ಎನ್ ಎಸ್ ಇ ನಿಫ್ಟಿ 391.50 ಪಾಯಿಂಟ್ ಅಥವಾ 2.29 ರಷ್ಟು ಕುಸಿದು 16,677.60ರಲ್ಲಿ ಕೊನೆಗೊಂಡಿತು. ನಿಫ್ಟಿ ಬ್ಯಾಂಕ್ 899.20 ಅಂಕಗಳ ನಷ್ಟದೊಂದಿಗೆ 35,264.55ಕ್ಕೆ ಕೊನೆಗೊಂಡಿತು. ಬುಧವಾರ ಎನ್ ಎಸ್ ಇಯಲ್ಲಿ 2,454 ಷೇರುಗಳು ಕುಸಿದವು. 825 ಷೇರುಗಳು ಏರಿದವು. ಅಪೊಲೊ ಹಾಸ್ಪಿಟಲ್ಸ್, ಅದಾನಿ ಪೋರ್ಟ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್ ಸರ್ವ್ ಹೆಚ್ಚು ನಷ್ಟ ಅನುಭವಿಸಿವೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣದುಬ್ಬರವನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಭೌಗೋಳಿಕ ರಾಜಕೀಯ ಒತ್ತಡವು ಹಣದುಬ್ಬರವನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದರು, "ಜಾಗತಿಕ ಆರ್ಥಿಕ ಚೇತರಿಕೆಯು ವೇಗವನ್ನು ಕಳೆದುಕೊಳ್ಳುತ್ತಿದೆ" ಎಂದರು.