ಫಾಸ್ಟ್ಫುಡ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ರಸ್ತೆ ಬದಿಗಳಲ್ಲಿ ಸಿಗೋ ಫಾಸ್ಟ್ ಫುಡ್ಗೆ ಬೇರೆ ಕ್ರೇಜ್ ಇದೆ ಎಂದರೆ ತಪ್ಪಾಗಲ್ಲ. ಇತ್ತೀಚೆಗೆ ಮಶ್ರೂಮ್ ಬಿರಿಯಾನಿ ಸಖತ್ ಟ್ರೆಂಡ್ ಆಗುತ್ತಿದೆ. ಇಲ್ಲೂ ಕೂಡ ಇಂಜಿನಿಯರ್ನೊಬ್ಬ ಮಶ್ರೂಮ್ ರೋಲ್ಸ್, ಮಶ್ರೂಮ್ ಚಿಲ್ಲಿ, ಮಶ್ರೂಮ್ 65, ಮಚ್ಚಾ ನೂಡಲ್ಸ್ ಹೀಗೆ ನಾನಾ ಬಗೆಯ ಅಣಬೆ ಖಾದ್ಯಗಳನ್ನು ಮಾಡಿ ಗ್ರಾಹಕರಿಗೆ ತಿನ್ನಿಸಿ ಕೈ ತುಂಬಾ ಆದಾಯ ಗಳಿಸುತ್ತಿದ್ದಾರೆ.
30 ರೂಪಾಯಿಯಿಂದ 200 ರೂಪಾಯಿವರೆಗೆ ಇಲ್ಲಿ ಅಣಬೆಯಿಂದ ಮಾಡಿದ ರುಚಿಕರ ತಿನಿಸುಗಳನ್ನು ಸವಿಯಬಹುದು. ಮಶ್ರೂಮ್ ಖಾದ್ಯಗಳಷ್ಟೇ ಅಲ್ಲ, 90ರ ದಶಕದಲ್ಲಿ ಅತ್ಯಂತ ಪ್ರಸಿದ್ಧ ಆಹಾರವಾಗಿದ್ದ ಮಟ್ಕಾ ನೂಡಲ್ಸ್ ಕೂಡ ಇಲ್ಲಿ ಸಿಗುತ್ತೆ. ಮಶ್ರೂಮ್ ರೆಸ್ಟೋರೆಂಟ್ ಮಾಸ್ಟರ್ ಎಂದೇ ಫೇಮಸ್ ಆಗಿರುವ ಕಮಲೇಶ್ ಇಂಜಿನಿಯರಿಂಗ್ ಮಾಡಿದ್ದಾರೆ. ಕಳೆದ 4 ತಿಂಗಳಿಂದ ಈ ಮೊಬೈಲ್ ಫಾಸ್ಟ್ ಫುಡ್ ನಡೆಸುತ್ತಿದ್ದಾರೆ. ಪ್ರತಿದಿನ ಸಂಜೆ 5ರಿಂದ ರಾತ್ರಿ 10ರವರೆಗೆ ಈ ಫುಡ್ ಟ್ರಕ್ ತೆರೆದಿರುತ್ತದೆ.