ದೇಶದ ಅಗ್ರಮಾನ್ಯ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
2/ 8
ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
3/ 8
ಆದರೆ, ಇವರಿಬ್ಬರ ಮದುವೆ ಯಾವಾಗ ಅನ್ನುವ ಬಗ್ಗೆ ಇನ್ನೂ ಯಾವುದೇ ಸುದ್ದಿ ಬಂದಿಲ್ಲ.
4/ 8
ಅನಂತ್ ಮತ್ತು ರಾಧಿಕಾ ಬಹಳ ಸಮಯದಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ರಾಧಿಕಾ ಅಂಬಾನಿ ಕುಟುಂಬದ ಹಲವಾರು ಕಾರ್ಯಕ್ರಮಗಳಲ್ಲಿ ಕುಟುಂಬದ ಇತರ ಸದಸ್ಯರೊಂದಿಗೆ ಕಾಣಿಸಿಕೊಂಡಿದ್ದರು.
5/ 8
ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್ಜಿ ದೇವಸ್ಥಾನದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಸಲಾಗಿದೆ.
6/ 8
ರಾಧಿಕಾ ಮರ್ಚೆಂಟ್ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ.ಅನಂತ್ ಮತ್ತು ರಾಧಿಕಾ ಕೆಲವು ವರ್ಷಗಳಿಂದ ಪರಸ್ಪರ ಪರಿಚಿತರು.ಅನಂತ್ ಅವರು USA ಯ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ.
7/ 8
ಅಂಬಾನಿ ಮನೆಗೆ ಇಬ್ಬರು ಪುಟಾಣಿಗಳ ಆಗಮನದ ನಂತರ ಹೊಸ ಸೊಸೆ ಆಗಮಿಸಲಿದ್ದಾರೆ. ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ.
8/ 8
ಅಂಬಾನಿ ಕುಟುಂಬದ ಸೊಸೆ ರಾಧಿಕಾ ಮರ್ಚೆಂಟ್ ಶೈಲಾ ಮತ್ತು ವೀರೇನ್ ಮರ್ಚೆಂಟ್ ದಂಪತಿಯ ಪುತ್ರಿ. ರಾಧಿಕಾ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಅವರು ಎನ್ಕೋರ್ ಹೆಲ್ತ್ಕೇರ್ ಮಂಡಳಿಯಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.