ಭಾರತೀಯ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 194B ಅಡಿಯಲ್ಲಿ TDS ಅನ್ನು ಲಾಟರಿಗಳು, ಕಾರ್ಡ್ ಆಟಗಳು, ಟಿವಿ ಕಾರ್ಯಕ್ರಮಗಳು ಇತರ ಆಟಗಳಿಂದ ಗೆದ್ದ ಹಣದ ಮೇಲೆ ವಿಧಿಸಲಾಗುತ್ತದೆ. ವಿಜೇತರಿಗೆ ಪಾವತಿ ಮಾಡುವ ಮೊದಲು TDS ಅನ್ನು ಕಡಿತಗೊಳಿಸಬೇಕಾಗುತ್ತದೆ. 10,000 ಸಾವಿರಕ್ಕಿಂತ ಹೆಚ್ಚಿನ ಬಹುಮಾನದ ಮೇಲೆ 30% TDS ಕಡಿತಗೊಳಿಸಲಾಗುತ್ತದೆ. ಹೆಚ್ಚುವರಿ ಶುಲ್ಕ ಮತ್ತು ಸೆಸ್ ಸೇರಿಸಿದ ನಂತರ TDS 31.2% ಕ್ಕೆ ಏರುತ್ತದೆ.