ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿಕೊಳ್ಳದಂತೆ ಇರಲು ಮೊದಲೇ ಎಲ್ಲವನ್ನು ಪ್ಲಾನ್ ಮಾಡಿಕೊಂಡಿರಬೇಕು. ಸಾಲದ ಸುಳಿಯಲ್ಲಿ ಸಿಲುಕಬಾರದು ಅಂದದ್ರೆ ಅದಕ್ಕೆ ನಮ್ಮ ಆದಾಯದಲ್ಲಿನ ಒಂದು ಮೊತ್ತವನ್ನು ಉಳಿತಾಯ ಮಾಡಲೇಬೇಕು. ಬಹುತೇಕ ಎಲ್ಲರೂ ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡುತ್ತಿರುತ್ತಾರೆ. ಆದರೆ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಉಳಿತಾಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಇಂದು ನಾವು ನಿಮಗೆ ಆ ತಪ್ಪುಗಳ ಬ್ಗೆ ಹೇಳುತ್ತಿದ್ದೇವೆ. (ಸಾಂದರ್ಭಿಕ ಚಿತ್ರ)
ಮೊದಲು ಖರ್ಚು ಮಾಡಬೇಡಿ:
ವಾರೆನ್ ಬಫೆಟ್ ಹೇಳುವ ಪ್ರಕಾರ, ಖರ್ಚು ಮಾಡಿದ ನಂತರ ಉಳಿದ ಹಣವನ್ನು ಉಳಿಸಬೇಡಿ, ಆದರೆ ಉಳಿಸಿದ ನಂತರ ಉಳಿದದ್ದನ್ನು ಖರ್ಚು ಮಾಡಿ. ಆದ್ದರಿಂದ ಮೊದಲು ನಿಮ್ಮ ಗಳಿಕೆಯಿಂದ ಉಳಿತಾಯವನ್ನು ತೆಗೆದುಕೊಳ್ಳಿ. ನಂತರ ಉಳಿದದ್ದನ್ನು ಖರ್ಚು ಮಾಡಿ. ನೀವು ಖರ್ಚು ಮಾಡಲು ಪ್ರಾರಂಭಿಸಿದರೆ ನಿಮ್ಮ ಬಳಿ ಏನೂ ಉಳಿಯದೇ ಇರಬಹುದು. ಆದ್ದರಿಂದ, ನೀವು ಮೊದಲು ಗಳಿಕೆಯ ಒಂದು ಭಾಗವನ್ನು ಉಳಿತಾಯವಾಗಿ ಮೀಸಲಿಡುವುದು ಮುಖ್ಯ.