ಕಳೆದ ವಾರ ಶುಕ್ರವಾರ ಆರ್‌ಬಿಐ ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳ ಒಟ್ಟು ಮೌಲ್ಯ 3.62 ಲಕ್ಷ ಕೋಟಿ ರೂಪಾಯಿ ಎಂದು ಹೇಳಿತ್ತು. ಇದು ಮಾರುಕಟ್ಟೆಯಲ್ಲಿನ ಒಟ್ಟು ಕರೆನ್ಸಿಯ ಶೇಕಡಾ 10.8 ಮಾತ್ರ. ಮತ್ತೊಂದೆಡೆ, ಸುಮಾರು 5 ವರ್ಷಗಳ ಹಿಂದೆ, ಮಾರ್ಚ್ 31, 2018 ರಂತೆ ಚಲಾವಣೆಯಲ್ಲಿರುವ 2000 ರೂ ನೋಟುಗಳ ಮೌಲ್ಯ 6.73 ಲಕ್ಷ ಕೋಟಿ ರೂ. ಆಗ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಶೇಕಡ 30ಕ್ಕಿಂತ ಹೆಚ್ಚಿತ್ತು.(ಸಾಂಕೇತಿಕ ಚಿತ್ರ)