ಪಿಪಿಎಫ್ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ 500 ರೂ.ಗಳಿಂದ ಗರಿಷ್ಠ 1,50,000 ರೂ.ವರೆಗೆ ಉಳಿಸಬಹುದು. ಪ್ರಸ್ತುತ ಪಿಪಿಎಫ್ ಯೋಜನೆಯಲ್ಲಿ ಶೇಕಡಾ 7.1 ಬಡ್ಡಿ ಸಿಗುತ್ತಿದೆ. ಈ ಯೋಜನೆಯಲ್ಲಿ ಉಳಿಸಿದ ಹಣ, ಆ ಹಣದ ಮೇಲಿನ ಬಡ್ಡಿ ಮತ್ತು ಹಿಂಪಡೆಯುವಿಕೆಗೆ ತೆರಿಗೆ ವಿನಾಯಿತಿ ಇದೆ. ನೀವು ಈ ಯೋಜನೆಯಲ್ಲಿ ಗರಿಷ್ಠ 15 ವರ್ಷಗಳವರೆಗೆ ಉಳಿಸಬಹುದು. 15 ವರ್ಷಗಳ ನಂತರ ಹಣದ ಅಗತ್ಯವಿಲ್ಲದಿದ್ದರೆ, ಪಿಪಿಎಫ್ ಖಾತೆ ವಿಸ್ತರಣೆ ಫಾರ್ಮ್ ಅನ್ನು ಸಲ್ಲಿಸುವ ಮೂಲಕ ಯೋಜನೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)
PPFಯೋಜನೆಯನ್ನು ಐದು ವರ್ಷಗಳವರೆಗೆ ಎರಡು ಬಾರಿ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಅಂದರೆ ನೀವು 25 ವರ್ಷಗಳವರೆಗೆ ಈ ಯೋಜನೆಯಲ್ಲಿ ಮುಂದುವರಿಯಬಹುದು. ಒಬ್ಬ ವ್ಯಕ್ತಿಯು 35 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ ಅದನ್ನು 60 ವರ್ಷ ವಯಸ್ಸಿನವರೆಗೆ ಮುಂದುವರಿಸಬಹುದು. ಮೆಚ್ಯೂರಿಟಿಯ ಸಮಯದಲ್ಲಿ 1.03 ಕೋಟಿ ರೂ. ಹಿಂದಿರುಗಿಸಲಾಗುತ್ತದೆ. ಠೇವಣಿ ಮೊತ್ತ 37 ಲಕ್ಷ ರೂ.ಗಳಾಗಿದ್ದರೆ, ಬಡ್ಡಿ 66 ಲಕ್ಷ ರೂ. ಮೆಚ್ಯೂರಿಟಿಯ ಸಮಯದಲ್ಲಿ ಪಡೆದ ಮೊತ್ತಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಬಡ್ಡಿ ಕೂಡ ತೆರಿಗೆ ಮುಕ್ತವಾಗಿದೆ. (ಸಾಂದರ್ಭಿಕ ಚಿತ್ರ)
PPFಯೋಜನೆಯಲ್ಲಿ ಬಡ್ಡಿಯನ್ನು ಪ್ರತಿ ತಿಂಗಳ 1 ರಿಂದ 5 ದಿನಾಂಕದೊಳಗೆ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ನೀವು ಪ್ರತಿ ತಿಂಗಳು 1 ರಿಂದ 5 ತಾರೀಖಿನೊಳಗೆ ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಬೇಕು. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ಪೋಸ್ಟ್ ಆಫೀಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಬ್ಯಾಂಕುಗಳಲ್ಲಿ ಲಭ್ಯವಿದೆ. ನಾಮನಿರ್ದೇಶನ ಸೌಲಭ್ಯ ದೊರೆಯಲಿದೆ. (ಸಾಂದರ್ಭಿಕ ಚಿತ್ರ)