ಮುಂಬೈ - ಅಹ್ಮದಾಬಾದ್ ಮಧ್ಯ ಹೈಸ್ಪೀಡ್ ರೈಲ್ ಕಾರಿಡಾರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ಭಾಗವಾಗಿರುವ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಥಾಣೆ, ವಿರಾರ್, ಬೋಯಿಸರ್‌ಗಳಲ್ಲಿ ರೈಲ್ವೆ ಸ್ಟೇಷನ್‌ಗಳ ವಿನ್ಯಾಸವನ್ನು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಲಾಗಿದೆ. ಇದು ದೇಶದಲ್ಲೇ ಮೊದಲ ಬುಲೆಟ್ ರೈಲು ಯೋಜನೆ. ಇದನ್ನು ಮುಂಬೈ-ಅಹ್ಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ (MAHSR) ಅಥವಾ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗೆ ಕರೆಯಲಾಗುತ್ತಿದೆ. (ಚಿತ್ರ ಕೃಪೆ - Twitter - @TheMahaIndex)
ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಸ್ಟೇಷನ್ ವಿನ್ಯಾಸಕ್ಕೆ ಸಂಬಂಧಿಸಿದ ಕೆಲವು ಸ್ಲೈಡ್ಗಳನ್ನು ಇದುವರೆಗೆ ಬಿಡುಗಡೆ ಮಾಡಲಾಗಿತ್ತು. ಈ ಬಾರಿ ಸಂಪೂರ್ಣ ಸ್ಲೈಡ್‌ಗಳ ಸೆಟ್ ಬಿಡುಗಡೆಯಾಗಿದೆ. ಕಾರಿಡಾರ್ ವ್ಯಾಪ್ತಿಯ ನಾಲ್ಕು ಸ್ಟೇಷನ್‌ಗಳ ವಿನ್ಯಾಸವನ್ನು ಮೋಡ, ಅರೇಬಿಯಾ ಸಮುದ್ರದ ಅಲೆಗಳಂತೆ ಮಾಡಲಾಗಿದೆ. ಆದ್ದರಿಂದ ಈ ನಿಲ್ದಾಣಗಳನ್ನು ನೋಡಿದರೆ ಮೇಘಗಳು, ಅಲೆಗಳು ನೆನಪಿಗೆ ಬರಲಿದೆ. (ಚಿತ್ರ ಕೃಪೆ - Twitter - @TheMahaIndex)
ಬುಲೆಟ್ ರೈಲಿಗಾಗಿ ಮಹಾರಾಷ್ಟ್ರವು ಒಟ್ಟು ನಾಲ್ಕು ನಿಲ್ದಾಣಗಳನ್ನು ಇರಲಿವೆ. ಈ ನಾಲ್ಕು ನಿಲ್ದಾಣಗಳಲ್ಲಿ ಒಂದು ನಿಲ್ದಾಣ ಮುಂಬೈ ನಗರದಲ್ಲಿ ಇರಲಿದೆ. ಮುಂಬೈನಲ್ಲಿ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಉನ್ನತ ಮಟ್ಟದ ವ್ಯಾಪಾರ ಜಿಲ್ಲೆಯಾಗಿದೆ. ಮುಂಬೈನಲ್ಲಿನ ನಿಲ್ದಾಣದ ಜೊತೆಗೆ, ಮಹಾರಾಷ್ಟ್ರವು ವಿರಾರ್, ಥಾಣೆ ಮತ್ತು ಬೋಯಿಸರ್‌ಗಳಲ್ಲಿ ಮೂರು ನಿಲ್ದಾಣಗಳನ್ನು ಹೊಂದಿದೆ.