Bussiness Plan: ಬ್ಯೂಟಿ ಪಾರ್ಲರ್ ಆರಂಭಿಸೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ನೀವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು!

ಭಾರತವು ಸುಮಾರು 1.4 ಬಿಲಿಯನ್ಗಿಂತಲೂ ಹೆಚ್ಚು ಜನ ಸಂಖ್ಯೆಯನ್ನು ಹೊಂದಿದೆ. ಅವರಲ್ಲಿ ಹಲವರು ವಿವಿಧ ಉದ್ಯೋಗಗಳು ಅಥವಾ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ, ಬ್ಯೂಟಿ ಪಾರ್ಲರ್ ಉದ್ಯೋಗದಲ್ಲಿ ಮಹಿಳೆಯರು ತೊಡಗಿಸಿಕೊಳ್ಳಲು ಇಷ್ಟಪಡುವ ಒಂದು ರೀತಿಯ ವ್ಯವಹಾರವಾಗಿದೆ.

First published:

  • 17

    Bussiness Plan: ಬ್ಯೂಟಿ ಪಾರ್ಲರ್ ಆರಂಭಿಸೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ನೀವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು!

    ನೀವು ಬ್ಯೂಟಿ ಪಾರ್ಲರ್ ಶುರು ಮಾಡುವ ಪ್ಲ್ಯಾನ್ ಹೊಂದಿದ್ದರೆ, ಬೇಕಾಗಿರುವ ಹಣ, , ಬ್ಯೂಟಿ ಪಾರ್ಲರ್ ಅಂಗಡಿ ತಿಂಗಳ ಬಾಡಿಗೆ, ಅಗತ್ಯವಿರುವ ವಸ್ತುಗಳು, ಗ್ರಾಹಕರು ಮತ್ತು ಬ್ಯೂಟಿ ಪಾರ್ಲರ್ನ ಮಾಸಿಕ ಆದಾಯದಂತಹ ಕೆಲವು ಪ್ರಮುಖ ವಿಚಾರಗಳನ್ನು ನೀವು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

    MORE
    GALLERIES

  • 27

    Bussiness Plan: ಬ್ಯೂಟಿ ಪಾರ್ಲರ್ ಆರಂಭಿಸೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ನೀವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು!

    ಭಾರತವು ಸುಮಾರು 1.4 ಬಿಲಿಯನ್ಗಿಂತಲೂ ಹೆಚ್ಚು ಜನ ಸಂಖ್ಯೆಯನ್ನು ಹೊಂದಿದೆ. ಅವರಲ್ಲಿ ಹಲವರು ವಿವಿಧ ಉದ್ಯೋಗಗಳು ಅಥವಾ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ, ಬ್ಯೂಟಿ ಪಾರ್ಲರ್ ಉದ್ಯೋಗದಲ್ಲಿ ಮಹಿಳೆಯರು ತೊಡಗಿಸಿಕೊಳ್ಳಲು ಇಷ್ಟಪಡುವ ಒಂದು ರೀತಿಯ ವ್ಯವಹಾರವಾಗಿದೆ. ಮೊದಲು ಬ್ಯೂಟಿ ಪಾರ್ಲರ್ಗೆ ಶ್ರೀಮಂತರು ಅಥವಾ ಐಷಾರಾಮಿ ಜೀವನ ನಡೆಸುವವರು ಮಾತ್ರ ಹೋಗುತ್ತಿದ್ದರು. ಆದರೆ, ಈಗ ಎಲ್ಲೆಡೆ ಬ್ಯೂಟಿ ಪಾರ್ಲರ್ ಫೇಮಸ್ ಆಗಿದೆ. ನೀವು ಬ್ಯೂಟಿ ಪಾರ್ಲರ್ ಅನ್ನು ಶುರು ಮಾಡುವ ಆಸಕ್ತಿ ಹೊಂದಿದ್ದರೆ ಈ ಕೆಳಗಿರುವ ಒಂದಷ್ಟು ಮಾಹಿತಿ ನಿಮಗೆ ಸಹಾಯ ಮಾಡುತ್ತದೆ.

    MORE
    GALLERIES

  • 37

    Bussiness Plan: ಬ್ಯೂಟಿ ಪಾರ್ಲರ್ ಆರಂಭಿಸೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ನೀವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು!

    ನೀವು ಬ್ಯೂಟಿ ಪಾರ್ಲರ್ ಅನ್ನು ಪ್ರಾರಂಭಿಸಲು ಬಯಸಿದರೆ, ಮೊದಲು ನೀವು ದೊಡ್ಡದಾಗಿ ವ್ಯಾಪಾರ ಮಾಡುವ ಪ್ಲ್ಯಾನ್ ಅನ್ನು ಹೊಂದಿರಬೇಕು. ಇದು ನಿಮ್ಮ ಕಂಪನಿಯ ಸಮಗ್ರ ಅವಲೋಕನವನ್ನು ಮಾಡಬೇಕು. ಹೆಚ್ಚಾಗಿ ಬ್ಯೂಟಿ ಪಾರ್ಲರ್ ಇಡಲು ಯಾವ ಸ್ಥಳ ಸೂಕ್ತ ಎಂದು ವಿಶ್ಲೇಷಿಸಬೇಕಾಗುತ್ತದೆ. ನಿಮ್ಮೊಂದಿಗೆ ಸ್ಪರ್ಧಿಸಲು ಪಾರ್ಲರ್ಗಳು ಯಾವ ಸೇವೆಗಳನ್ನು ನೀಡುತ್ತವೆ ಮತ್ತು ಅವುಗಳ ಬೆಲೆಯ ಬಗ್ಗೆ ಮಾಹಿತಿಯನ್ನು ಸಹ ಸಂಗ್ರಹಿಸಬೇಕು. ನಿಮ್ಮ ಪ್ಲ್ಯಾನ್ನಲ್ಲಿ ಲಭ್ಯವಿರುವ ಹಣ, ಮಾಸಿಕ ಬಾಡಿಗೆ, ಸರಬರಾಜು, ಕ್ಲೈಂಟ್ಗಳು ಮತ್ತು ಬ್ಯೂಟಿ ಸಲೂನ್ನಿಂದ ಮಾಸಿಕ ಆದಾಯದಂತಹ ಕೆಲವು ಪ್ರಮುಖ ವಿವರಗಳನ್ನು ಸಹ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್ ಮೂಲಕ ತಿಂಗಳಿಗೆ ₹6000 ರಿಂದ ₹50,000 ಗಳಿಸಬಹುದು.

    MORE
    GALLERIES

  • 47

    Bussiness Plan: ಬ್ಯೂಟಿ ಪಾರ್ಲರ್ ಆರಂಭಿಸೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ನೀವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು!

    ಸಣ್ಣ ಬ್ಯೂಟಿ ಸಲೂನ್ಗಳಿಂದ ಹಿಡಿದು ದೊಡ್ಡ ಬ್ಯೂಟಿ ಸಲೂನ್ಗಳವರೆಗೆ, ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುವ ಮೂಲಕ ನೀವು ಪ್ರಾರಂಭಿಸಬಹುದು. ಆದರೆ, ಈ ನಿಟ್ಟಿನಲ್ಲಿ, ಅದರ ಮಾಲೀಕತ್ವದ ರಚನೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಫ್ರೀ ಬ್ಯೂಟಿ ಸಲೂನ್ಗಳು ಪ್ರಸ್ತುತ ಫ್ರ್ಯಾಂಚೈಸ್ನ ಅತ್ಯಂತ ಸಾಮಾನ್ಯ ವಿಧವಾಗಿದೆ. ಸ್ವತಂತ್ರ ವಾಣಿಜ್ಯೋದ್ಯಮಿ ಸ್ವಂತವಾಗಿ ಬ್ಯೂಟಿ ಪಾರ್ಲರ್ ಅನ್ನು ಪ್ರಾರಂಭಿಸಬಹುದು ಅಥವಾ ನಡೆಸಬಹುದು. ಇದಕ್ಕಾಗಿ ಅತ್ಯಂತ ಕಡಿಮೆ ಆರಂಭಿಕ ಹೂಡಿಕೆಯ ಅಗತ್ಯವಿದೆ. ಹೆಚ್ಚುವರಿಯಾಗಿ, ದಿನನಿತ್ಯದ ಕಾರ್ಯಾಚರಣೆಯ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಬಹುದು.

    MORE
    GALLERIES

  • 57

    Bussiness Plan: ಬ್ಯೂಟಿ ಪಾರ್ಲರ್ ಆರಂಭಿಸೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ನೀವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು!

    ಬ್ಯೂಟಿ ಸಲೂನ್ಗಾಗಿ ನೀವು ಯಾವ ಸ್ಥಳವನ್ನು ಆರಿಸುತ್ತೀರಿ ಎಂಬುದು ಮುಖ್ಯವಾಗಿದೆ. ನೀವಿರುವ ಕಡೆಗೆ ಹೆಚ್ಚಿನ ಗ್ರಾಹಕರು ಭೇಟಿ ನೀಡುವ ಸ್ಥಳವನ್ನು ಆಯ್ಕೆ ಮಾಡುವುದು ಉತ್ತಮ. ವಿಶೇಷವಾಗಿ ಜನಸಂದಣಿ ಇರುವ ಸ್ಥಳ ಅಥವಾ ಮಾರುಕಟ್ಟೆ ಪ್ರದೇಶಗಳು ಇದಕ್ಕೆ ತುಂಬಾ ಸೂಕ್ತವಾಗಿದೆ. ಜೊತೆಗೆ ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣದ ಹತ್ತಿರ ಉಚಿತವಾಗಿ ಪಾಂಪ್ಲೇಟ್ ನೀಡುವುದು ಮತ್ತಷ್ಟು ಅದ್ಭುತವಾದ ಐಡಿಯಾ ಆಗಿದೆ. ಇದರಿಂದ ಜನರು ನೀವಿರುವ ಸ್ಥಳಕ್ಕೆ ಸುಲಭವಾಗಿ ತಲುಪುತ್ತಾರೆ.

    MORE
    GALLERIES

  • 67

    Bussiness Plan: ಬ್ಯೂಟಿ ಪಾರ್ಲರ್ ಆರಂಭಿಸೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ನೀವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು!

    ಈ ವೇಳೆ ನೀವು ತುಂಬಾ ಕಡಿಮೆ ಅಥವಾ ಹೆಚ್ಚು ಶುಲ್ಕ ವಿಧಿಸಬಾರದು. ಸೇವೆಯ ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೇ ನೀವು ಒದಗಿಸುವ ಸೇವೆಗೆ ನೀವು ಸಮಂಜಸವಾದ ಶುಲ್ಕವನ್ನು ವಿಧಿಸಬೇಕು. ಉತ್ತಮ ಗುಣಮಟ್ಟದ ವಸ್ತುಗಳನ್ನು ಮಾತ್ರ ಬಳಸಬೇಕು. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಉತ್ತಮ ಗುಣಮಟ್ಟದ ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

    MORE
    GALLERIES

  • 77

    Bussiness Plan: ಬ್ಯೂಟಿ ಪಾರ್ಲರ್ ಆರಂಭಿಸೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ನೀವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು!

    ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡರೆ ನಿಮ್ಮ ಬ್ಯೂಟಿ ಪಾರ್ಲರ್ ಉತ್ತಮವಾಗಿ ಕಾರ್ಯನಿರ್ವಹಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

    MORE
    GALLERIES