Minimum Balance: SBI, HDFC ಸೇರಿ ವಿವಿಧ ಬ್ಯಾಂಕ್​ ಉಳಿತಾಯ ಖಾತೆಗಳಲ್ಲಿ ಮಿನಿಮಮ್​ ಬ್ಯಾಲೆನ್ಸ್​ ಎಷ್ಟಿರಬೇಕು? ತಪ್ಪಿದರೆ ದಂಡ ಎಷ್ಟು?

ಬ್ಯಾಂಕ್​ಗಳಲ್ಲಿ ಖಾತೆಯನ್ನು ತೆರೆಯಬಹುದು ಮತ್ತು ಹಣವನ್ನು ಉಳಿತಾಯ ಮಾಡಬಹುದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ನಮ್ಮ ಖಾತೆಯನ್ನು ನಿರ್ವಹಿಸಲು ನಾವು ಬ್ಯಾಂಕ್‌ಗೆ ಎಷ್ಟು ಹಣವನ್ನು ಪಾವತಿಸಬೇಕಾಗುತ್ತದೆ. ಕೆಲವು ಖಾತೆಗಳಿಗೆ ಈ ಶುಲ್ಕಗಳನ್ನು ಬರಿಸುವ ಅಗತ್ಯವಿಲ್ಲ. ಇದಲ್ಲದೆ ಬ್ಯಾಂಕ್ ಖಾತೆಗಳ ವಿಷಯಕ್ಕೆ ಬಂದರೆ ಯಾವ ರೀತಿಯ ಶುಲ್ಕಗಳಿವೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳಿ.

First published:

  • 17

    Minimum Balance: SBI, HDFC ಸೇರಿ ವಿವಿಧ ಬ್ಯಾಂಕ್​ ಉಳಿತಾಯ ಖಾತೆಗಳಲ್ಲಿ ಮಿನಿಮಮ್​ ಬ್ಯಾಲೆನ್ಸ್​ ಎಷ್ಟಿರಬೇಕು? ತಪ್ಪಿದರೆ ದಂಡ ಎಷ್ಟು?

    ಬ್ಯಾಂಕ್​ಗಳಲ್ಲಿ ಖಾತೆಯನ್ನು ತೆರೆಯಬಹುದು ಮತ್ತು ಹಣವನ್ನು ಉಳಿತಾಯ ಮಾಡಬಹುದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ನಮ್ಮ ಖಾತೆಯನ್ನು ನಿರ್ವಹಿಸಲು ನಾವು ಬ್ಯಾಂಕ್‌ಗೆ ಇಂತಿಷ್ಟು ಹಣವನ್ನು ಪಾವತಿಸಬೇಕಾಗುತ್ತದೆ.  ಇದಲ್ಲದೆ ಬ್ಯಾಂಕ್ ಖಾತೆಗಳ ವಿಷಯಕ್ಕೆ ಬಂದರೆ ಯಾವ ರೀತಿಯ ಶುಲ್ಕಗಳಿವೆ ಎಂಬುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. (ಸಾಂಕೇತಿಕ ಚಿತ್ರ)

    MORE
    GALLERIES

  • 27

    Minimum Balance: SBI, HDFC ಸೇರಿ ವಿವಿಧ ಬ್ಯಾಂಕ್​ ಉಳಿತಾಯ ಖಾತೆಗಳಲ್ಲಿ ಮಿನಿಮಮ್​ ಬ್ಯಾಲೆನ್ಸ್​ ಎಷ್ಟಿರಬೇಕು? ತಪ್ಪಿದರೆ ದಂಡ ಎಷ್ಟು?

    SMS ಅಲರ್ಟ್​, ಡೆಬಿಟ್ ಕಾರ್ಡ್ ಶುಲ್ಕಗಳು, ಖಾತೆಯಲ್ಲಿ ಮಿನಿಮಮ್​ ಬ್ಯಾಲೆನ್ಸ್ ಉಳಿಸದಿದ್ದರೆ ದಂಡದ ರೂಪದ ಶುಲ್ಕಗಳು ಸೇರಿ ವಿವಿಧ ಶುಲ್ಕಗಳಿವೆ. ಈ ಬಗ್ಗೆ ತಿಳಿಯದೇ ಎಷ್ಟೋ ಗ್ರಾಹಕರು ದಂಡ ಪಾವತಿಸುತ್ತಲೇ ಇರುತ್ತಾರೆ. ಮತ್ತು ನೀವು ಈ ತಪ್ಪನ್ನು ಮಾಡದಿರಲು, ಪ್ರಮುಖ ಬ್ಯಾಂಕ್‌ಗಳಲ್ಲಿನ ಸರಾಸರಿ ಮಾಸಿಕ ಬ್ಯಾಲೆನ್ಸ್ ಅಂದರೆ ಕನಿಷ್ಠ ಬ್ಯಾಲೆನ್ಸ್ ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Minimum Balance: SBI, HDFC ಸೇರಿ ವಿವಿಧ ಬ್ಯಾಂಕ್​ ಉಳಿತಾಯ ಖಾತೆಗಳಲ್ಲಿ ಮಿನಿಮಮ್​ ಬ್ಯಾಲೆನ್ಸ್​ ಎಷ್ಟಿರಬೇಕು? ತಪ್ಪಿದರೆ ದಂಡ ಎಷ್ಟು?

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿನ ಮೂಲ ಉಳಿತಾಯ ಖಾತೆಯಲ್ಲಿನ ಸರಾಸರಿ ಮಾಸಿಕ ಮೊತ್ತದ ನಿಯಮಗಳನ್ನು ಮಾರ್ಚ್ 2020 ರಲ್ಲೇ ತೆಗೆದುಹಾಕಲಾಗಿದೆ. ಮೊದಲು ಈ ಮಿತಿಯು ಮೆಟ್ರೋ, ಸೆಮಿ ಅರ್ಬನ್​ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕ್ರಮವಾಗಿ ರೂ.3,000, ರೂ.2,000 ಮತ್ತು ರೂ.1,000 ಇರಲೇಬೇಕಿತ್ತು. ಈ ಬಾಕಿ ಉಳಿಸಿಕೊಳ್ಳದಿದ್ದರೆ ತಿಂಗಳಿಗೆ ರೂ.5 ಅಥವಾ ರೂ.15 ಶುಲ್ಕ ಪಾವತಿಸಬೇಕಾಗಿತ್ತು. ಪ್ರಸ್ತುತ ಎಸ್‌ಬಿಐನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವ ಅಗತ್ಯವಿಲ್ಲ. ಆದರೆ ಮಾಸಿಕ ಸರಾಸರಿ ಬ್ಯಾಲೆನ್ಸ್ 1 ಲಕ್ಷ ರೂ.ಗಳನ್ನು ಕಾಯ್ದುಕೊಳ್ಳುವವರು ಕೆಲವು ಪ್ರಯೋಜನಗಳನ್ನು ಹೊಂದಿರುತ್ತಾರೆ. ಅಂತಹವರು ಎಟಿಎಂಗಳಿಂದ ಪ್ರತಿ ತಿಂಗಳು ಎಷ್ಟು ಬಾರಿ ಬೇಕಾದರೂ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ನೀವು ರೂ.1 ಲಕ್ಷಕ್ಕಿಂತ ಕಡಿಮೆ ಮೊತ್ತವನ್ನು ಹೊಂದಿದ್ದರೆ, ನಿಮಗೆ ನೀಡಲಾದ ಮಿತಿಗಿಂತ ಹೆಚ್ಚಿನ ಹಣವನ್ನು ವಿತ್​ಡ್ರಾ ಮಾಡಿದರೆ ಪ್ರತಿ ವಹಿವಾಟಿಗೆ  ರೂ.21 + GST ​​ಪಾವತಿಸಬೇಕಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Minimum Balance: SBI, HDFC ಸೇರಿ ವಿವಿಧ ಬ್ಯಾಂಕ್​ ಉಳಿತಾಯ ಖಾತೆಗಳಲ್ಲಿ ಮಿನಿಮಮ್​ ಬ್ಯಾಲೆನ್ಸ್​ ಎಷ್ಟಿರಬೇಕು? ತಪ್ಪಿದರೆ ದಂಡ ಎಷ್ಟು?

    ಎಚ್‌ಡಿಎಫ್‌ಸಿ ಬ್ಯಾಂಕ್: ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ರೂ.10,000, ಸೆಮಿ ಅರ್ಬನ್​ ಪ್ರದೇಶಗಳಲ್ಲಿ ರೂ.5,000 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ.2,500 ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ. ಈ ಶುಲ್ಕಗಳು 150 ರಿಂದ 600 ರೂವರೆಗೆ ಇರುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 57

    Minimum Balance: SBI, HDFC ಸೇರಿ ವಿವಿಧ ಬ್ಯಾಂಕ್​ ಉಳಿತಾಯ ಖಾತೆಗಳಲ್ಲಿ ಮಿನಿಮಮ್​ ಬ್ಯಾಲೆನ್ಸ್​ ಎಷ್ಟಿರಬೇಕು? ತಪ್ಪಿದರೆ ದಂಡ ಎಷ್ಟು?

    ಐಸಿಐಸಿಐ ಬ್ಯಾಂಕ್: ಐಸಿಐಸಿಐ ಬ್ಯಾಂಕ್‌ನಲ್ಲಿ ನಿಯಮಿತ ಉಳಿತಾಯ ಖಾತೆದಾರರು ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ರೂ.10,000, ಸೆಮಿ ಅರ್ಬನ್​ ಪ್ರದೇಶಗಳಲ್ಲಿ ರೂ.5,000 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ.2,000 ಸರಾಸರಿ ಮಾಸಿಕ ಬ್ಯಾಲೆನ್ಸ್ ನಿರ್ವಹಿಸಬೇಕು. ಇದಕ್ಕಿಂತ ಕಡಿಮೆಯಾದರೆ ಶುಲ್ಕ ಪಾವತಿಸಬೇಕಾಗುತ್ತದೆ. ಕಡಿಮೆ ಬ್ಯಾಲೆನ್ಸ್ ಇದ್ದರೆ ಶೇ. 6 ರಷ್ಟು ಶುಲ್ಕವನ್ನು ಅದರ ಮೇಲೆ ವಿಧಿಸಲಾಗುತ್ತದೆ. ಅಥವಾ ರೂ.500 ಶುಲ್ಕ ಪಾವತಿಸಬೇಕಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 67

    Minimum Balance: SBI, HDFC ಸೇರಿ ವಿವಿಧ ಬ್ಯಾಂಕ್​ ಉಳಿತಾಯ ಖಾತೆಗಳಲ್ಲಿ ಮಿನಿಮಮ್​ ಬ್ಯಾಲೆನ್ಸ್​ ಎಷ್ಟಿರಬೇಕು? ತಪ್ಪಿದರೆ ದಂಡ ಎಷ್ಟು?

    ಪಂಜಾಬ್ ನ್ಯಾಷನಲ್ ಬ್ಯಾಂಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ರೂ.20,000, ಸೆಮಿ ಅರ್ಬನ್​ ಪ್ರದೇಶಗಳಲ್ಲಿ ರೂ.5,000 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ.2,000 ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್  ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ 400 ರಿಂದ 600 ರೂ.ವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 77

    Minimum Balance: SBI, HDFC ಸೇರಿ ವಿವಿಧ ಬ್ಯಾಂಕ್​ ಉಳಿತಾಯ ಖಾತೆಗಳಲ್ಲಿ ಮಿನಿಮಮ್​ ಬ್ಯಾಲೆನ್ಸ್​ ಎಷ್ಟಿರಬೇಕು? ತಪ್ಪಿದರೆ ದಂಡ ಎಷ್ಟು?

    ಕೊಟಕ್ ಮಹೀಂದ್ರಾ ಬ್ಯಾಂಕ್: ಕೊಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯ ಸರಾಸರಿ ಮಾಸಿಕ ಬ್ಯಾಲೆನ್ಸ್ ಮೆಟ್ರೋ ಪ್ರದೇಶಗಳಲ್ಲಿ ರೂ.10,000 ಮತ್ತು ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ ರೂ.5,000 ಇರಬೇಕು. ಇದಕ್ಕಿಂತ ಕಡಿಮೆ ಬ್ಯಾಲೆನ್ಸ್ ಹೊಂದಿದ್ದರೆ ಶೇಕಡಾ 6 ರಷ್ಟು ಶುಲ್ಕ ವಿಧಿಸಲಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES