ಮಂಗಳವಾರದಿಂದ ನೋಟು ಬದಲಾವಣೆಗೆ ಹಾಗೂ ಜಮಾ ಮಾಡುವುದಕ್ಕೆ ಅವಕಾಶ ನೀಡಲಾಗುತ್ತದೆ. ಆರ್‌ಬಿಐನ ನಿರ್ಧಾರದ ಅನ್ವಯ ಸಾರ್ವಜನಿಕರು ಒ೦ದು ದಿನಕ್ಕೆ ಗರಿಷ್ಠ 20 ಸಾವಿರ ರೂಪಾಯಿ , ಅಂದರೆ 10 ನೋಟುಗಳನ್ನು ಇತರೆ ಮುಖಬೆಲೆಯ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ನಿಯಮಗಳಿಗೆ ಒಳಪಟ್ಟು ಖಾತೆದಾರರು ತಮ್ಮ ಖಾತೆಗೆ 2 ಸಾವಿರ ರೂಪಾಯಿ ನೋಟುಗಳನ್ನು ಜಮಾ ಮಾಡಲು ಅವಕಾಶ ನೀಡಿದೆ.