ಈ ಕಂಪನಿಯ ಹೆಸರು ಬಾಲಕೃಷ್ಣ ಇಂಡಸ್ಟ್ರೀಸ್ ಲಿಮಿಟೆಡ್ (Balkrishna Industries).ಇದು ಟೈರ್ ಉತ್ಪಾದನೆ ಮಾಡುತ್ತದೆ. ಬಾಲಕೃಷ್ಣ ಇಂಡಸ್ಟ್ರೀಸ್ ಮಾರುಕಟ್ಟೆಯಲ್ಲಿ ಉತ್ತಮ ಹಿಡಿತ ಹೊಂದಿದೆ. ಇದರಿಂದಲೇ 1 ರೂ.ಗಿದ್ದ ಶೇರುಗಳು 2,100 ರೂ.ವರೆಗೆ ತಲುಪಿವೆ. ಈ ಕಂಪನಿ ಒಂದು ವರ್ಷದಲ್ಲಿ ಗರಿಷ್ಠ 2724.40 ರೂ ಮತ್ತು ಕನಿಷ್ಠ 1681.95 ರೂ. ಮುಖಬೆಲೆಯನ್ನು ಹೊಂದಿತ್ತು. (ಸಾಂದರ್ಭಿಕ ಚಿತ್ರ)
ಬಾಲಕೃಷ್ಣ ಇಂಡಸ್ಟ್ರೀಸ್ ಕಳೆದ ಹತ್ತು ವರ್ಷಗಳಲ್ಲಿ 17 ಪಟ್ಟು ಹೆಚ್ಚು ಹಣವನ್ನು ಗಳಿಸಿದೆ. 2012 ರಲ್ಲಿ ಹೂಡಿಕೆದಾರರು ರೂ. 1 ಲಕ್ಷ ಹೂಡಿಕೆ ಮಾಡಿ ಹೂಡಿಕೆ ಮುಂದುವರಿಸಿದ್ರೆ ಈ ಮೊತ್ತ 17.11 ಲಕ್ಷ ರೂ.ಗಳಷ್ಟು ಏರಿಕೆ ಆಗಿರುತ್ತದೆ. . ಕಳೆದ ಐದು ವರ್ಷಗಳಲ್ಲಿ ಬಾಲಕೃಷ್ಣ ಇಂಡಸ್ಟ್ರೀಸ್ ಶೇರುಗಳು ಸುಮಾರು 157 ಪ್ರತಿಶತದಷ್ಟು ಏರಿಕೆ ಕಂಡಿವೆ. (ಸಾಂದರ್ಭಿಕ ಚಿತ್ರ)