National Savings Certificate: ಇದು ಅಂಚೆ ಕಚೇರಿಯ ಸೂಪರ್ ಹಿಟ್ ಯೋಜನೆ; ಸೇಫ್ ಆಗಿರುತ್ತೆ ನಿಮ್ಮ ಹೂಡಿಕೆ

NSC | ನೀವು ಹಣವನ್ನು ಉಳಿಸಲು ಯೋಚನೆ ಮಾಡುತ್ತಿದ್ದೀರಾ? ಹಾಗಾದ್ರೆ ನಿಮಗೊಂದು ಒಳ್ಳೆಯ ಸುದ್ದಿ ಬಂದಿದೆ. ಇಲ್ಲಿ ಯಾವುದೇ ಅಪಾಯವಿಲ್ಲದೇ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

First published:

  • 18

    National Savings Certificate: ಇದು ಅಂಚೆ ಕಚೇರಿಯ ಸೂಪರ್ ಹಿಟ್ ಯೋಜನೆ; ಸೇಫ್ ಆಗಿರುತ್ತೆ ನಿಮ್ಮ ಹೂಡಿಕೆ

    Post Office Schemes | ಪೋಸ್ಟ್ ಆಫಿಸ್ ಹಣ ಉಳಿತಾಯ ಮಾಡೋರಿಗೆ ಹಲವು ಯೋಜನೆಗಳನ್ನು ನೀಡುತ್ತದೆ. ಇಲ್ಲಿ ನೀವು ಖಚಿತವಾಗಿ ಲಾಭ ಪಡೆಯುತ್ತೀರಿ. ಸ್ಥಿರ ಆದಾಯ ಬಯಸುವವರು ಅಂಚೆ ಕಚೇರಿಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    National Savings Certificate: ಇದು ಅಂಚೆ ಕಚೇರಿಯ ಸೂಪರ್ ಹಿಟ್ ಯೋಜನೆ; ಸೇಫ್ ಆಗಿರುತ್ತೆ ನಿಮ್ಮ ಹೂಡಿಕೆ

    ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಪೋಸ್ಟ್ ಆಫೀಸ್ ನೀಡುವ ಯೋಜನೆಗಳಲ್ಲಿ ಒಂದಾಗಿದೆ. ಇದನ್ನು NSC ಯೋಜನೆ ಎಂದೂ ಕರೆಯುತ್ತಾರೆ. ಇಲ್ಲಿ ಹಣ ಹೂಡಿಕೆ ಮಾಡೋದರಿಂದ ಹಲವು ಲಾಭಗಳನ್ನು ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    National Savings Certificate: ಇದು ಅಂಚೆ ಕಚೇರಿಯ ಸೂಪರ್ ಹಿಟ್ ಯೋಜನೆ; ಸೇಫ್ ಆಗಿರುತ್ತೆ ನಿಮ್ಮ ಹೂಡಿಕೆ

    ಇಂಡಿಯಾ ಪೋಸ್ಟ್ ಪ್ರಕಾರ, ಪ್ರಸ್ತುತ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಶೇಕಡಾ 7 ರ ಬಡ್ಡಿದರ ನೀಡಲಾಗುತ್ತಿದೆ. ಉದಾಹರಣೆಗೆ 1000 ರೂಪಾಯಿ ಹೂಡಿಕೆ ಮಾಡಿದ್ರೆ, ಯೋಜನೆಯ ಅಂತ್ಯದ ಸಮಯದಲ್ಲಿ 1,403 ರೂಪಾಯಿ ಸಿಗುತ್ತದೆ. ಹೆಚ್ಚುವರಿಯಾಗಿ 403 ರೂಪಾಯಿ ದೊರೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    National Savings Certificate: ಇದು ಅಂಚೆ ಕಚೇರಿಯ ಸೂಪರ್ ಹಿಟ್ ಯೋಜನೆ; ಸೇಫ್ ಆಗಿರುತ್ತೆ ನಿಮ್ಮ ಹೂಡಿಕೆ

    ಈ ಪೋಸ್ಟ್ ಆಫೀಸ್ ಯೋಜನೆಯ ಮುಕ್ತಾಯ ಅವಧಿ ಐದು ವರ್ಷ ಆಗಿರುತ್ತದೆ. ಕೇಂದ್ರ ಸರ್ಕಾರ ಮೂರು ತಿಂಗಳಿಗೊಮ್ಮೆ ಈ ಯೋಜನೆಯ ಬಡ್ಡಿದರವನ್ನ ಪರಿಶೀಲನೆ ಮಾಡುತ್ತದೆ. ಮೂರು ತಿಂಗಳಿಗೊಮ್ಮೆ ಬಡ್ಡಿದರ ಏರಿಳಿತವಾಗುವ ಸಾಧ್ಯತೆಗಳಿರುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    National Savings Certificate: ಇದು ಅಂಚೆ ಕಚೇರಿಯ ಸೂಪರ್ ಹಿಟ್ ಯೋಜನೆ; ಸೇಫ್ ಆಗಿರುತ್ತೆ ನಿಮ್ಮ ಹೂಡಿಕೆ

    ಈ ಯೋಜನೆಗೆ ಯಾರು ಬೇಕಾದರೂ ಸೇರಬಹುದು. ಖಾತೆಯನ್ನು ಏಕ ಅಥವಾ ಜಂಟಿಯಾಗಿ ತೆರೆಯಬಹುದು. ಅಪ್ರಾಪ್ತ ವಯಸ್ಕರೂ ತಮ್ಮ ಹೆಸರಿನಲ್ಲಿ ಈ ಯೋಜನೆಗೆ ಸೇರಬಹುದು. ಆದರೆ ಗಾರ್ಡಿಯನ್ ಅಗತ್ಯವಿದೆ. ಹತ್ತು ವರ್ಷ ಮೇಲ್ಪಟ್ಟವರು ತಮ್ಮ ಹೆಸರಿನಲ್ಲಿ ಈ ಯೋಜನೆಗೆ ಸೇರಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    National Savings Certificate: ಇದು ಅಂಚೆ ಕಚೇರಿಯ ಸೂಪರ್ ಹಿಟ್ ಯೋಜನೆ; ಸೇಫ್ ಆಗಿರುತ್ತೆ ನಿಮ್ಮ ಹೂಡಿಕೆ

    ಈ ಯೋಜನೆಗೆ ಸೇರಲು ಬಯಸುವರರು ಕನಿಷ್ಠ 1000 ರೂಪಾಯಿಯೊಂದಿಗೆ ಆರಂಭಿಸಬಹುದು. ಇಲ್ಲಿ ಹಣ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ಈ ಯೋಜನೆಯ ಅಂತ್ಯಕ್ಕೆ ಬಡ್ಡಿಯನ್ನು ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    National Savings Certificate: ಇದು ಅಂಚೆ ಕಚೇರಿಯ ಸೂಪರ್ ಹಿಟ್ ಯೋಜನೆ; ಸೇಫ್ ಆಗಿರುತ್ತೆ ನಿಮ್ಮ ಹೂಡಿಕೆ

    ಉದಾಹರಣೆಗೆ ಈ ಯೋಜನೆಯಲ್ಲಿ ರೂ. 5 ಲಕ್ಷ ಠೇವಣಿ ಇಡಲಾಗಿದೆ ಎಂದು ಊಹಿಸಿ. ಯೋಜನೆಯ ಮುಕ್ತಾಯದ ವೇಳೆ ನಿಮಗೆ ಹೆಚ್ಚುವರಿಯಾಗಿ 2 ಲಕ್ಷಕ್ಕೂ ಅಧಿಕ ಹಣ ಸಿಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    National Savings Certificate: ಇದು ಅಂಚೆ ಕಚೇರಿಯ ಸೂಪರ್ ಹಿಟ್ ಯೋಜನೆ; ಸೇಫ್ ಆಗಿರುತ್ತೆ ನಿಮ್ಮ ಹೂಡಿಕೆ

    ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಈ ಯೋಜನೆಗೆ ಸೇರಿದರೆ, ನೀವು ಪ್ರತಿ ವರ್ಷವೂ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಬಹುದು. ರೂ. 1.5 ಲಕ್ಷದವರೆಗೆ ತೆರಿಗೆ ಉಳಿತಾಯ ಸಿಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES