Success Story: ಬೌದ್ಧ ಧರ್ಮ ಅರಿಯಲು ಭಾರತಕ್ಕೆ ಬಂದಿದ್ದ ಸ್ವೀವ್ ಜಾಬ್ಸ್, ಇಲ್ಲಿಂದ ವಾಪಸ್ ಹೋದ ಮೇಲೆ ಸ್ಥಾಪಿಸಿದ್ರಂತೆ ಆ್ಯಪಲ್!

Steve Jobs Education: ಯಾವುದೇ ಕಾಲೇಜು ಪದವಿ ಇಲ್ಲದೆಯೇ ಇಷ್ಟು ದೊಡ್ಡ ಕಂಪನಿಯನ್ನು ಕಟ್ಟಿದ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಕಥೆ ನಿಮಗೆ ತಿಳಿದಿದ್ಯಾ? ಸ್ಟೀವ್​ ಜಾಬ್​ ಆ್ಯಪಲ್​ ಕಂಪನಿ ಶುರು ಮಾಡುವುದಕ್ಕೂ ಮುನ್ನ ಭಾರತಕ್ಕೆ ಬಂದಿದ್ದರು. ಇಲ್ಲಿಂದ ವಾಪಸ್ಸಾದ ಬಳಿಕವೇ ಈ ಕಂಪನಿ ಆರಂಭಿಸಿದ್ದರು.

First published:

  • 17

    Success Story: ಬೌದ್ಧ ಧರ್ಮ ಅರಿಯಲು ಭಾರತಕ್ಕೆ ಬಂದಿದ್ದ ಸ್ವೀವ್ ಜಾಬ್ಸ್, ಇಲ್ಲಿಂದ ವಾಪಸ್ ಹೋದ ಮೇಲೆ ಸ್ಥಾಪಿಸಿದ್ರಂತೆ ಆ್ಯಪಲ್!

    'ಗೆಲುವು ಯಾರಪ್ಪನದ್ದಲ, ಯಶಸ್ಸು ಒಬ್ಬನದಲ್ಲ' ಈ ಹಾಡಿನ ಸಾಲುಗಳು ಇಂದು ನಾವು ಇಲ್ಲಿ ಹೇಳುತ್ತಿರುವ ವ್ಯಕ್ತಿಗೆ ಸೂಕ್ತವಾಗಿರುತ್ತೆ ಎಂದರೆ ತಪ್ಪಾಗಲ್ಲ. ಹೌದು, ಮೊಬೈಲ್​ನಿಂದ ಲ್ಯಾಪ್​ಟಾಪ್​ವರೆಗೂ ಹೆಚ್ಚು ಸದ್ದು ಮಾಡ್ತಿರೋ ಕಂಪನಿಯೊಂದಿದೆ ಅಂದರೆ ಅದು ಆ್ಯಪಲ್​ ಕಂಪನಿ. ಇಂದು ಆ್ಯಪಲ್​ ವಿಶ್ವದ ಅತಿದೊಡ್ಡ ಕಂಪನಿಯಾಗಿದೆ.

    MORE
    GALLERIES

  • 27

    Success Story: ಬೌದ್ಧ ಧರ್ಮ ಅರಿಯಲು ಭಾರತಕ್ಕೆ ಬಂದಿದ್ದ ಸ್ವೀವ್ ಜಾಬ್ಸ್, ಇಲ್ಲಿಂದ ವಾಪಸ್ ಹೋದ ಮೇಲೆ ಸ್ಥಾಪಿಸಿದ್ರಂತೆ ಆ್ಯಪಲ್!

    ಪ್ರತಿಯೊಬ್ಬರೂ ಆ್ಯಪಲ್ ಉತ್ಪನ್ನಗಳನ್ನು ಖರೀದಿಸಲು ಬಯಸುತ್ತಾರೆ. ಆದರೆ ಸ್ಟೀವ್ ಜಾಬ್ಸ್ ಅವರ ಗ್ಯಾರೇಜ್‌ನಲ್ಲಿ ಪ್ರಾರಂಭವಾದ ಈ ಕಂಪನಿ ಇಂದು ಈ ಮಟ್ಟಕ್ಕೆ ಬಂದು ತಲುಪಿದೆ ಎಂದರೆ ಇದರ ಹಿಂದೆ ಒಂದು ಶ್ರಮದ ಕಥೆ ಇರಲೇ ಬೇಕು ಅಲ್ವಾ? ನೀವು ಮೊದಲು ಸ್ಟೀವ್ ಜಾಬ್ಸ್ ಬಗ್ಗೆ ತಿಳಿದುಕೊಳ್ಳಬೇಕು.

    MORE
    GALLERIES

  • 37

    Success Story: ಬೌದ್ಧ ಧರ್ಮ ಅರಿಯಲು ಭಾರತಕ್ಕೆ ಬಂದಿದ್ದ ಸ್ವೀವ್ ಜಾಬ್ಸ್, ಇಲ್ಲಿಂದ ವಾಪಸ್ ಹೋದ ಮೇಲೆ ಸ್ಥಾಪಿಸಿದ್ರಂತೆ ಆ್ಯಪಲ್!

    ಸ್ಟೀವ್ ಜಾಬ್ಸ್ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 24 ಫೆಬ್ರವರಿ 1955 ರಂದು ಜನಿಸಿದರು. ಅವರ ತಂದೆ ಸಿರಿಯನ್ ಮುಸ್ಲಿಂ, ಆದರೆ ಅವರನ್ನು ಅಮೇರಿಕನ್ ದಂಪತಿಗಳಾದ ಪಾಲ್ ಮತ್ತು ಕ್ಲಾರಾ ಜಾಬ್ಸ್ ದತ್ತು ಪಡೆದರು.

    MORE
    GALLERIES

  • 47

    Success Story: ಬೌದ್ಧ ಧರ್ಮ ಅರಿಯಲು ಭಾರತಕ್ಕೆ ಬಂದಿದ್ದ ಸ್ವೀವ್ ಜಾಬ್ಸ್, ಇಲ್ಲಿಂದ ವಾಪಸ್ ಹೋದ ಮೇಲೆ ಸ್ಥಾಪಿಸಿದ್ರಂತೆ ಆ್ಯಪಲ್!

    ಸ್ಟೀವ್ ಜಾಬ್ಸ್ ಮೊದಲಿನಿಂದಲೂ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್‌ನಲ್ಲಿ ಉತ್ಸಾಹವನ್ನು ಹೊಂದಿದ್ದರು. ಪೋರ್ಟ್‌ಲ್ಯಾಂಡ್‌ನ ರೀಡ್ ಕಾಲೇಜಿಗೆ ಸೇರಿಸಲಾಗಿತ್ತು. ಆದರೆ ಮೊದಲ ಸೆಮಿಸ್ಟರ್‌ನಲ್ಲೇ ಫೇಲ್ ಆದರು. ಇದಾದ ನಂತರ ವಿಡಿಯೋ ಗೇಮ್ ಕಂಪನಿಯೊಂದರಲ್ಲಿ ಕೆಲಸ ಮಾಡಲು ಆರಂಭಿಸಿದರು.

    MORE
    GALLERIES

  • 57

    Success Story: ಬೌದ್ಧ ಧರ್ಮ ಅರಿಯಲು ಭಾರತಕ್ಕೆ ಬಂದಿದ್ದ ಸ್ವೀವ್ ಜಾಬ್ಸ್, ಇಲ್ಲಿಂದ ವಾಪಸ್ ಹೋದ ಮೇಲೆ ಸ್ಥಾಪಿಸಿದ್ರಂತೆ ಆ್ಯಪಲ್!

    ಆ್ಯಪಲ್ ಕಂಪನಿಯನ್ನು ಪ್ರಾರಂಭಿಸುವ ಮೊದಲು ಸ್ಟೀವ್ ಜಾಬ್ಸ್ ಭಾರತಕ್ಕೆ ಬಂದಿದ್ದರು ಅಂತ ಬಹಳಷ್ಟು ಜನರಿಗೆ ತಿಳಿದಿಲ್ಲ.ಮೊದಲ ಕೆಲಸದಿಂದ ಬಂದ ಹಣವನ್ನು ಉಳಿಸಿ, ಅವರು ಭಾರತಕ್ಕೆ ಬಂದಿದ್ದರು, ಅಲ್ಲಿ ಅವರು ಬೌದ್ಧಧರ್ಮದ ಬಗ್ಗೆ ಅಧ್ಯಯನ ಮಾಡಿದರು.

    MORE
    GALLERIES

  • 67

    Success Story: ಬೌದ್ಧ ಧರ್ಮ ಅರಿಯಲು ಭಾರತಕ್ಕೆ ಬಂದಿದ್ದ ಸ್ವೀವ್ ಜಾಬ್ಸ್, ಇಲ್ಲಿಂದ ವಾಪಸ್ ಹೋದ ಮೇಲೆ ಸ್ಥಾಪಿಸಿದ್ರಂತೆ ಆ್ಯಪಲ್!

    ಇದರ ನಂತರ, 1974 ರಲ್ಲಿ ಅಮೆರಿಕಕ್ಕೆ ಹಿಂತಿರುಗಿ ತಮ್ಮ ಶಾಲಾ ಸ್ನೇಹಿತ ಸ್ಟೀಫನ್ ವೋಜ್ನಿಯಾಕ್ ಅವರೊಂದಿಗೆ ಕಂಪ್ಯೂಟರ್​ಗಳನ್ನು ನಿರ್ಮಿಸಲು ಪ್ರಾರಂಭಿಸಿದರು. ಆರಂಭದಲ್ಲಿ, ತಮ್ಮ ಮನೆಯ ಗ್ಯಾರೇಜ್‌ನಿಂದ ಕೆಲಸ ಮಾಡಿದರು. ಇದರ ನಂತರ, 1976 ರಲ್ಲಿ ಅವರು ಆ್ಯಪಲ್ ಕಂಪನಿಯನ್ನು ಸ್ಥಾಪಿಸಿದರು.

    MORE
    GALLERIES

  • 77

    Success Story: ಬೌದ್ಧ ಧರ್ಮ ಅರಿಯಲು ಭಾರತಕ್ಕೆ ಬಂದಿದ್ದ ಸ್ವೀವ್ ಜಾಬ್ಸ್, ಇಲ್ಲಿಂದ ವಾಪಸ್ ಹೋದ ಮೇಲೆ ಸ್ಥಾಪಿಸಿದ್ರಂತೆ ಆ್ಯಪಲ್!

    ಸ್ಟೀವ್ ಜಾಬ್ಸ್ ಅವರ ಅತ್ಯಂತ ಯಶಸ್ವಿ ಉತ್ಪನ್ನವೆಂದರೆ ಐಫೋನ್. 2007 ರಲ್ಲಿ ಐಫೋನ್‌ನ ಬಿಡುಗಡೆಯೊಂದಿಗೆ, ಇದು ಮೊಬೈಲ್ ಪ್ರಪಂಚವನ್ನು ಬದಲಾಯಿಸಿತು. ಇಂದಿಗೂ ಸಹ ಐಫೋನ್ ಅನ್ನು ವರ್ಗದಲ್ಲಿ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್ ಎಂದು ಪರಿಗಣಿಸಲಾಗಿದೆ. ಐಫೋನ್‌ನ ಯಶಸ್ಸು ಇಂದು ಆ್ಯಪಲ್ ಅನ್ನು ವಿಶ್ವದ ಅತಿದೊಡ್ಡ ಮೌಲ್ಯಮಾಪನ ಕಂಪನಿಯನ್ನಾಗಿ ಮಾಡಿದೆ.

    MORE
    GALLERIES