ಭಲಾ ರಾಮ್ ನಾಗಾಲ್ಯಾಂಡ್ ಡಿಯರ್ 500 ಮಾಸಿಕ ಲಾಟರಿಯ ಮೊದಲ ಬಹುಮಾನವನ್ನು ಗೆದ್ದಿದ್ದಾರೆ. 33 ವರ್ಷಗಳ ನಂತರ 9 ಎಕರೆ ಜಮೀನು ಹೊಂದಿರುವ ಭಲಾ ರಾಮ್, ಇಷ್ಟು ದೊಡ್ಡ ಬಹುಮಾನ ಗೆದ್ದ ಖುಷಿಗೆ ಪಾರವೇ ಇಲ್ಲ. ಲಾಟರಿಯಲ್ಲಿ ಬಂದ ಹಣದಲ್ಲಿ ತನ್ನ ಇಬ್ಬರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದಾಗಿ ಹೇಳಿದ್ದಾರೆ. ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. (ಸಾಂಕೇತಿಕ ಚಿತ್ರ)
ಭಲಾ ರಾಮ್ ಇದುವರೆಗೆ ಲಾಟರಿ ಗೆದ್ದಿರುವುದು ಇದು ಮೂರನೇ ಬಾರಿ. ಇದರಲ್ಲಿ ಅವರು ಒಮ್ಮೆ ರೂ. 2,000 ಮತ್ತು ಎರಡನೇ ಬಾರಿ ರೂ. 50,000 ಬಹುಮಾನ ಗೆದ್ದಿದ್ರು. ಇದೀಗ ಮೂರನೇ ಬಾರಿಗೆ ಲಕ್ಷಾಧಿಪತಿಯಾಗಿದ್ದಾರೆ. ವಿಶೇಷವೆಂದರೆ ಡ್ರಾ ನಡೆದು ನಾಲ್ಕು ದಿನ ಕಳೆದರೂ ಭಾಲಾ ರಾಮ್ ಅವರಿಗೆ 2.5 ಕೋಟಿ ಲಾಟರಿ ಗೆದ್ದಿದ್ದು ಗೊತ್ತೇ ಇರಲಿಲ್ವಂತೆ. ಲಾಟರಿ ಮಾರಾಟದ ಏಜೆಂಟ್ ಕೂಡ ಅವರನ್ನು ಹುಡುಕುತ್ತಿದ್ದರು. (ಸಾಂಕೇತಿಕ ಚಿತ್ರ)