Qatar Airways: ಈಕೆ ಇಷ್ಟು ದಪ್ಪ ಇರೋದೇ ತಪ್ಪಾ? ಮಾಡೆಲ್ ಅಂದ್ರೂ ವಿಮಾನ ಹತ್ತೋಕೆ ಬಿಡದ ಕತಾರ್ ಏರ್ವೇಸ್!
ಕತಾರ್ ಏರ್ವೇಸ್ ಪ್ಲಸ್ ಸೈಜ್ ಇರುವವರನ್ನು ತಮ್ಮ ವಿಮಾನಗಳಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ಯಂತೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮನುಷ್ಯ ಅಂದಮೇಲೆ ದಪ್ಪಗಾಗೋದು ಸಜಹ, ಸಣ್ಣಗಾಗೋದು ಸಹಜ. ಕೆಲವರು ಕೆಲ ಆರೋಗ್ಯ ಸಮಸ್ಯೆಯಿಂದ ದಪ್ಪಗಿರೋದನ್ನು ನಾವು ನೋಡಿದ್ದೇವೆ. ಆದರೆ, ಇನ್ಮುಂದೆ ನೀವು ಪ್ಲಸ್ ಸೈಜ್ ಇದ್ದರೆ ಈ ವಿಮಾನ ಹತ್ತುವಂತಿಲ್ಲ.
2/ 8
ಹೌದು, ಕತಾರ್ ಏರ್ವೇಸ್ ಪ್ಲಸ್ ಸೈಜ್ ಇರುವವರನ್ನು ತಮ್ಮ ವಿಮಾನಗಳಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ಯಂತೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
3/ 8
ಬ್ರೆಜಿಲಿಯನ್ ಮಾಡೆಲ್ವೊಬ್ಬರಿಗೆ ಈ ಅನುಭವವಾಗಿದ್ಯಂತೆ. ಇಂಡಿಪೆಂಡೆಂಟ್ ಪ್ರಕಾರ, 38 ವರ್ಷದ ಬ್ರೆಜಿಲಿಯನ್ ಮಾಡೆಲ್ ಜೂಲಿಯಾನಾ ನೆಹ್ಮೆ ಅವರಿಗೆ ನವೆಂಬರ್ 22ರಂದು ಈ ಘಟನೆ ನಡೆದಿದೆ.
4/ 8
ತನ್ನ ತೂಕದ ಕಾರಣದಿಂದ ಕತಾರ್ ತಮ್ಮ ವಿಮಾನದಲ್ಲಿ ಹತ್ತಿಸಲಿಲ್ಲ ಎಂದು ಹೇಳಿದ್ದಾರೆ. ನೆಹ್ಮೆ ಅವರನ್ನು ಎಕಾನಮಿ ಕ್ಲಾಸ್ ಟಿಕೆಟ್ ತೆಗೆದು ಕೊಳ್ಳದಿರುವಂತೆ ಸಿಬ್ಬಂದಿ ಹೇಳಿದ್ದಾರಂತೆ.
5/ 8
ಬುಸಿನೆಸ್ ಕ್ಲಾಸ್ ಟಿಕೆಟ್ ತೆಗೆದುಕೊಂಡರೇ ಮಾತ್ರ ವಿಮಾನದಲ್ಲಿ ಪ್ರಯಾಣಿಸಬಹುದು ಎಂದ ಕತಾರ್ ಏರ್ವೇಸ್ ಸಿಬ್ಬಂದಿ ಹೇಳಿದರು ಎಂದು ನೆಹ್ಮೆ ಆರೋಪಿಸಿದ್ದಾರೆ. 3000 ಸಾವಿರ ಡಾಲರ್ ಬೆಲೆಯ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದರಂತೆ.
6/ 8
ಮೊದಲೆ ಸಾವಿರ ಡಾಲರ್ ಕೊಟ್ಟು ನೆಹ್ಮೆ ಎಕಾನಮಿ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ನನ್ನ ತೂಕ ನೋಡಿ ನಂತರ ಅವರು ಈ ರೀತಿ ಮಾಡಿದ್ದಾರೆ ಅಂತ ನೆಹ್ಮೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
7/ 8
ಇದೆಂಥಾ ನಾಚಿಕೆಗೇಡಿನ ಕೃತ್ಯ. ಹೇಳಿಕೊಳ್ಳುವುದಕ್ಕೆ ಮಾತ್ರ ಇದು ಜಗತ್ತಿನ ದೊಡ್ಡ ಏರ್ವೇಸ್. ಮಾಡುವುದೆಲ್ಲ ಸಣ್ಣ ಬುದ್ಧಿ ಎಂದು ನೆಹ್ಮೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
8/ 8
ಕೊನೆಗೆ ನೆಹ್ಮೆ ಈ ಬಗ್ಗೆ ದೂರು ಸಹ ನೀಡಿದ್ದರಂತೆ. ಕೋರ್ಟ್ನಲ್ಲಿ ವಿಚಾರಣೆ ನಡೆಸಿ ಕತಾರ್ ಏರ್ವೇಸ್ ಈಕೆಗೆ 3718 ಡಾಲರ್ ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದೆ. ಆದರೆ, ಕತಾರ್ ಏರ್ವೇಸ್ ಇವರ ಬಳಿ ಕೋವಿಡ್ ನೆಗೆಟಿವ್ ರಿಪೋರ್ಟ್ ಇರಲಿಲ್ಲ. ಅದಕ್ಕೆ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ದೇವು ಎಂದು ಹೇಳಿದೆ.