ಮಾವಿನ ಸೀಸನ್ಗೆ ಇನ್ನೇನು ದಿನಗಣನೆ. ಮಾವಿನ ಕಾಯಿಗಳು ಬಲಿತು ಹಣ್ಣಾಗಲು ಸಜ್ಜಾಗುತ್ತಿವೆ. ಮರದ ಕೊಂಬೆಗಳು ಮಾವಿನ ಭಾರ ತಾಳದೇ ಬಾಗುತ್ತಿವೆ. ಪೇಟೆಗಳಲ್ಲಿ ಮಾವಿನ ಹಣ್ಣಿನ ಮಾರಾಟ ಶುರುವಾಗಿ ಆಗಲೇ ತಿಂಗಳು ಕಳೆದಿವೆ. ಒಂದು ಮಾವಿನ ಹಣ್ಣಿಗೆ 100-200ರು ಕೊಟ್ಟು ಮನೆಗೆ ತಂದು ಸವಿದವರೂ ಇದ್ದಾರೆ. ಇನ್ನೂ ಹೆಚ್ಚು ತುಟ್ಟಿಯ ಮಾವಿನ ರುಚಿ ಸವಿದವರೂ ಇರಬಹುದು. ಆದರೆ ಇಲ್ಲೊಂದು ಮಾವಿನ ಹಣ್ಣಿನ ಪ್ರತಿ ಕೆಜೆ ಬೆಲೆ 2.70 ಲಕ್ಷ ಇದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು!