ಲೋನ್ನಲ್ಲಿ ಓಲಾ ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸಿದರೆ ತಿಂಗಳಿಗೆ ರೂ. 3,400 ರಿಂದ ಇಎಂಐ ಪ್ರಾರಂಭವಾಗಲಿದೆ. 10 ಸಾವಿರ ಡೌನ್ ಪೇಮೆಂಟ್ ಪಾವತಿಸಿದರೆ ಶೇ 8.99ರ ಬಡ್ಡಿದರದಲ್ಲಿ ಒಟ್ಟು 48 ತಿಂಗಳುಗಳು ಇಎಂಐ ಕಟ್ಟಬೇಕಾಗುತ್ತದೆ. ಡೌನ್ ಪೇಮೆಂಟ್ ಪಾವತಿಸದಿದ್ದರೆ, ಅಥವಾ ಹೆಚ್ಚಿನ ಡೌನ್ ಪೇಮೆಂಟ್ ಮಾಡಿದರೆ ಇಎಂಐ ಮತ್ತು ಬಡ್ಡಿದರದಲ್ಲಿ ಬದಲಾವಣೆಯಾಗಲಿದೆ.