ಪ್ರಸ್ತುತ ಹವಾಮಾನದಲ್ಲಿನ ನಿರಂತರ ಬದಲಾವಣೆಯಿಂದಾಗಿ ದೇಶದ ಅನೇಕ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ರೈತರಿಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆದ್ದರಿಂದ ಈ ಸಮಯದಲ್ಲಿ ರೈತರು ತಾವು ಯಾವ ಬೆಳೆ ಬಿತ್ತುತ್ತಿದ್ದಾರೆ ಎಂಬುದರ ಬಗ್ಗೆ ವಿಶೇಷ ಗಮನ ಹರಿಸಬೇಕು. ಉತ್ತಮ ಇಳುವರಿ ಪಡೆಯಲು ಸರಿಯಾದ ಸಮಯದಲ್ಲಿ ಬೀಜಗಳನ್ನು ಬಿತ್ತಬೇಕು. (ಸಾಂಕೇತಿಕ ಚಿತ್ರ)
ಹಸಿ ಮೆಣಸಿನಕಾಯಿಯನ್ನು ಖಂಡಿತವಾಗಿಯೂ ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ. ಹೀಗಾಗಿ ಹಸಿ ಅಥವಾ ಹಸಿರು ಮೆಣಸಿಕಾಯಿಗೆ ಯಾವಾಗಲೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ರೈತರು ಈ ಬೆಳೆ ಬೆಳೆಯಲು ಸುಧಾರಿತ ಪ್ರಬೇಧಗಳಾದ - ಪುಸಾ ಜ್ವಾಲಾ, RCH1, X235, ಪ್ಯಾಂಟ್ C-1, G3, G5, ಹಂಗೇರಿಯನ್ ವ್ಯಾಕ್ಸ್ (ಹಳದಿ), ಪುಸಾ ಸದಾಬಹರ್, ಪ್ಯಾಂಟ್ C-2, ಜವಾಹರ್ 218 , L AC206 ಬಳಸಬಹುದು