Mulberry Farming: 20 ವರ್ಷಗಳಲ್ಲಿ ದುಡಿಯಬಹುದಾದ ಹಣವನ್ನು ಒಂದೇ ವರ್ಷದಲ್ಲಿ ಗಳಿಸಲು ಈ ಹಣ್ಣು ಬೆಳೆಯಿರಿ

ಮಲ್ಬೆರಿ ಹಣ್ಣು ರುಚಿಯಷ್ಟೇ ಆರೋಗ್ಯಕರ. ಆಯುರ್ವೇದದಲ್ಲಿ ಮಲ್ಬೆರಿ ಅನೇಕ ಪ್ರಯೋಜನಗಳನ್ನು ಹೊಂದಿದೆ. ಮಲ್ಬೆರಿ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿಂದ ತುಂಬಿದೆ. ಇದು ಅಷ್ಟೇ ಲಾಭದಾಯಕ ಬೆಳೆಯೂ ಹೌದು.

First published:

  • 17

    Mulberry Farming: 20 ವರ್ಷಗಳಲ್ಲಿ ದುಡಿಯಬಹುದಾದ ಹಣವನ್ನು ಒಂದೇ ವರ್ಷದಲ್ಲಿ ಗಳಿಸಲು ಈ ಹಣ್ಣು ಬೆಳೆಯಿರಿ

    ನಮ್ಮ ದೇಶ ಕೃಷಿ ಪ್ರಧಾನ ದೇಶ. ಇಲ್ಲಿನ ಶೇ 70ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿದೆ. ಆದ್ದರಿಂದ ನೀವಿಲ್ಲಿ ಲಾಭಗಳಿಸಬೇಕು ಎಂದರೆ ಕೃಷಿಯೇ ಬೆಸ್ಟ್​.

    MORE
    GALLERIES

  • 27

    Mulberry Farming: 20 ವರ್ಷಗಳಲ್ಲಿ ದುಡಿಯಬಹುದಾದ ಹಣವನ್ನು ಒಂದೇ ವರ್ಷದಲ್ಲಿ ಗಳಿಸಲು ಈ ಹಣ್ಣು ಬೆಳೆಯಿರಿ

    ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಭುಸಾವರ್‌ ಪಟ್ಟಣದವರಾದ ಆಯುಷ್‌ ಜಾತವ್‌ ಜಿಲ್ಲೆಯಾದ್ಯಂತ ಹಿಪ್ಪುನೇರಳೆ ಬೆಳೆಯುತ್ತಿದ್ದಾರೆ. ಹಿಪ್ಪುನೇರಳೆ ಕೃಷಿಯಿಂದ ಶ್ರೀಮಂತರಾಗುತ್ತಿದ್ದು, ವಾರ್ಷಿಕ 20 ಲಕ್ಷ ರೂ ಗಳಿಸುತ್ತಿದ್ದಾರೆ.

    MORE
    GALLERIES

  • 37

    Mulberry Farming: 20 ವರ್ಷಗಳಲ್ಲಿ ದುಡಿಯಬಹುದಾದ ಹಣವನ್ನು ಒಂದೇ ವರ್ಷದಲ್ಲಿ ಗಳಿಸಲು ಈ ಹಣ್ಣು ಬೆಳೆಯಿರಿ

    ಪಾರಂಪರಿಕ ಕೃಷಿಯಲ್ಲಿ ಇಳುವರಿ ಕಡಿಮೆಯಾಗಿದ್ದು, ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ ಎನ್ನುತ್ತಾರೆ ರೈತ ಆಯುಷ್. ಆರು ವರ್ಷಗಳ ಹಿಂದೆ 500ಕ್ಕೂ ಹೆಚ್ಚು ಹಿಪ್ಪುನೇರಳೆ ಗಿಡಗಳಿಗೆ ಆರ್ಡರ್ ಮಾಡಿ ಸಹೋದ್ಯೊಗಿಯ ಸಲಹೆ ಮೇರೆಗೆ ಸುಮಾರು ಮೂರು ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಕೃಷಿ ಆರಂಭಿಸಿದ್ದಾಗಿ ತಿಳಿಸಿದರು.

    MORE
    GALLERIES

  • 47

    Mulberry Farming: 20 ವರ್ಷಗಳಲ್ಲಿ ದುಡಿಯಬಹುದಾದ ಹಣವನ್ನು ಒಂದೇ ವರ್ಷದಲ್ಲಿ ಗಳಿಸಲು ಈ ಹಣ್ಣು ಬೆಳೆಯಿರಿ

    ಹಿಪ್ಪುನೇರಳೆ ಕೃಷಿಯಿಂದ ಇವರ ವಾರ್ಷಿಕ ಆದಾಯ ರೂ.15ರಿಂದ 20 ಲಕ್ಷ. ಸದ್ಯ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಸುತ್ತಮುತ್ತಲಿನ ರೈತರೂ ಇದರ ಕೃಷಿಗೆ ಆಸಕ್ತಿ ತೋರುತ್ತಿದ್ದಾರೆ. 20 ವರ್ಷಗಳಿಂದ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದೇನೆ ಎಂದು ಆಯುಷ್ ಜಾತವ್ ಹೇಳಿದರು. ಇದಲ್ಲದೇ ಬಟ್ಟೆ ಅಂಗಡಿಯನ್ನೂ ನಡೆಸುತ್ತಿದ್ದಾರೆ. ಸಂಸಾರ ಬೆಳೆದಂತೆ ಜವಾಬ್ದಾರಿಗಳೂ ಹೆಚ್ಚತೊಡಗಿದವು. ಅಂತಹ ಪರಿಸ್ಥಿತಿಗಳಲ್ಲಿ, ಕೃಷಿಯ ಆರ್ಥಿಕ ಸ್ಥಿತಿಯು ಹದಗೆಡಲು ಪ್ರಾರಂಭಿಸಿತು.

    MORE
    GALLERIES

  • 57

    Mulberry Farming: 20 ವರ್ಷಗಳಲ್ಲಿ ದುಡಿಯಬಹುದಾದ ಹಣವನ್ನು ಒಂದೇ ವರ್ಷದಲ್ಲಿ ಗಳಿಸಲು ಈ ಹಣ್ಣು ಬೆಳೆಯಿರಿ

    ಇದನ್ನು ಗೆಳೆಯನಿಗೆ ಹೇಳಿದಾಗ ಹಿಪ್ಪುನೇರಳೆ ಕೃಷಿ ಮಾಡುವಂತೆ ಸಲಹೆ ನೀಡಿದರು. ಮಲ್ಬೆರಿ ಮರವನ್ನು ನೆಟ್ಟ ಮೂರು ವರ್ಷಗಳ ನಂತರ, ಅದು ಫಲ ನೀಡಲು ಪ್ರಾರಂಭಿಸುತ್ತದೆ. ಸ್ಥಳೀಯ ಪ್ರದೇಶವಲ್ಲದೆ, ದೇಶದ ವಿವಿಧ ಪ್ರಾಂತ್ಯಗಳಲ್ಲಿ ಈ ಹಣ್ಣುಗಳಿಗೆ ಬೇಡಿಕೆ ಪ್ರಾರಂಭವಾಗಿದೆ. ಹಿಪ್ಪುನೇರಳೆ ಕೃಷಿಯಿಂದ ವಾರ್ಷಿಕ 15 ರಿಂದ 20 ಲಕ್ಷ ರೂಪಾಯಿ ಆದಾಯ ಬರುತ್ತದೆ.

    MORE
    GALLERIES

  • 67

    Mulberry Farming: 20 ವರ್ಷಗಳಲ್ಲಿ ದುಡಿಯಬಹುದಾದ ಹಣವನ್ನು ಒಂದೇ ವರ್ಷದಲ್ಲಿ ಗಳಿಸಲು ಈ ಹಣ್ಣು ಬೆಳೆಯಿರಿ

    ಮಲ್ಬೆರಿ ಹಣ್ಣು ರುಚಿಯಷ್ಟೇ ಆರೋಗ್ಯಕರ. ಆಯುರ್ವೇದದಲ್ಲಿ ಮಲ್ಬೆರಿ ಅನೇಕ ಪ್ರಯೋಜನಗಳನ್ನು ಹೊಂದಿದೆ. ಮಲ್ಬೆರಿ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿಂದ ತುಂಬಿದೆ. ಇದರಲ್ಲಿ ಕಬ್ಬಿಣ, ರೈಬೋಫ್ಲಾವಿನ್, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್, ರಂಜಕ, ಕ್ಯಾಲ್ಸಿಯಂ ಇದೆ.

    MORE
    GALLERIES

  • 77

    Mulberry Farming: 20 ವರ್ಷಗಳಲ್ಲಿ ದುಡಿಯಬಹುದಾದ ಹಣವನ್ನು ಒಂದೇ ವರ್ಷದಲ್ಲಿ ಗಳಿಸಲು ಈ ಹಣ್ಣು ಬೆಳೆಯಿರಿ

    ಅಲ್ಲದೆ, ಇದು ಆಹಾರದ ಫೈಬರ್, ರೆಸ್ವೆರಾಟ್ರೊಲ್, ಆಂಥೋಸಯಾನಿನ್‌ಗಳು, ಲುಟೀನ್ ಮತ್ತು ಇತರ ಅನೇಕ ಪಾಲಿಫಿನಾಲಿಕ್ ಸಂಯುಕ್ತಗಳಂತಹ ಸಾವಯವ ಸಂಯುಕ್ತಗಳನ್ನು ಒಳಗೊಂಡಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಒಣ ಚರ್ಮವನ್ನು ಗುಣಪಡಿಸಲು, ತೂಕ ನಷ್ಟ, ಆರೋಗ್ಯಕರ ಯಕೃತ್ತು, ಆರೋಗ್ಯಕರ ಮೂತ್ರಪಿಂಡಗಳು, ಜೀರ್ಣಕ್ರಿಯೆ ಮತ್ತು ದೃಷ್ಟಿ ಸುಧಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ.

    MORE
    GALLERIES