2000 Notes: ಬ್ಯಾಂಕ್‌ಗೆ ಹೋಗದೇ ₹2 ಸಾವಿರ ನೋಟು ಬದ್ಲಾಯಿಸೋದು ಹೇಗೆ? ಐಡಿಯಾ ಮಾಡಿದ್ದಾರೆ ನೋಡಿ ಇಲ್ಲಿನ ಜನ!

ಮೇ 23ರಿಂದ ಈಗಾಗಲೇ ದೇಶದ ಎಲ್ಲಾ ಬ್ಯಾಂಕ್​ಗಳಲ್ಲಿ 2000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.

First published:

  • 17

    2000 Notes: ಬ್ಯಾಂಕ್‌ಗೆ ಹೋಗದೇ ₹2 ಸಾವಿರ ನೋಟು ಬದ್ಲಾಯಿಸೋದು ಹೇಗೆ? ಐಡಿಯಾ ಮಾಡಿದ್ದಾರೆ ನೋಡಿ ಇಲ್ಲಿನ ಜನ!

    ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆದುಕೊಳ್ಳಲು ಸೂಚಿಸಿದೆ. ಇದರಿಂದ ಜನರು ತಮ್ಮಲ್ಲಿರುವ ನೋಟುಗಳನ್ನು ಬ್ಯಾಂಕ್​ಗಳಿಗೆ ಹೋಗಿ ಬದಲಾಯಿಸಿಕೊಳ್ಳಬೇಕಾಗಿದೆ.

    MORE
    GALLERIES

  • 27

    2000 Notes: ಬ್ಯಾಂಕ್‌ಗೆ ಹೋಗದೇ ₹2 ಸಾವಿರ ನೋಟು ಬದ್ಲಾಯಿಸೋದು ಹೇಗೆ? ಐಡಿಯಾ ಮಾಡಿದ್ದಾರೆ ನೋಡಿ ಇಲ್ಲಿನ ಜನ!

    ಮೇ 23ರಿಂದ ಈಗಾಗಲೇ ದೇಶದ ಎಲ್ಲಾ ಬ್ಯಾಂಕ್​ಗಳಲ್ಲಿ 2000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.

    MORE
    GALLERIES

  • 37

    2000 Notes: ಬ್ಯಾಂಕ್‌ಗೆ ಹೋಗದೇ ₹2 ಸಾವಿರ ನೋಟು ಬದ್ಲಾಯಿಸೋದು ಹೇಗೆ? ಐಡಿಯಾ ಮಾಡಿದ್ದಾರೆ ನೋಡಿ ಇಲ್ಲಿನ ಜನ!

    ಇನ್ನು ಕೆಲವರಿಗೆ ಈ ಸರತಿ ಸಾಲಲ್ಲಿ ನಿಲ್ಲುವುದು, ಫಾರ್ಮ್​ ಫಿಲ್ ಮಾಡುವುದಕ್ಕೆ ಸಮಯ ಇರುವುದಿಲ್ಲ, ಇನ್ನೂ ಕೆಲವರಿಗೆ ತಾಳ್ಮೆ ಇರುವುದಿಲ್ಲ. ಅಂತಹ ಜನರು ತಮ್ಮಲ್ಲಿರುವ ಹಣವನ್ನು ವಿಶೇಷ ಮಾರ್ಗದ ಮೂಲಕ ಬದಲಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 47

    2000 Notes: ಬ್ಯಾಂಕ್‌ಗೆ ಹೋಗದೇ ₹2 ಸಾವಿರ ನೋಟು ಬದ್ಲಾಯಿಸೋದು ಹೇಗೆ? ಐಡಿಯಾ ಮಾಡಿದ್ದಾರೆ ನೋಡಿ ಇಲ್ಲಿನ ಜನ!

    ಲಕ್ನೋದಲ್ಲಿ 2000 ರೂಪಾಯಿ ನೋಟುಗಳನ್ನು ಹೊಂದಿರುವವರು ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಬಳಸುತ್ತಿದ್ದಾರೆ. ವಿಶೇಷವಾಗಿ ಮಹಾನಗರ ಮತ್ತು ಲಕ್ನೋದ ಗೋಲ್ಡ್ ಮಾರುಕಟ್ಟೆಯ ಬಳಿ ಇರುವ ಎಲ್ಲಾ ವ್ಯಾಪಾರಿಗಳು ಸಹ ಯಾವುದೇ ಹಿಂಜರಿಕೆಯಿಲ್ಲದೆ ಈ ನೋಟುಗಳನ್ನು ಸ್ವೀಕರಿಸಿ ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ.

    MORE
    GALLERIES

  • 57

    2000 Notes: ಬ್ಯಾಂಕ್‌ಗೆ ಹೋಗದೇ ₹2 ಸಾವಿರ ನೋಟು ಬದ್ಲಾಯಿಸೋದು ಹೇಗೆ? ಐಡಿಯಾ ಮಾಡಿದ್ದಾರೆ ನೋಡಿ ಇಲ್ಲಿನ ಜನ!

    ಲಕ್ನೋದ ಗೋಲ್ ಮಾರ್ಕೆಟ್ ಮತ್ತು ಮಹಾನಗರದಲ್ಲಿ ಗ್ರಾಹಕರು 2000 ನೋಟುಗಳಿಂದ ಉಂಗುರಗಳು, ಚೈನ್‌ಗಳ ಜೊತೆಗೆ ಆಂಕ್ಲೆಟ್‌ಗಳು ಮತ್ತು ಇತರ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಅನೇಕ 2000 ನೋಟುಗಳನ್ನು ಹೊಂದಿರುವವರು ಲಕ್ನೋ ನಗರದ ಈ ಬುಲಿಯನ್ ವ್ಯಾಪಾರಿಗಳನ್ನು ಭೇಟಿ ಮಾಡುವ ಮೂಲಕ ಉತ್ತಮ ಖರೀದಿಗಳನ್ನು ಮಾಡುತ್ತಿದ್ದಾರೆ.

    MORE
    GALLERIES

  • 67

    2000 Notes: ಬ್ಯಾಂಕ್‌ಗೆ ಹೋಗದೇ ₹2 ಸಾವಿರ ನೋಟು ಬದ್ಲಾಯಿಸೋದು ಹೇಗೆ? ಐಡಿಯಾ ಮಾಡಿದ್ದಾರೆ ನೋಡಿ ಇಲ್ಲಿನ ಜನ!

    ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ 2000 ನೋಟುಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗೋಲ್ ಮಾರ್ಕೆಟ್‌ನಲ್ಲಿರುವ ಮುನ್ನಾಲಾಲ್ ಜ್ಯುವೆಲರ್ಸ್ ಮಾಲೀಕ ಸಂಜಯ್ ವರ್ಮಾ ಹೇಳಿದ್ದಾರೆ. ಚಿನ್ನ, ಬೆಳ್ಳಿ ಖರೀದಿಸಲು ಬರುವ ಯಾವುದೇ ಗ್ರಾಹಕರು 2000 ನೋಟು ನೀಡಿದರೆ ಅದನ್ನು ತೆಗೆದುಕೊಳ್ಳುತ್ತಿದ್ದಾರೆ. ಏಕೆಂದರೆ ಈಗ ಸೆಪ್ಟೆಂಬರ್ 30 ರವರೆಗೆ ಬ್ಯಾಂಕ್‌ಗೆ ಹೋಗಿ ವಿನಿಮಯ ಮಾಡಿಕೊಳ್ಳಬಹುದು. ಸೆಪ್ಟೆಂಬರ್ 30 ರ ನಂತರ, ಈ ನೋಟುಗಳನ್ನು ಸಂಪೂರ್ಣವಾಗಿ ನಿಷೇಧಿಸಿದರೆ, ಗ್ರಾಹಕರು 2000 ನೋಟುಗಳೊಂದಿಗೆ ತಮ್ಮ ಬಳಿಗೆ ಬಂದರೆ ಆಗ ನಾವು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

    MORE
    GALLERIES

  • 77

    2000 Notes: ಬ್ಯಾಂಕ್‌ಗೆ ಹೋಗದೇ ₹2 ಸಾವಿರ ನೋಟು ಬದ್ಲಾಯಿಸೋದು ಹೇಗೆ? ಐಡಿಯಾ ಮಾಡಿದ್ದಾರೆ ನೋಡಿ ಇಲ್ಲಿನ ಜನ!

    ಆದರೆ ಲಕ್ನೋದ ಹೆಚ್ಚಿನ ಅಂಗಡಿಗಳು ಮತ್ತು ಶಾಪಿಂಗ್ ಮಾಲ್‌ಗಳಲ್ಲಿ ಗ್ರಾಹಕರಿಂದ 2000 ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳುತ್ತಿಲ್ಲ. ತಮ್ಮ ಗ್ರಾಹಕರಿಂದ 2000 ನೋಟು ತೆಗೆದುಕೊಂಡರೆ ಸರದಿ ಸಾಲಿನಲ್ಲಿ ನಿಲ್ಲಬೇಕು ಮತ್ತು ಸಾಲಿನಲ್ಲಿ ನಿಂತು 2000 ನೋಟು ಬದಲಾಯಿಸಬೇಕು,, ನಮಗ್ಯಾಕೆ ಆ ಕರ್ಮ ಎಂದು ಕೆಲವರು ಹಿಂದಿನ ನೋಟ್​ ಬ್ಯಾನ್​ ಸಂದರ್ಭದವನ್ನು ಸ್ಮರಿಸಿಕೊಂಡಿದ್ದಾರೆ.

    MORE
    GALLERIES