ಡಿಜಿಟಲ್ ಪಾವತಿ ಹೆಚ್ಚಳಕ್ಕೆ ಉತ್ಸಾಹ ತೋರುತ್ತಿರುವ ದೇಶದ ಜನರನ್ನು ಅಭಿನಂದಿಸಿದ್ದಾರೆ. ‘ಯುಪಿಐಯ ಜನಪ್ರಿಯತೆಯ ಬಗ್ಗೆ ನೀವು ಗಮನ ಸೆಳೆದಿರುವುದನ್ನು ಇಷ್ಟಪಟ್ಟಿದ್ದೇನೆ. ಡಿಜಿಟಲ್ ಪಾವತಿ ವಿಧಾನವನ್ನು ಅಳವಡಿಸಿಕೊಂಡಿರುವ ನನ್ನೆಲ್ಲ ಭಾರತೀಯರನ್ನು ಶ್ಲಾಘಿಸುತ್ತೇನೆ. ಅವರು ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಗಮನಾರ್ಹವಾಗಿ ಸ್ವೀಕರಿಸಿದ್ದಾರೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.