ಇನ್ನೊಂದು ವಿಷಯವೆಂದರೆ ರೆಸ್ಟೋರೆಂಟ್ನ ಮಾಲೀಕರಾದರೂ ನಿಧಿ ಅವರೂ ಈಗಲೂ ರೆಸ್ಟೋರೆಂಟ್‌ನಲ್ಲಿ ಮಾಸ್ಟರ್ ಶೆಫ್ ಆಗಿ ಕೆಲಸ ಮಾಡುತ್ತಾರೆ. ಈ ರೆಸ್ಟೋರೆಂಟ್‌ನಲ್ಲಿ ಹಲವು ಮಂದಿ ಕೆಲಸ ಮಾಡುತ್ತಿದ್ದರೂ ಪ್ರತಿಯೊಂದು ಖಾದ್ಯಕ್ಕೆ ಫಿನಿಷಿಂಗ್ ಟಚ್ ನಿಧಿ ನೀಡುತ್ತಾರೆ. ನಿಧಿ ತಮ್ಮ ಈ ಸಾಧನೆಯಿಂದ ಸ್ಥಳೀಯವಾಗಿ ಮಾತ್ರವಲ್ಲದೆ, ರಾಜ್ಯದ ಹಲವು ಪ್ರದೇಶದ ಗೃಹಿಣಿಯರಿಗೂ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವವರಿಗೆ ಮಾದರಿಯಾಗಿದ್ದಾರೆ.
ನಿಧಿ ರೆಸ್ಟೋರೆಂಟ್ ಕೇವಲ ಜನರ ಮಾತಿನಿಂದಲೇ ಪಬ್ಲಿಸಿಟಿ ಪಡೆದು ಪ್ರಸಿದ್ಧವಾಗಿದೆ. ಇದಕ್ಕೆಲ್ಲಾ ಕಾರಣ ಆಹಾರದ ಗುಣಮಟ್ಟ. ಊಟ ಚೆನ್ನಾಗಿದ್ದರೆ ಮಾತ್ರ ಯಶಸ್ಸು ಸಿಗುತ್ತದೆ, ಆದ್ದರಿಂದಲೇ ಈ ಉದ್ಯಮದಲ್ಲಿ ನಾನು ಯಶಸ್ವಿಯಾಗಿದ್ದೆನೆ ಎಂದು ನಿಧಿ ಹೇಳಿದರು. ಈ ರೆಸ್ಟೋರೆಂಟ್ ಗುಜರಾತಿ ಮತ್ತು ಪಂಜಾಬಿ ಸೇರಿದಂತೆ ವಿವಿಧ ತಿನಿಸುಗಳನ್ನು ಒದಗಿಸುತ್ತಿದೆ. ನಿಧಿಬೆನ್ ಅವರು ಈ ಇಡೀ ರೆಸ್ಟೋರೆಂಟ್ ಅನ್ನು ಒಬ್ಬರೇ ನಡೆಸುತ್ತಿದ್ದಾರೆ ಎಂಬುದು ಅತ್ಯಂತ ಮುಖ್ಯವಾದ ವಿಷಯ.