Bank News: ಗ್ರಾಹಕರಿಗೆ ಶಾಕ್ ನೀಡಿದ 7 ಬ್ಯಾಂಕ್​ಗಳು

MCLR | ಒಂದಾದ ನಂತರ ಒಂದರಂತೆ ಬ್ಯಾಂಕ್​ಗಳು ತಮ್ಮ ಗ್ರಾಹಕರಿಗೆ ಶಾಕ್ ನೀಡುತ್ತಿವೆ. ಈಗಾಗಲೇ ಹಣದುಬ್ಬರದಿಂದ ಸಂಕಷ್ಟದಲ್ಲಿರುವ ಜನತೆ ಬ್ಯಾಂಕ್​ಗಳು ಶುಲ್ಕ ಏರಿಕೆಯ ಹೊಡೆತವನ್ನು ನೀಡುತ್ತಿವೆ.

First published:

  • 19

    Bank News: ಗ್ರಾಹಕರಿಗೆ ಶಾಕ್ ನೀಡಿದ 7 ಬ್ಯಾಂಕ್​ಗಳು

    Loan EMI | ಆರ್​​ಬಿಐ ರೆಪೋ ದರ ಏರಿಕೆಯಿಂದ ಬ್ಯಾಂಕ್​ಗಳು ಗ್ರಾಹಕರಿಗೆ ಶಾಕ್ ನೀಡಲು ಆರಂಭಿಸಿವೆ. ಸಾಲದ ಮೇಲಿನ ಬಡ್ಡಿದರ, ಕ್ರೆಡಿಟ್ ಕಾರ್ಡ್ ಶುಲ್ಕ ಹೀಗೆ ತಮ್ಮ ಎಲ್ಲಾ ಸೇವೆಗಳ ಮೇಲಿನ ಶುಲ್ಕವನ್ನು ಬ್ಯಾಂಕ್​ಗಳು ಹೆಚ್ಚಳ ಮಾಡಲು ಆರಂಭಿಸಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Bank News: ಗ್ರಾಹಕರಿಗೆ ಶಾಕ್ ನೀಡಿದ 7 ಬ್ಯಾಂಕ್​ಗಳು

    ದೇಶದ ಪ್ರಮುಖ ಬ್ಯಾಂಕ್​ ಆಗಿರುವ ಎಸ್​ಬಿ ಐ ಸಹ ತನ್ನ ಸಾಲದ ದರವನ್ನು ಹೆಚ್ಚಳ ಮಾಡಿದೆ. ಫೆಬ್ರವರಿ 15ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ದರವನ್ನು (MCLR) 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Bank News: ಗ್ರಾಹಕರಿಗೆ ಶಾಕ್ ನೀಡಿದ 7 ಬ್ಯಾಂಕ್​ಗಳು

    ಒಂದೇ ರಾತ್ರಿ ಎಂಸಿಎಲ್​ಆರ್​ ಶೇ.7.5ಕ್ಕೆ ತಲುಪಿತ್ತು. ಒಂದು ತಿಂಗಳ ಎಂಸಿಎಲ್‌ಆರ್ ಮತ್ತು ಆರು ತಿಂಗಳ ಎಂಸಿಎಲ್‌ಆರ್ ಶೇ 8.1ಕ್ಕೆ ಏರಿಕೆಯಾಗಿದೆ. ವಾರ್ಷಿಕ ಎಂಸಿಎಲ್‌ಆರ್ ದರ ಶೇ.8.5ಕ್ಕೆ ತಲುಪಿದೆ. ಎರಡು ವರ್ಷದ ಎಂಸಿಎಲ್‌ಆರ್ ಶೇಕಡ 8.6ಕ್ಕೆ ಮತ್ತು ಮೂರು ವರ್ಷದ ಎಂಸಿಎಲ್‌ಆರ್ ಶೇಕಡ 8.7ಕ್ಕೆ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Bank News: ಗ್ರಾಹಕರಿಗೆ ಶಾಕ್ ನೀಡಿದ 7 ಬ್ಯಾಂಕ್​ಗಳು

    ಇನ್ನು ಯೂನಿಯನ್ ಬ್ಯಾಂಕ್ ಆಫ್​ ಇಂಡಿಯಾ 25 ಬೇಸಿಸ್ ಪಾಯಿಂಟ್​​ ಎಂಸಿಎಲ್​ಆರ್ ದರ ಹೆಚ್ಚಿಸಿದೆ. ಈ ದರಗಳು ಫೆಬ್ರವರಿ 11 ರಿಂದಲೇ ಜಾರಿಗೆ ಬಂದಿದ್ದು, ಸದ್ಯ ಬ್ಯಾಂಕ್​ನ ಎಂಸಿಎಲ್​ಆರ್ ದರ ಶೇ.8.65ರಷ್ಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Bank News: ಗ್ರಾಹಕರಿಗೆ ಶಾಕ್ ನೀಡಿದ 7 ಬ್ಯಾಂಕ್​ಗಳು

    ಬ್ಯಾಂಕ್ ಆಫ್ ಬರೋಡಾ ಕೂಡ ಎಂಸಿಎಲ್ಆರ್ ದರ 5 ಬೇಸಿಸ್ ಪಾಯಿಂಟ್ ಏರಿಕೆಯಾಗಿದೆ. ಫೆಬ್ರವರಿ 12ರಿಂದ ಹೊಸ ದರ ಜಾರಿಗೆ ಬಂದಿದ್ದು, ಸದ್ಯ ಎಂಸಿಎಲ್​ಆರ್ ದರ ಶೇ.8.55ಕ್ಕೆ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Bank News: ಗ್ರಾಹಕರಿಗೆ ಶಾಕ್ ನೀಡಿದ 7 ಬ್ಯಾಂಕ್​ಗಳು

    ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಕೂಡ ಸಾಲದ ದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಬ್ಯಾಂಕ್ ಎಂಸಿಎಲ್‌ಆರ್ ದರವನ್ನು 15 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದರೊಂದಿಗೆ ಬ್ಯಾಂಕ್ ನ ವಾರ್ಷಿಕ ಎಂಸಿಎಲ್ ಆರ್ ದರ ಶೇ.8.45ಕ್ಕೆ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Bank News: ಗ್ರಾಹಕರಿಗೆ ಶಾಕ್ ನೀಡಿದ 7 ಬ್ಯಾಂಕ್​ಗಳು

    ಯುಕೋ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಸಾಲದ ದರವನ್ನು ಹೆಚ್ಚಿಸಿದೆ. ಮತ್ತೊಂದು ಸಾರ್ವಜನಿಕ ವಲಯದ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಸಾಲದ ದರದಲ್ಲಿ ಹೆಚ್ಚಳವನ್ನು ಘೋಷಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Bank News: ಗ್ರಾಹಕರಿಗೆ ಶಾಕ್ ನೀಡಿದ 7 ಬ್ಯಾಂಕ್​ಗಳು

    ಬ್ಯಾಂಕುಗಳು ಸಾಲದ ದರಗಳನ್ನು ಹೆಚ್ಚಿಸುವುದರಿಂದ ಸಾಲಗಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಾಲವನ್ನು ಈಗಾಗಲೇ ತೆಗೆದುಕೊಂಡಿದ್ದರೆ ಮಾಸಿಕ EMI ಗಳು ಹೆಚ್ಚಾಗುತ್ತವೆ. ನೀವು ಹೊಸ ಸಾಲ ಪಡೆಯಲು ಬಯಸಿದರೆ, ನೀವು ಹೆಚ್ಚಿನ ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Bank News: ಗ್ರಾಹಕರಿಗೆ ಶಾಕ್ ನೀಡಿದ 7 ಬ್ಯಾಂಕ್​ಗಳು

    ಸದ್ಯ ರೆಪೋ ದರ ಶೇ.6.5ಕ್ಕೆ ತಲುಪಿದೆ. ಕಳೆದ ವರ್ಷ ಮೇ ತಿಂಗಳಿನಿಂದ ರೆಪೋ ದರವು 250 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಯಾಗಿದೆ. ಹಣದುಬ್ಬರ ತಡೆಯಲು ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES