Free Ration: ಜನಸಾಮಾನ್ಯರಿಗೆ ಕೇಂದ್ರದ ಹೊಸ ವರ್ಷದ ಉಡುಗೊರೆ, ಮೋದಿ ಮಹತ್ವದ ನಿರ್ಧಾರ?
Ration Card: ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಲಿದ್ಯಂತೆ. ಹೌದು ಉಚಿತ ಅಕ್ಕಿ ಯೋಜನೆಯನ್ನು ಮತ್ತೆ ವಿಸ್ತರಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
PMGKAY | ಜನ ಸಾಮಾನ್ಯರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. ಬಡವರಿಗೆ ಹೊಸ ವರ್ಷದ ಉಡುಗೊರೆ ನೀಡಲು ಸಿದ್ದವಾಗಿದೆ ಎಂದು ಹಲವು ವರದಿಗಳ ಹೇಳಿವೆ. ಕೇಂದ್ರ ಸರ್ಕಾರ ಉಚಿತ ಅಕ್ಕಿ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸುವ ಸಾಧ್ಯತೆ ಇದೆ.
2/ 8
PMGKAY | ಜನ ಸಾಮಾನ್ಯರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. ಬಡವರಿಗೆ ಹೊಸ ವರ್ಷದ ಉಡುಗೊರೆ ನೀಡಲು ಸಿದ್ದವಾಗಿದೆ ಎಂದು ಹಲವು ವರದಿಗಳ ಹೇಳಿವೆ. ಕೇಂದ್ರ ಸರ್ಕಾರ ಉಚಿತ ಅಕ್ಕಿ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸುವ ಸಾಧ್ಯತೆ ಇದೆ.
3/ 8
ಆದರೆ ಉಚಿತ ಅಕ್ಕಿ ಯೋಜನೆ ವಿಸ್ತರಣೆಯಾಗುವುದರ ಬಗ್ಗೆ ಕೇಂದ್ರ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಆದರೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಹತ್ವದ ಘೋಷಣೆ ಮಾಡಿದ್ದಾರೆ. ಉಚಿತ ಅಕ್ಕಿ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
4/ 8
ಜೊತೆಗೆ ಇನ್ನೊಂದು ಮಹತ್ವದ ವಿಷಯವನ್ನೂ ತಿಳಿಸಿದರು. ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಯೋಜನೆಯನ್ನು ವಿಸ್ತರಿಸಿದರೂ ಸಾಕಷ್ಟು ಆಹಾರ ಧಾನ್ಯಗಳಿದ್ದು, ದಾಸ್ತಾನು ಇದೆ ಎಂದು ವಿವರಿಸಿದರು.
5/ 8
ಆದರೆ, ಕೇಂದ್ರ ಸರ್ಕಾರ ಉಚಿತ ಅಕ್ಕಿ ಯೋಜನೆಯನ್ನು ಸ್ವಲ್ಪ ಕಾಲ ವಿಸ್ತರಿಸಿದರೆ, ಬಹಳಷ್ಟು ಜನರಿಗೆ ಅದರಲ್ಲೂ ಬಡವರಿಗೆ ಪರಿಹಾರ ಸಿಗಲಿದೆ ಎನ್ನಬಹುದು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
6/ 8
ಭಾರತ ಸರ್ಕಾರವು ಪಿಎಂಜಿಕೆವೈ ಯೋಜನೆಯ ಗಡುವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಮೂರು ತಿಂಗಳವರೆಗೆ ವಿಸ್ತರಿಸಿದೆ ಎಂದು ತಿಳಿದಿದೆ. ಈ ಯೋಜನೆಯು ಡಿಸೆಂಬರ್ 31 ರವರೆಗೆ ಲಭ್ಯವಿರುತ್ತದೆ. ಅಂದರೆ ಇನ್ನೊಂದು ವಾರದವರೆಗೆ ಈ ಯೋಜನೆ ಲಭ್ಯವಾಗಲಿದೆ.
7/ 8
ಕೇಂದ್ರ ಸರ್ಕಾರ ಏಕಾಏಕಿ ರೂ. 1.8 ಲಕ್ಷ ಕೋಟಿ ಖರ್ಚು ಮಾಡಲಾಗಿದೆ ಎಂದು ಬಹಿರಂಗಪಡಿಸಿದರು. ಕೇಂದ್ರದಲ್ಲಿ ಆಹಾರ ಭದ್ರತಾ ಕಾಯ್ದೆ ಹಾಗೂ ಇತರೆ ಕಲ್ಯಾಣ ಯೋಜನೆಗಳಡಿ ನೀಡಬೇಕಾದ ಆಹಾರ ಧಾನ್ಯಗಳಿದ್ದು, ದಾಸ್ತಾನು ಸಾಕಷ್ಟಿದೆ ಎಂದು ವಿವರಿಸಿದರು. ಆಹಾರ ಧಾನ್ಯಗಳ ಸಂಗ್ರಹ ಸರಾಗವಾಗಿ ನಡೆಯುತ್ತಿದೆ ಎಂದರು.
8/ 8
ಕೇಂದ್ರ ಸರ್ಕಾರವು ಏಪ್ರಿಲ್ 2020 ರಲ್ಲಿ PMGKY ಯೋಜನೆಯನ್ನು ತಂದಿತು. ಕೋವಿಡ್ 19ರಿಂದ ಜನರು ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಉಚಿತ ಅಕ್ಕಿ ನೀಡಲಾಗುತ್ತಿದೆ. ಇದರ ಭಾಗವಾಗಿ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಉಚಿತ ಅಕ್ಕಿ ನೀಡಲಾಗುತ್ತಿದೆ.