲದಿದ್ದರೂ ಜ್ಞಾನ, ಪ್ರಪಂಚದ ಅರಿವು, ಆತ್ಮವಿಶ್ವಾಸ, ಧೈರ್ಯ ಇರಬೇಕು. ಈ ಅಂಶಗಳನ್ನೇ ಶಕ್ತಿಯಾಗಿಸಿಕೊಂಡು ಕಾಲೇಜು ಪದವಿ ಪಡೆಯದೇ ಕೋಟ್ಯಾಧಿಪತಿಗಳಾದ ಉದಾಹರಣೆಗಳು ನಮ್ಮ ಭಾರತದಲ್ಲಿವೆ.