ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಆದಾಯ ಪಡೆಯಲು ರೈತರು ಪ್ರಯೋಗ ಮಾಡುತ್ತಿದ್ದಾರೆ. ಇದರಲ್ಲಿ ರೈತರು ಸಾವಯವ ಕೃಷಿಯ ಮೂಲಕ ಸಾಕಷ್ಟು ಹಣವನ್ನು ಗಳಿಸುವ ಬಗ್ಗೆ ನೀವು ಆಗಾಗ್ಗೆ ಕೇಳಿದ್ದೀರಿ, ಆದರೆ ನಿಮಗೆ ನೈಸರ್ಗಿಕ ಕೃಷಿಯ ಬಗ್ಗೆ ಗೊತ್ತಿದ್ಯಾ? ಹೆಸರಿನಲ್ಲಿ ಎರಡೂ ಒಂದೇ ರೀತಿ ಕಂಡರೂ ಎರಡೂ ಒಂದಕ್ಕೊಂದು ಭಿನ್ನ. ಮುಖ್ಯ ವ್ಯತ್ಯಾಸವೆಂದರೆ ನೈಸರ್ಗಿಕ ಕೃಷಿ ಶೂನ್ಯ ಬಜೆಟ್ ಕೃಷಿ.
ನೈಸರ್ಗಿಕ ಕೃಷಿ ಹೇಗೆ ಕೆಲಸ ಮಾಡುತ್ತದೆ?: ರೈತರು ಈ ಕೃಷಿಯಲ್ಲಿ ಯಾವುದೇ ರೀತಿಯ ರಾಸಾಯನಿಕ ಅಥವಾ ಗೊಬ್ಬರವನ್ನು ಬಳಸಬೇಕಾಗಿಲ್ಲ. ಈ ಕೃಷಿಯಲ್ಲಿ ದೇಶಿ ಹಸು ಪ್ರಮುಖ ಪಾತ್ರ ವಹಿಸುತ್ತದೆ. ಈ ಬೇಸಾಯವು ದನದ ಸಗಣಿ ಮತ್ತು ಮೂತ್ರವನ್ನು ಅವಲಂಬಿಸಿದೆ. ಒಬ್ಬ ರೈತನ ಬಳಿ ಸ್ಥಳೀಯ ಹಸು ಮತ್ತು ಸ್ವಲ್ಪ ಜಮೀನು ಇದ್ದರೆ, ಅವನು ಒಂದು ರೂಪಾಯಿ ಖರ್ಚು ಮಾಡದೆ ಈ ಕೃಷಿ ಮಾಡಬಹುದು. ಈ ಕೃಷಿಯಲ್ಲಿ ಬಳಸುವ ಗೊಬ್ಬರವನ್ನು ಹಸುವಿನ ಸಗಣಿಯಿಂದ ತಯಾರಿಸಲಾಗುತ್ತದೆ, ಆದರೆ ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಬಳಸುವ ಕೀಟನಾಶಕವನ್ನು ಗೋಮೂತ್ರ ಮತ್ತು ಕೆಲವು ಮರಗಳ ಎಲೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ.