1. ನಿಮಗೆ ಮತದಾನದ ಹಕ್ಕು ಇದ್ಯಾ? ಆದ್ರೆ ವೋಟರ್ ಐಡಿಯನ್ನು ಕಳೆದುಕೊಂಡಿದ್ದೀರಾ? ಅರೇ ಎಲೆಕ್ಷನ್ ಬೇರೆ ಹತ್ತಿರ ಬಂತು ಅಂತ ಟೆನ್ಶನ್ ಆಗಬೇಡಿ. ನೀವು ಈಗ ಒಂದೇ ನಿಮಿಷದಲ್ಲಿ ಇ-ವೋಟರ್ ಐಡಿ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಭಾರತೀಯ ಚುನಾವಣಾ ಆಯೋಗ (ಇಸಿಐ) ಎರಡು ವರ್ಷಗಳ ಹಿಂದೆ ಡಿಜಿಟಲ್ ವೋಟರ್ ಐಡಿ ಕಾರ್ಡ್ ಡೌನ್‌ಲೋಡ್ ಮಾಡುವ ವೈಶಿಷ್ಟ್ಯವನ್ನು ಪರಿಚಯಿಸಿತು. (ಸಾಂಕೇತಿಕ ಚಿತ್ರ)
2. ಅಂದರೆ ನೀವು ಇ-ವೋಟರ್ ಐಡಿ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ನ ಡಿಜಿಟಲ್ ಪ್ರತಿಯನ್ನು ಡೌನ್‌ಲೋಡ್ ಮಾಡುವಂತೆಯೇ ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು. ಭಾರತದಲ್ಲಿ ಪ್ರಸ್ತುತ 9.8 ಕೋಟಿ ಮತದಾರರು ಇ-ವೋಟರ್ ಐಡಿ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಹೊಂದಿದ್ದರೆ, ಕೇವಲ 1 ಶೇಕಡಾ ಮತದಾರರು ಮಾತ್ರ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿದ್ದಾರೆ ಎಂದು ದಿ ಹಿಂದೂ ಲೇಖನವನ್ನು ಪ್ರಕಟಿಸಿದೆ. (ಸಾಂಕೇತಿಕ ಚಿತ್ರ)
3. ಡಿಜಿಟಲ್ ವೋಟರ್ ಐಡಿ ಕಾರ್ಡ್ PDF ಫೈಲ್ ರೂಪದಲ್ಲಿದೆ. ಇದನ್ನು ಎಲೆಕ್ಟ್ರಾನಿಕ್ ಎಲೆಕ್ಟೋರಲ್ ಫೋಟೋ ಐಡಿ ಕಾರ್ಡ್ (E-EPIC) ಎಂದು ಕರೆಯಲಾಗುತ್ತದೆ. ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್‌ನಿಂದ ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಚುನಾವಣೆಯ ಸಮಯದಲ್ಲಿ ಮತಗಟ್ಟೆಯಲ್ಲಿ ನಿಮ್ಮ ಡಿಜಿಟಲ್ ವೋಟರ್ ಐಡಿಯನ್ನು ತೋರಿಸುವ ಮೂಲಕ ನಿಮ್ಮ ಮತವನ್ನು ನೀವು ಚಲಾಯಿಸಬಹುದು. ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಡಿಜಿಲಾಕರ್ ಅಪ್ಲಿಕೇಶನ್‌ನ ಬಳಕೆದಾರರು ಈ ಅಪ್ಲಿಕೇಶನ್‌ನಲ್ಲಿ ಇ-ವೋಟರ್ ಐಡಿ ಕಾರ್ಡ್ ಅನ್ನು ಅಪ್‌ಲೋಡ್ ಮಾಡಬಹುದು. (ಸಾಂಕೇತಿಕ ಚಿತ್ರ)
4. ಮತದಾರರು ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು http://voterportal.eci.gov.in/ ವೆಬ್‌ಸೈಟ್ ಅಥವಾ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ https://www.nvsp.in/ ಅಥವಾ ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದು. ತಮ್ಮ ವಿವರಗಳೊಂದಿಗೆ ಲಾಗಿನ್ ಆದ ನಂತರ ಅವರು ಮತದಾರರ ಗುರುತಿನ ಚೀಟಿ ಸಂಖ್ಯೆಯೊಂದಿಗೆ ಡಿಜಿಟಲ್ ವೋಟರ್ ಐಡಿ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಕೆಳಗಿನ ಹಂತಗಳ ಮೂಲಕ ಹೇಗೆ ತಿಳಿಯಿರಿ. (ಸಾಂಕೇತಿಕ ಚಿತ್ರ)
5. ಮೊದಲು https://www.nvsp.in/ ಅಥವಾ http://voterportal.eci.gov.in/ ವೆಬ್‌ಸೈಟ್ ತೆರೆಯಿರಿ. ನೀವು ಮೊದಲೇ ನೋಂದಾಯಿಸಿದ್ದರೆ, ಆ ವಿವರಗಳೊಂದಿಗೆ ನೀವು ಲಾಗಿನ್ ಆಗಬೇಕು. ಇಲ್ಲದಿದ್ದರೆ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕು. ಲಾಗಿನ್ ಆದ ನಂತರ ಮುಖಪುಟದಲ್ಲಿ E-EPIC ಡೌನ್‌ಲೋಡ್ ಕ್ಲಿಕ್ ಮಾಡಿ. EPIC ಸಂಖ್ಯೆಯನ್ನು ನಮೂದಿಸಿ, ರಾಜ್ಯದ ಹೆಸರನ್ನು ಆಯ್ಕೆಮಾಡಿ ಮತ್ತು ಹುಡುಕಿ ಮೇಲೆ ಕ್ಲಿಕ್ ಮಾಡಿ. (ಸಾಂಕೇತಿಕ ಚಿತ್ರ)
6. ಅದರ ನಂತರ Send OTP ಮೇಲೆ ಕ್ಲಿಕ್ ಮಾಡಿ. ಆ ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ನೀವು OTP ಅನ್ನು ನಮೂದಿಸಿದರೆ, ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ. ಅದರ ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಡೌನ್‌ಲೋಡ್ ಇ-ಇಪಿಐಸಿ ಕ್ಲಿಕ್ ಮಾಡಿ. ಡಿಜಿಟಲ್ ವೋಟರ್ ಐಡಿ ಕಾರ್ಡ್ ಅನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿ. (ಸಾಂಕೇತಿಕ ಚಿತ್ರ)