ಲಾಸ್ಟ್ ಡಚ್‌ಮ್ಯಾನ್ಸ್ ಗೋಲ್ಡ್ ಮೈನ್ ಸುತ್ತಮುತ್ತಲಿನ ಪರಿಸರದಲ್ಲಿ ಇಂತಹ ಮೂಢನಂಬಿಕೆಯೊಂದ ಬಲವಾಗಿದೆ. ಕಥೆಯೊಂದರ ಪ್ರಕಾರ, ಜಾಕೋಬ್ ವಾಲ್ಟ್ ಎಂಬ ಜರ್ಮನ್ ವ್ಯಕ್ತಿ ಅರಣ್ಯ ಪ್ರದೇಶದಲ್ಲಿರುವ ಈ ಸ್ಥಳವನ್ನು ಕಂಡು ಹಿಡಿದನಂತೆ. 1891ರಲ್ಲಿ ಫಿನಿಕ್ಸ್ನಲ್ಲಿ ಸಾಯುವ ಮೊದಲು ಈ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ನಂತರ ಈ ಸ್ಥಳವನ್ನು ಬಹಿರಂಹಗಪಡಿಸಿದ ಎಂದು ವರದಿಯಾಗಿದೆ. (ಚಿತ್ರ: AFP)
ಇತ್ತೀಚೆಗೆ 21 ವರ್ಷದ ರಿಚರ್ಡ್ ಜಾಕೋಬ್ಸನ್ ನಿಗೂಢವಾಗಿ ಸಾವನ್ನಪ್ಪಿದ್ದ. 700 ಅಡಿ ಆಳದ ತಪ್ಪಲಿನಲ್ಲಿ ರಿಚರ್ಡ್ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಟ್ಟದಲ್ಲಿ ಸಿಕ್ಕ ಚಿನ್ನ ಶಾಪಗ್ರಸ್ತವಾಗಿದೆ ಎಂದು ಸ್ಥಳೀಯರು ನಂಬುತ್ತಾರೆ, ಅದಕ್ಕಾಗಿಯೇ ಯಾರಾದರೂ ಅದನ್ನು ಹುಡುಕಲು ಹೋದಾಗ ಅವನು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಎಂಬುವುದು ಸ್ಥಳೀಯರ ನಂಬಿಕೆಯಾಗಿದೆ. (ಸಾಂದರ್ಭಿಕ ಚಿತ್ರ)