ಆನ್ಲೈನ್ ಗೇಮಿಂಗ್, ಕ್ಯಾಸಿನೋಗಳನ್ನು ಶೇಕಡಾ 28 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸ್ಲ್ಯಾಬ್ ಅಡಿಯಲ್ಲಿ ತರಬೇಕೆಂದು ಜಿಎಸ್ಟಿ ಕೌನ್ಸಿಲ್ಗೆ ಶಿಫಾರಸು ಮಾಡಲಾಗಿದೆ ಎಂದು ನಂಬಲರ್ಹ ಮೂಲಗಳು ಸಿಎನ್ಬಿಸಿ-ಟಿವಿ 18 ಗೆ ತಿಳಿಸಿವೆ. ಈ ಶಿಫಾರಸಿನ ಕುರಿತು ಸಚಿವರ ಗುಂಪೊಂದು ಒಂದೆರಡು ದಿನಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆಯಿದೆ. (ಸಾಂಕೇತಿಕ ಚಿತ್ರ)
ಈ ಉದ್ಯಮದಲ್ಲಿ 400 ಕ್ಕೂ ಹೆಚ್ಚು ಕಂಪನಿಗಳಿವೆ. ಇದು 45,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಆನ್ಲೈನ್ ಸ್ಕಿಲ್ಸ್ ಬೇಸ್ಡ್ ಗೇಮಿಂಗ್ ಪ್ಲಾಟ್ಫಾರ್ಮ್ ಅಸೋಸಿಯೇಷನ್ ಈಗಾಗಲೇ ತಮ್ಮ ಮನವಿಯನ್ನು ಜಿಎಸ್ಟಿ ಅಧಿಕಾರಿಗಳಿಗೆ ಒಟ್ಟಿಗೆ ತಿಳಿಸಿದೆ. ಕ್ರೀಡೆಗಳು, ಫ್ಯಾಂಟಸಿ ಆಟಗಳು, ರಮ್ಮಿ, ಪೋಕರ್, ಚೆಸ್ನಂತಹ ಆನ್ಲೈನ್ ಕೌಶಲ್ಯ ಆಧಾರಿತ ಆಟಗಳನ್ನು ಒಳಗೊಂಡಿದೆ. (ಸಾಂಕೇತಿಕ ಚಿತ್ರ)