ಸಾಲ ಪಡೆಯಲು ಏನು ಮಾಡಬೇಕು? ಈಗ SBI YONO ಅಪ್ಲಿಕೇಶನ್ ಮೂಲಕ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ನೋಡೋಣ. ಇದಕ್ಕಾಗಿ ಎಸ್ಬಿಐ ಗ್ರಾಹಕರು ಮೊದಲು ಗೂಗಲ್ ಪ್ಲೇ ಸ್ಟೋರ್ನಿಂದ SBI YONO ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳೊಂದಿಗೆ ರಿಜಿಸ್ಟರ್ ಆಗಿ ಮತ್ತು ಲಾಗಿನ್ ಆಗಬೇಕು. ನಂತರ OTP ಹಾಕಿ. ಎಂಪಿನ್ ಸೆಟ್ ಮಾಡಬೇಕು.
ಹೀಗಾಗಿ, ನೀವು ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ, SBI ಒದಗಿಸಿರುವ ಈ ಸೇವೆಗಳನ್ನು ಬಳಸಿಕೊಳ್ಳಬಹುದು. ಇದಲ್ಲದೆ, ಎಸ್ಬಿಐ ಇತರ ಗ್ರಾಹಕರಿಗೆ ಸಾಲ ಸೌಲಭ್ಯವನ್ನು ಸಹ ನೀಡುತ್ತದೆ. ಪೂರ್ವ ಅನುಮೋದಿತ ಸಾಲಗಳನ್ನು ಸಹ ನೀಡುತ್ತಿದೆ. ಈ ಸೌಲಭ್ಯವು ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಇತ್ತೀಚೆಗೆ ಆರ್ಬಿಐ ರೆಪೋ ದರ ಏರಿಕೆ ಮಾಡಿರುವುದರಿಂದ ಬ್ಯಾಂಕ್ಗಳ ಸಾಲದ ದರ ಏರಿಕೆಯಾಗಿರುವುದು ಗೊತ್ತೇ ಇದೆ.