ಸಾಮಾನ್ಯ ಜನರಿಂದ ಹಿಡಿದು ಉದ್ಯಮಿಗಳವರೆಗೆ ಈ ಬಜೆಟ್ ಮೇಲೆ ಹಲವು ನಿರೀಕ್ಷೆಗಳನ್ನು ಇರಿಸಲಾಗಿತ್ತು. ರಾಯಿಟರ್ಸ್ ಸಮೀಕ್ಷೆ ನಡೆಸಿದ ಅರ್ಥಶಾಸ್ತ್ರಜ್ಞರು ಈ ಬಜೆಟ್ ನಂತರ ಆರ್‌ಬಿಐ ರೆಪೊ ದರವನ್ನು ಪರಿಷ್ಕರಿಸುತ್ತದೆ. ಅದನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ಹೆಚ್ಚಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರೊಂದಿಗೆ ಬಡ್ಡಿ ದರ ಶೇ.6.50ಕ್ಕೆ ಏರಿಕೆಯಾಗಲಿದೆ.
* ರೆಪೊ ದರ 25 ಬೇಸಿಸ್ ಪಾಯಿಂಟ್: ರಾಯಿಟರ್ಸ್ ಸಮೀಕ್ಷೆಯಲ್ಲಿ ಒಟ್ಟು 52 ಅರ್ಥಶಾಸ್ತ್ರಜ್ಞರು ಭಾಗವಹಿಸಿದ್ದರು. ಈ ಪೈಕಿ 40 ಮಂದಿ ಆರ್‌ಬಿಐ ಪ್ರಮುಖ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಿದ್ದು, ಇದು ರೆಪೊ ದರವನ್ನು ಶೇ.6.50ಕ್ಕೆ ಹೆಚ್ಚಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ರೆಪೊ ದರದಲ್ಲಿ ಆರ್ ಬಿಐ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಇತರ 12 ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
* ರೆಪೊ ದರ ಹೆಚ್ಚಾದರೆ ಪರಿಣಾಮ: ಆರ್ ಬಿಐ ರೆಪೊ ದರ ಹೆಚ್ಚಿಸಿದರೆ ನಿಶ್ಚಿತ ಠೇವಣಿ ಮತ್ತು ಸಾಲದ ಮೇಲಿನ ಬಡ್ಡಿ ದರಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರ್‌ಬಿಐ ನೀತಿ ಫಲಿತಾಂಶಗಳಿಗೆ ಅನುಗುಣವಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮೇ ತಿಂಗಳಿನಿಂದ ತಮ್ಮ ಎಫ್‌ಡಿ ದರಗಳನ್ನು ಹೆಚ್ಚಿಸಿವೆ. ಮತ್ತೊಂದೆಡೆ, ಬ್ಯಾಂಕ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು ನೀಡುವ ಸಾಲದ ಮೇಲಿನ ಬಡ್ಡಿ ದರವೂ ಹೆಚ್ಚಾಗುತ್ತದೆ.
* ರೆಪೋ ದರ ಎಂದರೇನು? : ಬ್ಯಾಂಕ್‌ಗಳಿಗೆ ನೀಡುವ ಅಲ್ಪಾವಧಿ ನಿಧಿಗಳ ಮೇಲೆ ಆರ್‌ಬಿಐ ವಿಧಿಸುವ ಬಡ್ಡಿ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ಬ್ಯಾಂಕುಗಳು MCLR ಆಧರಿಸಿ ವಿವಿಧ ರೀತಿಯ ಗ್ರಾಹಕರಿಗೆ ಬಡ್ಡಿದರಗಳನ್ನು ನಿರ್ಧರಿಸಬೇಕು. ರೆಪೊ ದರ ಮತ್ತು ಇತರ ಸಾಲದ ದರಗಳನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್‌ಗಳು ಮಾಸಿಕ ಆಧಾರದ ಮೇಲೆ MCLR ಅನ್ನು ಪರಿಷ್ಕರಿಸುತ್ತವೆ.