SCSS: ಅಂಚೆ ಕಚೇರಿಯ ಈ ಯೋಜನೆಯಿಂದ 4 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

Small Saving Schemes | ನೀವು ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದೀರಾ? ಇಂದು ನಾವು ನಿಮಗೆ ಒಳ್ಳೆಯ ಯೋಜನೆ ಬಗ್ಗೆ ಹೇಳುತ್ತಿದ್ದೇವೆ. ಈ ಯೋಜನೆಯಲ್ಲಿ ನಿಮಗೆ ಬಡ್ಡಿ ರೂಪದಲ್ಲಿಯೇ 4 ಲಕ್ಷ ರೂಪಾಯಿ ಸಿಗಲಿದೆ.

First published:

  • 19

    SCSS: ಅಂಚೆ ಕಚೇರಿಯ ಈ ಯೋಜನೆಯಿಂದ 4 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

    Senior Citizen Savings Scheme | ಕೈಯಲ್ಲಿ ಹಣ ಇದೆಯಾ? ಅದನ್ನು ಎಲ್ಲಿ ಹೂಡಿಕೆ ಮಾಡಬೇಕು ಅಂತ ಗೊಂದಲ ಇದೆಯಾ? ಸ್ಟಾಕ್ ಮಾರ್ಕೆಟ್, ಮ್ಯೂಚುವಲ್ ಫಂಡ್, ರಿಯಲ್ ಎಸ್ಟೇಟ್ ಹೀಗೆ ಹಲವು ವಿಧಗಳಲ್ಲಿ ಹಣ ಹೂಡಿಕೆ ಮಾಡಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    SCSS: ಅಂಚೆ ಕಚೇರಿಯ ಈ ಯೋಜನೆಯಿಂದ 4 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

    ಆದರೆ ಇವುಗಳಲ್ಲಿ ಯಾವ ಹೂಡಿಕೆ ಸುರಕ್ಷಿತ ಎಂಬುದರ ಬಗ್ಗೆ ಬಹುತೇಕರಿಗೆ ತಿಳಿದಿರಲ್ಲ. ನೀವು ಅಪಾಯ ಮುಕ್ತ ಹೂಡಿಕೆ ಮಾಡಲು ಬಯಸಿದ್ರೆ ಅಂಚೆ ಕಚೇರಿಯ ಒಂದು ಯೋಜನೆ ನಿಮಗೆ ಉತ್ತಮವಾಗಿದೆ. ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    SCSS: ಅಂಚೆ ಕಚೇರಿಯ ಈ ಯೋಜನೆಯಿಂದ 4 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

    ಅಂಚೆ ಕಚೇರಿಯಲ್ಲಿರುವ ಹಲವು ಯೋಜನೆಗಳಿದ್ದು, ಇವುಗಳಲ್ಲಿ ಉಳಿತಾಯ ಅಪಾಯ ಮುಕ್ತವಾಗಿರುತ್ತದೆ. ಅದರಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಸಹ ಒಂದಾಗಿದೆ. ಇಂದು ನಾವು ನಿಮಗೆ ಈ ಯೋಜನೆ ಬಗ್ಗೆ ಹೇಳಲಿದ್ದೇವೆ. ಈ ಯೋಜನೆಯಲ್ಲಿ ಬಡ್ಡಿಯೇ ನಾಲ್ಕು ಲಕ್ಷ ರೂ ಸಿಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    SCSS: ಅಂಚೆ ಕಚೇರಿಯ ಈ ಯೋಜನೆಯಿಂದ 4 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

    ಪ್ರಸ್ತುತ ಈ ಯೋಜನೆಯಲ್ಲಿ 30 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಮೊದಲು ಈ ಮಿತಿ ರೂ. 15 ಲಕ್ಷದವರೆಗೂ ಇತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಬಜೆಟ್‌ನಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    SCSS: ಅಂಚೆ ಕಚೇರಿಯ ಈ ಯೋಜನೆಯಿಂದ 4 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

    ಪೋಸ್ಟ್ ಆಫೀಸ್ ವೆಬ್‌ಸೈಟ್ ಪ್ರಕಾರ, ಹಿರಿಯ ನಾಗರಿಕ ಉಳಿತಾಯ ಯೋಜನೆಯ ಮುಕ್ತಾಯ ಅವಧಿಯು ಐದು ವರ್ಷಗಳು. ಅಂದರೆ ನೀವು ಖಾತೆಯನ್ನು ತೆರೆದಾಗಿನಿಂದ ಐದು ವರ್ಷಗಳವರೆಗೆ ಯೋಜನೆಯು ಮುಂದುವರಿಯುತ್ತದೆ. ಈ ಯೋಜನೆಯ ಬಡ್ಡಿ ದರವು ಜನವರಿ 1, 2023 ರಿಂದ ಶೇಕಡಾ 8 ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    SCSS: ಅಂಚೆ ಕಚೇರಿಯ ಈ ಯೋಜನೆಯಿಂದ 4 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

    ಈ ಯೋಜನೆ ಹಿರಿಯ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ. ನೀವು ಈ ಯೋಜನೆಯಲ್ಲಿ 10 ಲಕ್ಷ ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿದರೆ, ಪ್ರಸ್ತುತ ಬಡ್ಡಿ ದರದ ಪ್ರಕಾರ, ಮೆಚ್ಯೂರಿಟಿ ಸಮಯದಲ್ಲಿ ರೂ. 14 ಲಕ್ಷ ಕೈಗೆ ಬರುತ್ತದೆ. ಅಂದರೆ ಬಡ್ಡಿಯ ರೂಪದಲ್ಲಿ ರೂ. 4 ಲಕ್ಷ ಬರಲಿದೆ. ಅಂದರೆ ಪ್ರತಿ ತ್ರೈಮಾಸಿಕ 20 ಸಾವಿರ ರೂಪಾಯಿ ಸಿಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    SCSS: ಅಂಚೆ ಕಚೇರಿಯ ಈ ಯೋಜನೆಯಿಂದ 4 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

    60 ವರ್ಷ ಮೇಲ್ಪಟ್ಟವರು ಈ ಯೋಜನೆಗೆ ಸೇರಬಹುದು. ಒಂದು ವೇಳೆ VRS ಮೊದಲೇ ತೆಗೆದುಕೊಂಡಿದ್ದರೆ, ಈ ಸಂದರ್ಭದಲ್ಲಿ 55 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ಯೋಜನೆಗೆ ಸೇರಬಹುದು. ಆದರೆ ನಿವೃತ್ತಿ ಪ್ರಯೋಜನವನ್ನು ಕನಿಷ್ಠ ಒಂದು ತಿಂಗಳಾದರೂ ಪಡೆದಿರಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    SCSS: ಅಂಚೆ ಕಚೇರಿಯ ಈ ಯೋಜನೆಯಿಂದ 4 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

    ನೀವು ಹತ್ತಿರದ ಅಂಚೆ ಕಚೇರಿಗೆ ಹೋಗಿ ಈ ಯೋಜನೆಯ ಲಾಭ ಪಡೆಯಬಹುದು. 1 ಲಕ್ಷದವರೆಗಿನ ಮೊತ್ತವನ್ನು ನಗದು ರೂಪದಲ್ಲಿ ನೀಡಬಹುದು. ಈ ಮಿತಿಯನ್ನು ಮೀರಿದರೆ ಚೆಕ್ ಮೂಲಕ ಯೋಜನೆಗೆ ಸೇರಬೇಕಾಗುತ್ತದೆ. ಅಗತ್ಯ KYC ದಾಖಲೆಗಳನ್ನು ಸಹ ಒದಗಿಸಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    SCSS: ಅಂಚೆ ಕಚೇರಿಯ ಈ ಯೋಜನೆಯಿಂದ 4 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

    ಈ ಯೋಜನೆಗೆ ಸೇರ್ಪಡೆಗೊಂಡರೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. 1.5 ಲಕ್ಷದವರೆಗೆ ತೆರಿಗೆಯನ್ನು ಕಡಿಮೆ ಮಾಡಬಹುದು. ವರ್ಷದಲ್ಲಿ ಬಡ್ಡಿ ಆದಾಯ 50 ಸಾವಿರ ರೂಪಾಯಿ ದಾಟಿದರೆ ಟಿಡಿಎಸ್ ಕಡಿತವಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES