Tent Tourism: ಕಡಿಮೆ ಖರ್ಚಲ್ಲಿ ದೂರದ ಪ್ರವಾಸ ಮಾಡ್ಬೇಕಾ? ಹಾಗಾದ್ರೆ ಇಲ್ಲಿದೆ ನೋಡಿ ಒಳ್ಳೆ ಪ್ಯಾಕೇಜ್​

Tent Tourism | ನಿಮಗೆ ಈ ವರ್ಷ ಪ್ರವಾಸಕ್ಕೆ ಹೋಗಲು ಆಸಕ್ತಿ ಇದ್ದು ಎಲ್ಲಿ ಹೋಗಬೇಕು ಎಂಬ ಗೊಂದಲದಲ್ಲಿದ್ದರೆ ಈ ಪ್ಲೇಸ್​ ತುಂಬಾ ಚೆನ್ನಾಗಿರುತ್ತದೆ. ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

First published:

 • 17

  Tent Tourism: ಕಡಿಮೆ ಖರ್ಚಲ್ಲಿ ದೂರದ ಪ್ರವಾಸ ಮಾಡ್ಬೇಕಾ? ಹಾಗಾದ್ರೆ ಇಲ್ಲಿದೆ ನೋಡಿ ಒಳ್ಳೆ ಪ್ಯಾಕೇಜ್​

  1.  ನೀವು ಈ ಬಾರಿ ಎಲ್ಲಿಗಾದರೂ ಪ್ರವಾಸಕ್ಕೆ ಹೋಗಲು ಬಯಸುತ್ತಿದ್ದರೆ ಇಲ್ಲಿದೆ ನೋಡಿ ಉತ್ತಮ ಆಯ್ಕೆ. ನೀವು ಹೈದರಾಬಾದ್​ನ ಈ ಜಾಗಗಳಿಗೆ ಪ್ರವಾಸಕ್ಕೆ ಹೋಗಬಹುದು. ಎಲ್ಲಿಯಾದರೂ ಪ್ರವಾಸಕ್ಕೆ ಹೋಗುವಾಗ ಹೋಟೆಲ್‌ನಲ್ಲಿ ವಸತಿಯನ್ನು ಕಾಯ್ದಿರಿಸುವುದು ಸಾಮಾನ್ಯವಾಗಿದೆ. ಆದರೆ ನೀವು ಇಲ್ಲಿ ಪ್ರವಾಸ್ಕೆ ಹೋಗಲು ಟೆಂಟ್​ ಕಾಯ್ದಿರಿಸಿದರೆ ಸಾಕು.

  MORE
  GALLERIES

 • 27

  Tent Tourism: ಕಡಿಮೆ ಖರ್ಚಲ್ಲಿ ದೂರದ ಪ್ರವಾಸ ಮಾಡ್ಬೇಕಾ? ಹಾಗಾದ್ರೆ ಇಲ್ಲಿದೆ ನೋಡಿ ಒಳ್ಳೆ ಪ್ಯಾಕೇಜ್​

  2. ಇಲ್ಲಿ ತೋರಿಸಿದಂತೆ ಟೆಂಟ್‌ಗಳು ಹೈದರಾಬಾದ್‌ನ ಸಮೀಪದಲ್ಲಿ ಕಾಣಲಿವೆ. ತೆಲಂಗಾಣ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಹೈದರಾಬಾದ್ ಬಳಿಯ ಪ್ರವಾಸಿ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಟೆಂಟ್‌ಗಳನ್ನು ನಿರ್ಮಿಸಲಿದೆ. ಅರಣ್ಯ ಪ್ರದೇಶಗಳ ಸಮೀಪದ ಪ್ರವಾಸಿ ಪ್ರದೇಶಗಳಲ್ಲಿ ಟೆಂಟ್‌ಗಳು ಪ್ರವಾಸಿಗರನ್ನು ಆಕರ್ಷಿಸಲಿವೆ.

  MORE
  GALLERIES

 • 37

  Tent Tourism: ಕಡಿಮೆ ಖರ್ಚಲ್ಲಿ ದೂರದ ಪ್ರವಾಸ ಮಾಡ್ಬೇಕಾ? ಹಾಗಾದ್ರೆ ಇಲ್ಲಿದೆ ನೋಡಿ ಒಳ್ಳೆ ಪ್ಯಾಕೇಜ್​

  3. ಇದಕ್ಕಾಗಿ ತೆಲಂಗಾಣ ಪ್ರವಾಸೋದ್ಯಮವು ಹೈದರಾಬಾದ್‌ನಿಂದ 150 ಕಿಮೀ ವ್ಯಾಪ್ತಿಯಲ್ಲಿರುವ ಪ್ರವಾಸಿ ಪ್ರದೇಶಗಳನ್ನು ಗುರುತಿಸುತ್ತಿದೆ. ತೆಲಂಗಾಣ ಪ್ರವಾಸೋದ್ಯಮವು ಪ್ರಾಥಮಿಕವಾಗಿ ವಿಕಾರಾಬಾದ್‌ನ ಅನಂತಗಿರಿ ಬೆಟ್ಟಗಳಲ್ಲಿ, ನಾಗಾರ್ಜುನ ಸಾಗರದಲ್ಲಿನ ಬುದ್ಧವನಂ ಮತ್ತು ಪಾಲಮುರು ಜಿಲ್ಲೆಯ ಕೆಸಿಆರ್ ಪಾರ್ಕ್‌ನಲ್ಲಿ ಟೆಂಟ್‌ಗಳನ್ನು ಸ್ಥಾಪಿಸುವ ಮೂಲಕ ಪ್ರವಾಸಿಗರಿಗೆ ವಸತಿ ಕಲ್ಪಿಸಲು ಯೋಜನೆ ಮಾಡುತ್ತಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 47

  Tent Tourism: ಕಡಿಮೆ ಖರ್ಚಲ್ಲಿ ದೂರದ ಪ್ರವಾಸ ಮಾಡ್ಬೇಕಾ? ಹಾಗಾದ್ರೆ ಇಲ್ಲಿದೆ ನೋಡಿ ಒಳ್ಳೆ ಪ್ಯಾಕೇಜ್​

  4. ಅಷ್ಟೇ ಅಲ್ಲ ಇನ್ನಷ್ಟು ಪ್ರವಾಸಿ ಸ್ಥಳಗಳೂ ಈ ಪಟ್ಟಿಗೆ ಸೇರಲಿವೆ. ಅವುಗಳಲ್ಲಿ ಪ್ರಮುಖವಾಗಿ ಲಕ್ನಾವರಂ, ಸೋಮಶಿಲಾ ಯೋಜನೆ, ಮಲ್ಲಣ್ಣಸಾಗರ ಇತ್ಯಾದಿ. ಆದರೆ ಈ ಟೆಂಟ್ ಸಿಟಿಯಲ್ಲಿ ಯಾವ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ವಾರಣಾಸಿಯ ಟೆಂಟ್ ಸಿಟಿಯಂತೆಯೇ ಇಲ್ಲಿಯೂ ಟೆಂಟ್ ಗಳು ಇರುವ ಸಾಧ್ಯತೆ ಇದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 57

  Tent Tourism: ಕಡಿಮೆ ಖರ್ಚಲ್ಲಿ ದೂರದ ಪ್ರವಾಸ ಮಾಡ್ಬೇಕಾ? ಹಾಗಾದ್ರೆ ಇಲ್ಲಿದೆ ನೋಡಿ ಒಳ್ಳೆ ಪ್ಯಾಕೇಜ್​

  5. ಕೆಲವು ದಿನಗಳ ಹಿಂದೆ ತೆಲಂಗಾಣ ಪ್ರವಾಸೋದ್ಯಮ ಸಚಿವ ಶ್ರೀನಿವಾಸ್ ಗೌಡ್ ಅವರು ಗಂಗಾನದಿಯ ದಡದಲ್ಲಿ ನಿರ್ಮಿಸಲಾದ ಟೆಂಟ್ ಸಿಟಿಯನ್ನು ಪರಿಶೀಲಿಸಿದ್ದಾರೆ. ಇಲ್ಲಿಯೂ ನಿಖರವಾಗಿ ಅಂತಹ  ಟೆಂಟ್​ ಸ್ಥಾಪಿಸಲು ನಿರ್ಧರಿಸಲಾಗಿದೆ. ತೆಲಂಗಾಣ ಪ್ರವಾಸೋದ್ಯಮವು ಹೈದರಾಬಾದ್ ಬಳಿಯ ಪ್ರವಾಸಿ ಪ್ರದೇಶಗಳಲ್ಲಿ ಟೆಂಟ್‌ಗಳಲ್ಲಿ ವಸತಿ ಒದಗಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಆಶಯವನ್ನು ಹೊಂದಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 67

  Tent Tourism: ಕಡಿಮೆ ಖರ್ಚಲ್ಲಿ ದೂರದ ಪ್ರವಾಸ ಮಾಡ್ಬೇಕಾ? ಹಾಗಾದ್ರೆ ಇಲ್ಲಿದೆ ನೋಡಿ ಒಳ್ಳೆ ಪ್ಯಾಕೇಜ್​

  6. ಈ ಡೇರೆಗಳು ಅಥವಾ ಟೆಂಟ್​ಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳ್ಳಲಿವೆ. ಪ್ರವಾಸಿಗರಿಗೆ ಆರಾಮದಾಯಕ ವಾಸ್ತವ್ಯದ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡಲಾಗುವುದು. ಟೆಂಟ್‌ಗಳ ಒಳಗೆ ಆರಾಮದಾಯಕವಾದ ಹಾಸಿಗೆ ಮತ್ತು ಇತರ ವ್ಯವಸ್ಥೆಗಳಿವೆ. (ಸಾಂಕೇತಿಕ ಚಿತ್ರ)

  MORE
  GALLERIES

 • 77

  Tent Tourism: ಕಡಿಮೆ ಖರ್ಚಲ್ಲಿ ದೂರದ ಪ್ರವಾಸ ಮಾಡ್ಬೇಕಾ? ಹಾಗಾದ್ರೆ ಇಲ್ಲಿದೆ ನೋಡಿ ಒಳ್ಳೆ ಪ್ಯಾಕೇಜ್​

  7. ತೆಲಂಗಾಣ ಪ್ರವಾಸೋದ್ಯಮವು ಟೆಂಟ್‌ಗಳಲ್ಲಿ ಉಳಿಯಲು ಮಾತ್ರವಲ್ಲದೆ ರಾತ್ರಿ ಸಫಾರಿಯನ್ನೂ ಯೋಜಿಸುತ್ತಿದೆ. ಇದಕ್ಕಾಗಿ ಮಹಬೂಬ್‌ನಗರ ಜಿಲ್ಲೆಯಲ್ಲಿ ಕೆಸಿಆರ್ ಅರ್ಬನ್ ಇಕೋ ಟೂರಿಸಂ ಪಾರ್ಕ್ ಅನ್ನು ಆಯ್ಕೆ ಮಾಡಲಾಗಿದೆ. ಉದ್ಯಾನವನವು 2,500 ಎಕರೆಗಳಲ್ಲಿ ಹರಡಿದೆ. 5-6 ಕಿಮೀ ರಾತ್ರಿ ಸಫಾರಿಯನ್ನು ಯೋಜಿಸಬಹುದು. (ಸಾಂಕೇತಿಕ ಚಿತ್ರ)

  MORE
  GALLERIES