ಮೆಹಂದಿ ಶಾಸ್ತ್ರದಲ್ಲಿ ರಾಧಿಕಾ ಮರ್ಚೆಂಟ್ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಸೂತಿ ಹೂವಿನ ಬೂಟಿಗಳು ಮತ್ತು ಸಣ್ಣ ಕನ್ನಡಿಗಳೊಂದಿಗೆ, ಬಹು-ಬಣ್ಣದ ರೇಷ್ಮೆ ಬಟ್ಟೆಗಳಿಂದ ಈ ಲೆಹೆಂಗಾವನನ್ನು ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ್ದಾರೆ. ಇನ್ನೂ ಈ ಲೆಹೆಂಗಾದಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಮರ್ಚೆಂಟ್ ಅವರನ್ನು ನೋಡಲು ಎರಡು ಕಣ್ಣು ಸಾಲದು ಎಂದೇ ಹೇಳಬಹುದು.
ಮೆಹಂದಿ ಸಮಾರಂಭದ ವೇದಿಕೆಯನ್ನು ನೀಲಿ, ಗುಲಾಬಿ ಮತ್ತು ಹಳದಿ ಬಣ್ಣದ ಮಾರಿಗೋಲ್ಡ್ ಹೂವುಗಳಿಂದ ಅಲಂಕರಿಸಲಾಗಿತ್ತು. ಸಮಾರಂಭಕ್ಕಾಗಿ, ಬಹಿರಂಗಪಡಿಸದ ಸ್ಥಳವನ್ನು ನೀಲಿಬಣ್ಣದ ಗುಲಾಬಿ ಮತ್ತು ಹಳದಿ ಛಾಯೆಗಳಲ್ಲಿ ಚೆಂಡು ಹೂವುಗಳಿಂದ (ಮಾರಿಗೋಲ್ಡ್) ಅಲಂಕರಿಸಲಾಗಿತ್ತು. ಅಲ್ಲದೇ ಮೆಹಂದಿ ಶಾಸ್ತ್ರದಲ್ಲಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿರುವ ರಾಧಿಕಾ ಅವರ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಳೆದ ತಿಂಗಳು ಅನಂತ್ ಅಂಬಾನಿ ತಮ್ಮ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್ ಜಿ ದೇವಸ್ಥಾನದಲ್ಲಿ ನಡೆದಿತ್ತು. ಅನಂತ್ ಮತ್ತು ರಾಧಿಕಾ ಲವ್ ಬಗ್ಗೆ ಹಲವು ಊಹಾಪೋಹಗಳು ಇದ್ದವು. ಆದರೆ ಡಿಸೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಇದೀಗ ಹಸೆಮಣೆ ಏರುತ್ತಿರುವ ಈ ಜೋಡಿ ಗಾಸಿಪ್ಗಳಿಗೆ ಬ್ರೇಕ್ ಹಾಕಿದ್ದಾರೆ.