ಭಾರತ ವಾಹನ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಮಾರುಕಟ್ಟೆಗೆ ಪ್ರತೀ ವರ್ಷವೂ ಭಿನ್ನ-ವಿಭಿನ್ನ ಮಾಡೆಲ್‌ಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ನಾವು ಕೊಳ್ಳುವ ಕಾರು ನಾಲ್ಕೈದು ವರ್ಷಕ್ಕೆ ಔಟ್ಡೇಟೆಡ್ ಆಗಿಹೋಗುವಷ್ಟು ಹೊಸತನದ ಕಾರುಗಳು ಬರುತ್ತಿರುತ್ತವೆ. ಆದರೆ ಕೆಲ ಕಾರುಗಳಿವೆ, ಇವು ಕೊಳ್ಳಲು ಅಗ್ಗ ಮತ್ತು ಭವಿಷ್ಯದಲ್ಲಿ ಇವು ಒಂದು ರೀತಿಯ ಆ್ಯಂಟಿಕ್ ಪೀಸ್ ಕೂಡ ಆಗಬಹುದು.
ಟಾಟಾ ನ್ಯಾನೋ: ಕಾರು ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಕಾರಣವಾದ ಟಾಟಾ ನ್ಯಾನೋ ಕಡಿಮೆ ಬೆಲೆಯಲ್ಲಿ ಕಾರು ಖರೀದಿ ಮಾಡುವವರ ಕನಸನ್ನು ನನಸು ಮಾಡಿದೆ.ಅಗ್ಗದ ಬೆಲೆಯ ಕಾರಣದಿಂದಾಗಿ ನಗರ ಬಳಕೆಗೆ ಇದು ತುಂಬಾ ಸೂಕ್ತವಾದ ಕಾರಾಗಿತ್ತು. ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಟಾಟಾ ನ್ಯಾನೋಗೆ ಹೆಚ್ಚಿನ ಬೇಡಿಕೆ ಇದೆ. ನ್ಯಾನೋ ದ ಮೊದಲ ಆವೃತ್ತಿಗಳಲ್ಲಿ ಹೆಚ್ಚಿನ ವೈಶಿಷ್ಟ್ಯತೆಗಳು ಇರಲಿಲ್ಲ, ಆದರೆ ನಂತರ ಬಂದ ಕಾರುಗಳ ಮಾದರಿಗಳು ಪವರ್ ವಿಂಡೋಗಳು, ಪವರ್ ಸ್ಟೀರಿಂಗ್ ಮತ್ತು AMT ಗೇರ್‌ಬಾಕ್ಸ್ ಹೊಂದಿದ್ದವು.
ಹಿಂದೂಸ್ತಾನ್ ಮೋಟಾರ್ಸ್ ಅಂಬಾಸಿಡರ್: ಅಂಬಾಸಿಡರ್ ಕಾರು ಈಗ ಅದಾಗ್ಲೇ ಆಂಟಿಕ್ ಫೀಸ್ ಆಗಿ ಉಳಿದಿದೆ. ಈಗಲೂ ಜನ ಈ ಕಾರು ಅಂದರೆ ಖರೀದಿಗೆ ಮುಗಿಬೀಳ್ತಾರೆ. ಭವಿಷ್ಯದಲ್ಲಿ ಸಂಗ್ರಾಹಕರ ಕಾರು ಎಂದು ಎಲ್ಲರಿಗೂ ತಿಳಿದಿರುವ ಕಾರುಗಳಲ್ಲಿ ಇದೂ ಒಂದು. ಇದು ಭಾರತದ ವಾಹನ ಇತಿಹಾಸದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕಾರು. ಈ ಸೆಡಾನ್ ಅನ್ನು ರಾಜಕಾರಣಿಗಳು, ರಾಜತಾಂತ್ರಿಕರು ಬಳಸುತ್ತಿದ್ದರು ಮತ್ತು ಸಮಾಜದಲ್ಲಿ ಸ್ಥಾನಮಾನದ ಸಂಕೇತವಾಗಿ ಬಿಂಬಿಸಲಾಗಿದೆ.
ಹೋಂಡಾ ಸಿಟಿ ಟೈಪ್ 2: ಭಾರತದ ಅನೇಕ ಕಾರು ಪ್ರಿಯರ ನೆಚ್ಚಿನ ಕಾರು ಇದು. ಸೆಡಾನ್ ಮಾರುಕಟ್ಟೆಯಲ್ಲಿ ಅತ್ಯಂತ ವಿಶ್ವಾಸಾರ್ಹ ಸೆಡಾನ್‌ಗಳಲ್ಲಿ ಒಂದಾಗಿದೆ. ಇದು ವಿಭಿನ್ನ ಚಕ್ರಗಳೊಂದಿಗೆ ಬಂದಿತು ಮತ್ತು ಬೂಟ್‌ನಲ್ಲಿ VTEC ಬ್ಯಾಡ್ಜ್ ಅನ್ನು ಸಹ ಹೊಂದಿತ್ತು. ಇದು ಸಾಕಷ್ಟು ಮಾರ್ಪಾಡು ಸಾಮರ್ಥ್ಯವನ್ನು ಹೊಂದಿರುವ ಕಾರಾಗಿದ್ದು, ಕಡಿಮೆ ಬೆಲೆಗೆ ಮಾಲೀಕರು ಈ ಕಾರನ್ನು ಬಿಟ್ಟುಕೊಳ್ಳುವುದು ಸ್ವಲ್ಪ ಕಷ್ಟವೇ ಹೌದು.