ಹೊಸದಾಗಿ ಪರಿಚಯಿಸಲಾದ ಇಂಟಿಗ್ರೇಟೆಡ್ ಪಿಂಚಣಿದಾರರ ಪೋರ್ಟಲ್ https://ipension.nic.in ಪಿಂಚಣಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಪಿಂಚಣಿದಾರರು ಈಗ ಈ ಪೋರ್ಟಲ್‌ನಲ್ಲಿ ಬ್ಯಾಂಕ್ ಬದಲಾಯಿಸಬಹುದು. ಜೀವಿತ ಪ್ರಮಾಣ ಪತ್ರ ಸಲ್ಲಿಸಬಹುದು. ಅದೇ ರೀತಿ, ಪಿಂಚಣಿದಾರರ ಮರಣ ಪ್ರಮಾಣಪತ್ರ, ಪಿಂಚಣಿ ಚೀಟಿ, ಪಿಂಚಣಿ ಚೀಟಿ ಮರುಪಡೆಯುವಿಕೆ, ಆದಾಯ ತೆರಿಗೆ ಕಡಿತದ ಡೇಟಾ/ಫಾರ್ಮ್ 16, ಪಿಂಚಣಿ ರಸೀದಿ ಮಾಹಿತಿಯನ್ನು ಪಡೆಯಬಹುದು. ಪಿಂಚಣಿ ವಿತರಿಸುವ ಬ್ಯಾಂಕ್‌ಗಳ ವೆಬ್‌ಸೈಟ್‌ಗಳು ಮತ್ತು ಇತರ ಸೌಲಭ್ಯಗಳು ಪಿಂಚಣಿದಾರರಿಗೆ ಲಭ್ಯವಿದೆ.
* 18 ಪೋರ್ಟಲ್ ವಿಲೀನ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಪಿಂಚಣಿ ಸೇವಾ ಪೋರ್ಟಲ್ ಅನ್ನು ಭವಿಷ್ಯ ಪೋರ್ಟಲ್ ನೊಂದಿಗೆ ಜೋಡಿಸುವ ಕೆಲಸ ಪೂರ್ಣಗೊಂಡಿದೆ. ಈ ಏಕೀಕರಣದ ಮೂಲಕ, ಪಿಂಚಣಿದಾರರು ಈಗ ತಮ್ಮ ಪಿಂಚಣಿ ಚೀಟಿ, ಜೀವನ ಪ್ರಮಾಣಪತ್ರ ಸಲ್ಲಿಕೆ ಸ್ಥಿತಿ, ಫಾರ್ಮ್-16 ಅನ್ನು ಸಮಗ್ರ ಪಿಂಚಣಿದಾರರ ಪೋರ್ಟಲ್ ಮೂಲಕ ಪ್ರವೇಶಿಸಬಹುದು. ಎಲ್ಲಾ 18 ಪಿಂಚಣಿ ವಿತರಿಸುವ ಬ್ಯಾಂಕ್‌ಗಳನ್ನು ಸಮಗ್ರ ಪಿಂಚಣಿದಾರರ ಪೋರ್ಟಲ್‌ಗೆ ವಿಲೀನಗೊಳಿಸಲಾಗುವುದು.