Post Office: ಭಾರೀ ಮೊತ್ತದ ಅಪಘಾತ ವಿಮೆ ಪರಿಚಯಿಸಿದ ಅಂಚೆ ಇಲಾಖೆ
ಈಗಾಗಲೇ ಅಂಚೆ ಕಚೇರಿಯ ಅನೇಕ ಯೋಜನೆಗಳು ಜನಪ್ರಿಯವಾಗಿದೆ. ಇದೀಗ ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆ ಅತ್ಯಂತ ಕಡಿಮೆ ಹಣದಲ್ಲಿ ಭಾರೀ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ.
ಈಗಾಗಲೇ ಅಂಚೆ ಕಚೇರಿಯ ಅನೇಕ ಯೋಜನೆಗಳು ಜನಪ್ರಿಯವಾಗಿದೆ. ಇದೀಗ ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆ ಅತ್ಯಂತ ಕಡಿಮೆ ಹಣದಲ್ಲಿ ಭಾರೀ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ.
2/ 8
ಆಕಸ್ಮಿಕ ಅವಘಡಗಳಿಗೆ ತುತ್ತಾದಗ ಅಂಚೆ ಕಚೇರಿಯ ಈ ಕಡಿಮೆ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ.
3/ 8
ಕನಿಷ್ಠ 18ರಿಂದ ಗರಿಷ್ಠ 65 ವರ್ಷ ಒಳಗಿನವರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಯಾವುದೇ ರೀತಿಯ ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ನೀವು ವಿಮೆ ಮಾಡಿಸಿ.
4/ 8
ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತೆರಳಿ ವಾರ್ಷಿಕವಾಗಿ 399 ರೂಪಾಯಿ ಹಣ ಕಟ್ಟಿದರೆ 10 ಲಕ್ಷ ರೂಪಾಯಿ ಅಪಘಾತ ವಿಮೆ ಅರ್ಹರಾಗುತ್ತೀರಿ.
5/ 8
ಈಗಾಗಲೇ ನೀವು ಅಂಚೆ ಇಲಾಖೆಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್ ಖಾತೆ ಹೊಂದಿದ್ದರೆ ನೀವು ಈ ಅಪಘಾತ ವಿಮೆಗೆ ಅರ್ಹರಾಗುತ್ತೀರಿ.
6/ 8
ನೀವೇನಾದರೂ ಈ ಖಾತೆ ಮಾಡಿಸದಿದ್ದರೆ, ಕೂಡಲೇ 100 ರೂಪಾಯಿ ಕೊಟ್ಟು ಮೊದಲು ಈ ಖಾತೆಯನ್ನು ತೆರೆಯಿರಿ. ಒಂದೇ ದಿನದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್ ಖಾತೆ ತೆರೆಯಬಹುದು.
7/ 8
ಈ ವಿಮಾ ಯೋಜನೆ ಫಲಾನುಭವಿಯು ಆಕಸ್ಮಿಕ ಮೃತಪಟ್ಟರೆ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿ ನೀಡಲಾಗುತ್ತೆ.
8/ 8
ಶಾಶ್ವತವಾಗಿ ಅಂಗವೈಕಲ್ಯವಾದರೆ 10 ಲಕ್ಷ ಸಿಗುತ್ತೆ. ಆಸ್ಪತ್ರೆ ವೆಚ್ಚಕ್ಕಾಗಿ 60 ಸಾವಿರ. ಮೃತರ ಮ್ಕಕಳ ಶಿಕ್ಷಣಕ್ಕಾಗಿ ಪ್ರತಿ ಮಗುವಿಗೆ ಒಂದು ಲಕ್ಷ ವರೆಗೆ ಸಹಾಯ ಸಿಗಲಿದೆ. ಓಪಿಡಿ ವೆಚ್ಚಕ್ಕೆಂದು 30 ಸಾವಿರ. ಅಪಘಾತದಲ್ಲಿ ಪಾರ್ಶ್ವವಾಯು ಉಂಟಾದರೆ 10 ಲಕ್ಷ ಸಿಗುತ್ತದೆ.