Online Fraud: ಯಾವ್ದ್ ಯಾವ್ದೋ ಲಿಂಕ್​ ಕ್ಲಿಕ್ ಮಾಡೋ ಮುನ್ನ ಎಚ್ಚರ, ಹೀಗೆ ಮಾಡಿ 9 ಲಕ್ಷ ಕಳೆದುಕೊಂಡ ಅಸಾಮಿ!

ಸೈಬರ್ ಅಪರಾಧಿಗಳು ಅಪರಾಧದ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಇದೀಗ ವ್ಯಕ್ತಿಯೊಬ್ಬ ಲಿಂಕ್ ಕ್ಲಿಕ್ ಮಾಡಿ 9 ಲಕ್ಷ ರೂಪಾಯಿ ಕಳೆದುಕೊಂಡಿರುವ ಹೊಸ ಘಟನೆ ದೆಹಲಿಯಿಂದ ಬೆಳಕಿಗೆ ಬಂದಿದೆ.

First published:

  • 17

    Online Fraud: ಯಾವ್ದ್ ಯಾವ್ದೋ ಲಿಂಕ್​ ಕ್ಲಿಕ್ ಮಾಡೋ ಮುನ್ನ ಎಚ್ಚರ, ಹೀಗೆ ಮಾಡಿ 9 ಲಕ್ಷ ಕಳೆದುಕೊಂಡ ಅಸಾಮಿ!

    ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಈಗೆಲ್ಲಾ ಏನಿದ್ದರೂ ಆನ್​ಲೈನ್​ ದೋಖಾ ಪ್ರಕರಣಗಳೇ ಹೆಚ್ಚು. ಇಲ್ಲೂ ಕೂಡ ವ್ಯಕ್ತಿಯೊಬ್ಬರು ಆನ್​ಲೈನ್​ ವಂಚನೆಗೆ ಒಳಗಾಗಿದ್ದಾರೆ.

    MORE
    GALLERIES

  • 27

    Online Fraud: ಯಾವ್ದ್ ಯಾವ್ದೋ ಲಿಂಕ್​ ಕ್ಲಿಕ್ ಮಾಡೋ ಮುನ್ನ ಎಚ್ಚರ, ಹೀಗೆ ಮಾಡಿ 9 ಲಕ್ಷ ಕಳೆದುಕೊಂಡ ಅಸಾಮಿ!

    ಎಎನ್‌ಐ ವರದಿ ಪ್ರಕಾರ, ದೆಹಲಿಯ ಪಿತಾಂಪುರ ನಿವಾಸಿ ಹರಿನ್ ಬನ್ಸಾಲ್ ಎಂಬ ವ್ಯಕ್ತಿ ಸದಾ ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಹುಡುಕುತ್ತಿದ್ದರು. ಹೀಗಿರುವಾಗ ಅವರಿಗೆ ಮನೆಯಿಂದ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಿ ಎಂಬ ಪೋಸ್ಟ್ ಮಾಡಿದ್ದಾರೆ.

    MORE
    GALLERIES

  • 37

    Online Fraud: ಯಾವ್ದ್ ಯಾವ್ದೋ ಲಿಂಕ್​ ಕ್ಲಿಕ್ ಮಾಡೋ ಮುನ್ನ ಎಚ್ಚರ, ಹೀಗೆ ಮಾಡಿ 9 ಲಕ್ಷ ಕಳೆದುಕೊಂಡ ಅಸಾಮಿ!

    ಇದನ್ನು ಕಂಡ ಹರಿನ್​ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಕೂಡಲೇ ಆ ಲಿಂಕ್ ಇವರನ್ನು ವಾಟ್ಸಾಪ್​ಗೆ ತೆಗೆದುಕೊಂಡು ಹೋಗಿದೆ. ಇದಾದ ನಂತರ, ಅಪರಿಚಿತ ವ್ಯಕ್ತಿ ಹರಿನ್‌ಗೆ ವೆಬ್‌ಸೈಟ್‌ಗೆ ಲಿಂಕ್ ನೀಡಿ, ಸ್ವತಃ ನೋಂದಾಯಿಸಲು ಹೇಳಿದ್ದಾನೆ.

    MORE
    GALLERIES

  • 47

    Online Fraud: ಯಾವ್ದ್ ಯಾವ್ದೋ ಲಿಂಕ್​ ಕ್ಲಿಕ್ ಮಾಡೋ ಮುನ್ನ ಎಚ್ಚರ, ಹೀಗೆ ಮಾಡಿ 9 ಲಕ್ಷ ಕಳೆದುಕೊಂಡ ಅಸಾಮಿ!

    ವೆಬ್‌ಸೈಟ್ ವ್ಯಕ್ತಿಯನ್ನು ಮನೆಯಿಂದಲೇ ಕೆಲವು ಕೆಲಸಗಳನ್ನು ಮಾಡಲು ಹೇಳಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಂತರ ವೆಬ್‌ಸೈಟ್ ಸಂತ್ರಸ್ತರಿಗೆ ಸ್ವಲ್ಪ ಹಣವನ್ನು ಠೇವಣಿ ಮಾಡಲು ಮತ್ತು ಹಿಂಪಡೆಯಲು ಹೇಳಿದೆ. ಇದಕ್ಕಾಗಿ ಅವರು ಅಸಲು ಮೊತ್ತದ ಜೊತೆಗೆ ಕಮಿಷನ್ ಪಡೆಯುತ್ತಾರೆ.

    MORE
    GALLERIES

  • 57

    Online Fraud: ಯಾವ್ದ್ ಯಾವ್ದೋ ಲಿಂಕ್​ ಕ್ಲಿಕ್ ಮಾಡೋ ಮುನ್ನ ಎಚ್ಚರ, ಹೀಗೆ ಮಾಡಿ 9 ಲಕ್ಷ ಕಳೆದುಕೊಂಡ ಅಸಾಮಿ!

    ಸಂತ್ರಸ್ತರು ಆರಂಭದಲ್ಲಿ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಅವರು ತಕ್ಷಣವೇ ಕಮಿಷನ್ ಜೊತೆಗೆ ಹಣವನ್ನು ಪಡೆದರು ಎಂದು ವರದಿಯಲ್ಲಿ ಹೇಳಲಾಗಿದೆ. ಈ ಮೂಲಕ ಸಂತ್ರಸ್ತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ಖುಷಿಯಾದ ಹರಿನ್​ 9,32,000 ಠೇವಣಿ ಇಟ್ಟಿದ್ದಾರೆ. ಆದರೆ ಈ ಹಣ ವಾಪಸ್ ಬಂದಿಲ್ಲ.

    MORE
    GALLERIES

  • 67

    Online Fraud: ಯಾವ್ದ್ ಯಾವ್ದೋ ಲಿಂಕ್​ ಕ್ಲಿಕ್ ಮಾಡೋ ಮುನ್ನ ಎಚ್ಚರ, ಹೀಗೆ ಮಾಡಿ 9 ಲಕ್ಷ ಕಳೆದುಕೊಂಡ ಅಸಾಮಿ!

    ತನಗೆ ವಂಚನೆಯಾಗಿದೆ ಎಂದು ತಿಳಿದಾಗ ಅವರು ದೂರು ದಾಖಲಿಸಿದ್ದು, ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಂಕಿತ್ (30) ಮತ್ತು ಸುಧೀರ್ ಕುಮಾರ್ (45) ಎಂಬ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 77

    Online Fraud: ಯಾವ್ದ್ ಯಾವ್ದೋ ಲಿಂಕ್​ ಕ್ಲಿಕ್ ಮಾಡೋ ಮುನ್ನ ಎಚ್ಚರ, ಹೀಗೆ ಮಾಡಿ 9 ಲಕ್ಷ ಕಳೆದುಕೊಂಡ ಅಸಾಮಿ!

    ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದವು. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಅನುಮಾನಾಸ್ಪದ ಲಿಂಕ್ ಅನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಬೇಕು

    MORE
    GALLERIES