Toll Tax: ವಾಹನ ಸವಾರರಿಗೆ ಬಿಗ್ ಶಾಕ್!

Expressways | ಈ ತಿಂಗಳ ಮೊದಲ ದಿನದಂದು ಗೃಹ ಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಶಾಕ್ ನೀಡಿತ್ತು. ಇದೀಗ ಏಪ್ರಿಲ್ ಒಂದರಿಂದ ಮತ್ತೊಂದು ಶಾಕ್ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.

First published:

  • 19

    Toll Tax: ವಾಹನ ಸವಾರರಿಗೆ ಬಿಗ್ ಶಾಕ್!

    National Highways | ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ರಯಾಣಿಸುವವರಿಗೆ ಇದು ಬ್ಯಾಡ್ ನ್ಯೂಸ್ ಆಗಿದೆ. ಮುಂದಿನ ತಿಂಗಳು ಅಂದ್ರೆ ಏಪ್ರಿಲ್​ನಿಂದ ಟೋಲ್​ ಗೇಟ್​ ಶುಲ್ಕಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಶೀಘ್ರದಲ್ಲಿಯೇ ಟೋಲ್ ದರ ಹೆಚ್ಚಿಸಲು ಸರ್ಕಾರ ಮುಂದಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Toll Tax: ವಾಹನ ಸವಾರರಿಗೆ ಬಿಗ್ ಶಾಕ್!

    ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಏಪ್ರಿಲ್ 1 ರಿಂದ ಟೋಲ್ ದರವನ್ನು ಹೆಚ್ಚಿಸಲಿದೆಯಂತೆ. ಟೋಲ್ ದರಗಳು ಶೇಕಡಾ 5 ರಿಂದ 10 ರಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Toll Tax: ವಾಹನ ಸವಾರರಿಗೆ ಬಿಗ್ ಶಾಕ್!

    ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಯಮಗಳು 2008 ರ ಪ್ರಕಾರ, ಪ್ರತಿ ವರ್ಷ ಶುಲ್ಕ ದರಗಳನ್ನು ಪರಿಷ್ಕರಿಸಬಹುದು. ಹೊಸ ದರಗಳು ಏಪ್ರಿಲ್ 1 ರಿಂದ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ. ಶುಲ್ಕ ಏರಿಕೆ ಸಂಬಂಧ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಇದಕ್ಕೆ ಕೇಂದ್ರದ ಅಂತಿಮ ಅನುಮೋದನೆ ಅಗತ್ಯವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Toll Tax: ವಾಹನ ಸವಾರರಿಗೆ ಬಿಗ್ ಶಾಕ್!

    ಟೋಲ್ ದರ ಹೆಚ್ಚಳದ ಕುರಿತು ಕೇಂದ್ರ ರಸ್ತೆ ಸಾರಿಗೆ ಇಲಾಖೆ ಈ ತಿಂಗಳ ಕೊನೆಯ ವಾರದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ಶುಲ್ಕ ಹೆಚ್ಚಾದ್ರೆ ವಾಹನ ಸವಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Toll Tax: ವಾಹನ ಸವಾರರಿಗೆ ಬಿಗ್ ಶಾಕ್!

    ವರದಿಗಳ ಪ್ರಕಾರ, ಕಾರುಗಳು ಮತ್ತು ಇತರ ಲಘು ವಾಹನಗಳ ಮೇಲಿನ ಟೋಲ್ ದರಗಳು ಶೇಕಡಾ 5 ರವರೆಗೆ ಹೆಚ್ಚಾಗಬಹುದು. ಇನ್ನು ಭಾರೀ ವಾಹನಗಳ ವಿಚಾರಕ್ಕೆ ಬಂದರೆ ಟೋಲ್ ದರದಲ್ಲಿ ಶೇ.10ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Toll Tax: ವಾಹನ ಸವಾರರಿಗೆ ಬಿಗ್ ಶಾಕ್!

    ಇತ್ತೀಚೆಗಷ್ಟೇ ತೆರೆದಿರುವ ದೆಹಲಿ ಮುಂಬೈ ಎಕ್ಸ್ ಪ್ರೆಸ್ ವೇನಲ್ಲಿಯೂ ಟೋಲ್ ದರ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ಕಿಲೋಮೀಟರ್‌ಗೆ ಪ್ರತಿ ಟೋಲ್‌ಗೆ 2.19 ರೂಪಾಯಿ ಸಂಗ್ರಹಿಸಲಾಗುತ್ತಿದೆ. ಆದರೆ ಶೇ.10ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Toll Tax: ವಾಹನ ಸವಾರರಿಗೆ ಬಿಗ್ ಶಾಕ್!

    ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರಸ್ತುತ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರತಿದಿನ ಸುಮಾರು 20 ಸಾವಿರ ವಾಹನಗಳು ಸಂಚರಿಸುತ್ತಿವೆ. ಮುಂದಿನ ಆರು ತಿಂಗಳಲ್ಲಿ ಈ ಸಂಖ್ಯೆ 50 ಸಾವಿರದಿಂದ 60 ಸಾವಿರ ತಲುಪುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Toll Tax: ವಾಹನ ಸವಾರರಿಗೆ ಬಿಗ್ ಶಾಕ್!

    ಈಸ್ಟ್ರನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ದರಗಳು ಹೆಚ್ಚಾಗುತ್ತವೆ. ಟೋಲ್ ಪ್ಲಾಜಾದಿಂದ 20 ಕಿಮೀ ವರೆಗಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಮಾಸಿಕ ಪಾಸ್‌ಗಳನ್ನು ಸಹ ನೀಡಲಾಗುತ್ತದೆ. ಇವುಗಳ ಬೆಲೆ ಕಡಿಮೆ ಇರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Toll Tax: ವಾಹನ ಸವಾರರಿಗೆ ಬಿಗ್ ಶಾಕ್!

    ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 2008 ರ ಪ್ರಕಾರ, ಟೋಲ್ ಪ್ಲಾಜಾಗಳ ಬಳಿ ವಾಸಿಸುವವರಿಗೆ ಯಾವುದೇ ಶುಲ್ಕ ವಿನಾಯಿತಿ ಇಲ್ಲ. ಆದರೆ ಮಾಸಿಕ ಪಾಸ್‌ಗಳನ್ನು ನೀಡಲಾಗುತ್ತದೆ. ಇದರಿಂದ ಅವರಿಗೆ ಅನುಕೂಲವಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES