Scam Alert: ಆರ್ಡರ್​ ಮಾಡದಿದ್ದರೂ ಮನೆಗೆ ಬರುತ್ತೆ ಪಾರ್ಸೆಲ್​, OTP ಹೇಳಿದ್ರೆ ನಿಮ್ಮ ಖಾತೆಯಲ್ಲಿರೋ ಹಣ ಗೋತಾ!

Cash On Delivery Scam: ಜನರನ್ನು ವಂಚಿಸಲು ಸ್ಕ್ಯಾಮರ್‌ಗಳು ಹೊಸ ಮಾರ್ಗಗಳೊಂದಿಗೆ ಬರುತ್ತಲೇ ಇರುತ್ತಾರೆ. ಇತ್ತೀಚೆಗೆ ಹೊಸ ರೀತಿಯ ವಂಚನೆಗೆ ಹಲವರು ಬಲಿಯಾಗುತ್ತಿದ್ದಾರೆ.

First published:

 • 17

  Scam Alert: ಆರ್ಡರ್​ ಮಾಡದಿದ್ದರೂ ಮನೆಗೆ ಬರುತ್ತೆ ಪಾರ್ಸೆಲ್​, OTP ಹೇಳಿದ್ರೆ ನಿಮ್ಮ ಖಾತೆಯಲ್ಲಿರೋ ಹಣ ಗೋತಾ!

  ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ. ಹೊಸ ಹೊಸ ರೀತಿಯಲ್ಲಿ ಜನರಿಗೆ ಮೋಸ ಮಾಡಿ ಹಣ ಮಾಡುತ್ತಿರುತ್ತಾರೆ. ವಂಚಕರ ಹೊಸ ಐಡಿಯಾಗಳ ಬಗ್ಗೆ ನೀವು ತಿಳಿದುಕೊಂಡಿರಲೇಬೇಕು.

  MORE
  GALLERIES

 • 27

  Scam Alert: ಆರ್ಡರ್​ ಮಾಡದಿದ್ದರೂ ಮನೆಗೆ ಬರುತ್ತೆ ಪಾರ್ಸೆಲ್​, OTP ಹೇಳಿದ್ರೆ ನಿಮ್ಮ ಖಾತೆಯಲ್ಲಿರೋ ಹಣ ಗೋತಾ!

  OTP ವಂಚನೆಯ ಬಗ್ಗೆ ಹೆಚ್ಚಿನ ಜನರು ತಿಳಿದಿದ್ದಾರೆ. ಆದರೆ ಮಾಹಿತಿ ಕೊರತೆಯಿಂದ ಮೋಸಗಾರರ ಬಲೆಗೆ ಬೀಳುತ್ತಿರುವವರು ಇನ್ನೂ ಅನೇಕರಿದ್ದಾರೆ. ಅದಕ್ಕಾಗಿಯೇ ನೀವು ಹೊಸ ರೀತಿಯ ಹಗರಣಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

  MORE
  GALLERIES

 • 37

  Scam Alert: ಆರ್ಡರ್​ ಮಾಡದಿದ್ದರೂ ಮನೆಗೆ ಬರುತ್ತೆ ಪಾರ್ಸೆಲ್​, OTP ಹೇಳಿದ್ರೆ ನಿಮ್ಮ ಖಾತೆಯಲ್ಲಿರೋ ಹಣ ಗೋತಾ!

  ಇತ್ತೀಚಿನ ದಿನಗಳಲ್ಲಿ, ಆರ್ಡರ್ ಇಲ್ಲದೆ ಅನೇಕ ಜನರ ಮನೆಗಳಿಗೆ ಪಾರ್ಸೆಲ್​​ಗಳು ಬರುತ್ತಿವೆಯಂತೆ. ಈ ಪಾರ್ಸೆಲ್ ತರುವ ಡೆಲಿವರಿ ಬಾಯ್ ಈ ಪಾರ್ಸೆಲ್ ಕ್ಯಾಶ್ ಆನ್ ಡೆಲಿವರಿ ಆಗಿದ್ದು ನೀವು ನಗದು ರೂಪದಲ್ಲಿ ಪಾವತಿಸಬೇಕು ಎಂದು ಹೇಳುತ್ತಾರಂತೆ.

  MORE
  GALLERIES

 • 47

  Scam Alert: ಆರ್ಡರ್​ ಮಾಡದಿದ್ದರೂ ಮನೆಗೆ ಬರುತ್ತೆ ಪಾರ್ಸೆಲ್​, OTP ಹೇಳಿದ್ರೆ ನಿಮ್ಮ ಖಾತೆಯಲ್ಲಿರೋ ಹಣ ಗೋತಾ!

  ಆದರೆ ಪಾರ್ಸೆಲ್ ಪಡೆದವರು ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರ ನಂತರ ಡೆಲಿವರಿ ಬಾಯ್ ಕಸ್ಟಮರ್ ಕೇರ್ ಏಜೆಂಟ್‌ನೊಂದಿಗೆ ಮಾತನಾಡುವಂತೆ ನಟಿಸುತ್ತಾರೆ. ನೀವು ಆರ್ಡರ್ ಅನ್ನು ರದ್ದುಗೊಳಿಸಲು ಬಯಸಿದರೆ ನಿಮ್ಮ ಫೋನ್‌ನಲ್ಲಿ ಬಂದ OTP ಅನ್ನು ಹೇಳುವ ಮೂಲಕ ರದ್ದುಗೊಳಿಸಬೇಕು ಎಂದು ಹೇಳುತ್ತಾರಂತೆ.

  MORE
  GALLERIES

 • 57

  Scam Alert: ಆರ್ಡರ್​ ಮಾಡದಿದ್ದರೂ ಮನೆಗೆ ಬರುತ್ತೆ ಪಾರ್ಸೆಲ್​, OTP ಹೇಳಿದ್ರೆ ನಿಮ್ಮ ಖಾತೆಯಲ್ಲಿರೋ ಹಣ ಗೋತಾ!

  ಹಲವರು ನಂಬರ್ ಕೊಟ್ಟಿದ್ದು, ಒಟಿಪಿ ಕೂಡ ನೀಡಿದ್ದಾರೆ. ಆದರೆ ಇದಾದ ಕೆಲವೇ ದಿನಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ಲಕ್ಷಗಟ್ಟಲೆ ಹಣ ಮಾಯವಾಗಿದೆ. ಈ ಬಗ್ಗೆ ಹಲವರು ಪೊಲೀಸರಿಗೆ ದೂರು ನೀಡಿದ್ದು, ಬಳಿಕ ಈ ಹೊಸ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

  MORE
  GALLERIES

 • 67

  Scam Alert: ಆರ್ಡರ್​ ಮಾಡದಿದ್ದರೂ ಮನೆಗೆ ಬರುತ್ತೆ ಪಾರ್ಸೆಲ್​, OTP ಹೇಳಿದ್ರೆ ನಿಮ್ಮ ಖಾತೆಯಲ್ಲಿರೋ ಹಣ ಗೋತಾ!

  ವಂಚಕರು ಇದೀಗ ಜನರ ಮನೆ ತಲುಪಿ ವಂಚನೆ ಮಾಡುತ್ತಿರುವುದು ಈ ಪ್ರಕರಣದ ತನಿಖೆಯಿಂದ ಬೆಳಕಿಗೆ ಬಂದಿದೆ. ಒಟಿಪಿ ಗೊತ್ತಿದ್ದೇ ಕಳ್ಳರು ಹಲವರ ಖಾತೆಯಿಂದ ಹಣವನ್ನು ಅವರ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

  MORE
  GALLERIES

 • 77

  Scam Alert: ಆರ್ಡರ್​ ಮಾಡದಿದ್ದರೂ ಮನೆಗೆ ಬರುತ್ತೆ ಪಾರ್ಸೆಲ್​, OTP ಹೇಳಿದ್ರೆ ನಿಮ್ಮ ಖಾತೆಯಲ್ಲಿರೋ ಹಣ ಗೋತಾ!

  ಈ ರೀತಿಯ ಹಗರಣವನ್ನು ತಪ್ಪಿಸಲು, ನೀವು ಜಾಗರೂಕರಾಗಿರಬೇಕು. OTP ಅನ್ನು ಹಲವು ವಿಧಗಳಲ್ಲಿ ವಂಚನೆ ಮಾಡಬಹುದು. ಅದೇ ರೀತಿ, ವಂಚನೆಯನ್ನು ತಪ್ಪಿಸಲು, OTP ಅನ್ನು ಹಂಚಿಕೊಳ್ಳಬೇಡಿ. ಆರ್ಡರ್ ಮಾಡದೆ ಕೊರಿಯರ್ ಬಂದರೆ ಡೆಲಿವರಿ ಬಾಯ್ ನಿಂದ ಸಂಪೂರ್ಣ ವಿವರ ಪಡೆಯಿರಿ. ಅನುಮಾನವಿದ್ದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.

  MORE
  GALLERIES