ಪ್ರಸ್ತುತ ಯಾವ ಮ್ಯೂಚುವಲ್ ಫಂಡ್ಗಳು ಮಾರುಕಟ್ಟೆಯಲ್ಲಿ ಉತ್ತಮ ಆದಾಯವನ್ನು ನೀಡುತ್ತಿವೆ ಎಂಬುದನ್ನು ಗುರುತಿಸಿ ಹಣವನ್ನು ಹೂಡಿಕೆ ಮಾಡುವುದು ಒಳ್ಳೆಯದು. ಇಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗಳು (ELSS) ಮೂರು ವರ್ಷಗಳ ಅವಧಿಗೆ ಲಭ್ಯವಿದೆ. ಈ ಯೋಜನೆಗಳ ಮೂಲಕ, ಹಣಕಾಸು ವರ್ಷದ ಅಂತ್ಯದ ಮೊದಲು ಹೂಡಿಕೆಗಳ ಮೇಲಿನ ತೆರಿಗೆ ಕಡಿತವನ್ನು ಪಡೆಯಬಹುದು. (ಸಾಂಕೇತಿಕ ಚಿತ್ರ)
Mirae Asset Tax Saver ಮೂರು ವರ್ಷಗಳಲ್ಲಿ 18.2% ರಷ್ಟು ಸಂಯುಕ್ತ ವಾರ್ಷಿಕ ಆದಾಯವನ್ನು ನೀಡುತ್ತದೆ. ಇದು ಸುಮಾರು 10,972 ಕೋಟಿ ರೂ.ಗಳ ಹೂಡಿಕೆಯನ್ನು ಒಳಗೊಂಡಿದೆ. ಮಿರೇ ಅಸೆಟ್ ಟ್ಯಾಕ್ಸ್ ಸೇವರ್ನಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಶೇ.7.8, ಐಸಿಐಸಿಐ ಬ್ಯಾಂಕ್ ಶೇ.7.7, ಇನ್ಫೋಸಿಸ್ ಶೇ.7.4, ರಿಲಯನ್ಸ್ ಇಂಡಸ್ಟ್ರೀಸ್ ಶೇ.5.0, ಆಕ್ಸಿಸ್ ಬ್ಯಾಂಕ್ ಶೇ.4.6 ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.4.1 ಹೊಂದಿದೆ. (ಸಾಂಕೇತಿಕ ಚಿತ್ರ)
IDFC ಟ್ಯಾಕ್ಸ್ ಅಡ್ವಾಂಟೇಜ್ ಫಂಡ್ ಮೂರು ವರ್ಷಗಳಿಂದ 17.5% ರಷ್ಟು ಸಂಯುಕ್ತ ವಾರ್ಷಿಕ ಆದಾಯವನ್ನು ಒದಗಿಸುತ್ತಿದೆ. ಸುಮಾರು 3,583 ಕೋಟಿ ರೂಗಳಷ್ಟು ಹೂಡಿಕೆಯು ಇದರ ಮೇಲಿದೆ. ಇದರಲ್ಲಿ ಹೂಡಿಕೆ ಮಾಡಿದ ಕಂಪನಿಗಳಲ್ಲಿ ಐಸಿಐಸಿಐ ಬ್ಯಾಂಕ್ ಶೇ 8.1, ಇನ್ಫೋಸಿಸ್ ಶೇ 6.8, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 5.4, ಟಾಟಾ ಮೋಟಾರ್ಸ್ ಶೇ 4, ಎಚ್ಡಿಎಫ್ಸಿ ಬ್ಯಾಂಕ್ ಶೇ 3.9 ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇ 3.7. ಪ್ರಮುಖವಾದವು. (ಸಾಂಕೇತಿಕ ಚಿತ್ರ)