ಪ್ರಸಿದ್ಧ ವ್ಯಾಪಾರ ಪ್ರಕಟಣೆಯಾದ ಫೋರ್ಬ್ಸ್, ಏಪ್ರಿಲ್ 4 ರಂದು 2023 ರ ಬಿಲಿಯನೇರ್‌ಗಳ ವಾರ್ಷಿಕ ಪಟ್ಟಿಯನ್ನು ಪ್ರಕಟಿಸಿತು. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ಎಂಡಿ ಮುಖೇಶ್ ಅಂಬಾನಿ ಈಗ ಫೋರ್ಬ್ಸ್ ಪ್ರಕಾರ ಏಷ್ಯಾ ಮತ್ತು ಭಾರತ ಎರಡರಲ್ಲೂ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್, 2023 ರ ಭಾರತದ ಬಿಲಿಯನೇರ್‌ಗಳ ಪಟ್ಟಿಗೆ 16 ಹೊಸ ಬಿಲಿಯನೇರ್‌ಗಳನ್ನು ಸೇರಿಸಿದ್ದು ಅದರಲ್ಲಿ ಮೂವರು ಮಹಿಳೆಯರು ಎಂಬುದು ವಿಶೇಷವಾಗಿದೆ.
ಹ್ಯಾವೆಲ್ಸ್ ಇಂಡಿಯಾದ ವಿನೋದ್ ರಾಯ್ ಗುಪ್ತಾ ಭಾರತದ ನಾಲ್ಕನೇ ಶ್ರೀಮಂತ ಮಹಿಳೆ ಎಂದೆನಿಸಿದ್ದಾರೆ. 1958 ರಲ್ಲಿ ವಿನೋದ್ ರಾಯ್ ಗುಪ್ತಾ ಅವರ ಪತಿ ಕಿಮತ್ ರಾಯ್ ಗುಪ್ತಾ ಹ್ಯಾವೆಲ್ಸ್ ಇಂಡಿಯಾದಂತಹ ಬೃಹತ್ ಸಂಸ್ಥೆಯನ್ನು ಸ್ಥಾಪಿಸಿದರು. ಹ್ಯಾವೆಲ್ಸ್ ಇಂಡಿಯಾದ ಪ್ರಸ್ತುತ ಸಿಇಒ ಅನಿಲ್ ರಾಯ್ ಗುಪ್ತಾ ಇದನ್ನು ಎಲೆಕ್ಟ್ರಿಕಲ್ ಉತ್ಪನ್ನಗಳ ವ್ಯಾಪಾರ ಕಂಪನಿಯಾಗಿ ಪ್ರಾರಂಭಿಸಿದರು.
3.9 ಬಿಲಿಯನ್ ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿರುವ ವಿನೋದ್ ರಾಯ್ ಗುಪ್ತಾ: ವಿನೋದ್ ರಾಯ್ ಗುಪ್ತಾ ಮತ್ತು ಅವರ ಮಗ ಅನಿಲ್ ರಾಯ್ ಗುಪ್ತಾ ಅವರ ಹೆಚ್ಚಿನ ಸಂಪತ್ತು ಹ್ಯಾವೆಲ್ಸ್ ಇಂಡಿಯಾದ ಮಾಲೀಕತ್ವದಿಂದ ಗಳಿಸಿದ್ದಾಗಿದೆ. 78 ರ ಹರೆಯದ ವಿನೋದ್ ರಾಯ್ ಗುಪ್ತಾ ಅವರು ಭಾರತದ ನಾಲ್ಕನೇ ಶ್ರೀಮಂತ ಮಹಿಳೆಯಾಗಿದ್ದಾರೆ ಮತ್ತು ಫೋರ್ಬ್ಸ್ ಪ್ರಕಾರ $ 3.9 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಕಂಪನಿಯ ಪ್ರಸ್ತುತ ಸಿಇಒ ಅನಿಲ್ ರಾಯ್ ಗುಪ್ತಾ ಸಂಸ್ಥೆಯನ್ನು ಎಲೆಕ್ಟ್ರಿಕಲ್ ಉತ್ಪನ್ನಗಳ ವ್ಯಾಪಾರ ಕಂಪನಿಯಾಗಿ ಪ್ರಾರಂಭಿಸಿದರು. ಹ್ಯಾವೆಲ್ಸ್ ಇಂಡಿಯಾ ಫ್ಯಾನ್‌ಗಳು, ಫ್ರೀಜರ್‌ಗಳು, ಏರ್ ಕಂಡಿಷನರ್‌ಗಳು ಮತ್ತು ವಾಷಿಂಗ್ ಮೆಷಿನ್‌ಗಳಿಂದ ಹಿಡಿದು ಎಲೆಕ್ಟ್ರಿಕಲ್ ಮತ್ತು ಲೈಟಿಂಗ್ ಫಿಕ್ಚರ್‌ಗಳವರೆಗೆ ಎಲ್ಲವನ್ನೂ ತಯಾರಿಸುತ್ತದೆ. 14 ಘಟಕಗಳೊಂದಿಗೆ, ಹ್ಯಾವೆಲ್ಸ್ ಇಂದು ತನ್ನ ಸರಕುಗಳನ್ನು 50 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದೆ.
ಪ್ರಸ್ತುತ, ಹ್ಯಾವೆಲ್ಸ್ ಇಂಡಿಯಾದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಅನಿಲ್ ರಾಯ್ ಗುಪ್ತಾ ಅವರು ದೆಹಲಿಯ ಸೇಂಟ್ ಕ್ಸೇವಿಯರ್ ಶಾಲೆ, ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಯುಎಸ್‌ನ ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದಿಂದ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅವರು ವೇಕ್ ಫಾರೆಸ್ಟ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿಯನ್ನೂ ಪಡೆದಿದ್ದಾರೆ.
ಸ್ವಯಂ ನಿರ್ಮಿತ ಬಿಲಿಯನೇರ್ ಸರೋಜ್ ರಾಣಿ ಗುಪ್ತಾ: ವಿನೋದ್ ರಾಯ್ ಗುಪ್ತಾ ನಂತರ, ಪಟ್ಟಿಯಲ್ಲಿರುವ ಮೂರನೇ ಮಹಿಳೆ ಸರೋಜ್ ರಾಣಿ ಗುಪ್ತಾ ಅವರು ಫೋರ್ಬ್ಸ್ ಪ್ರಕಾರ ಸ್ವಯಂ ನಿರ್ಮಿತ ಬಿಲಿಯನೇರ್ ಆಗಿದ್ದಾರೆ. ಸರೋಜ್ ಮತ್ತು ಆಕೆಯ ದಿವಂಗತ ಪತಿ ಎಸ್‌ಕೆ ಗುಪ್ತಾ ಅವರು 1986 ರಲ್ಲಿ APL ಅಪೊಲೊ ಟ್ಯೂಬ್‌ಗಳನ್ನು ಸಹ-ಸ್ಥಾಪಿಸಿದರು. ಗುಪ್ತಾ $1.2 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಸಾವಿತ್ರಿ ಜಿಂದಾಲ್ ಅವರ ನಿವ್ವಳ ಮೌಲ್ಯ $17 ಬಿಲಿಯನ್ : ಭಾರತದ ಅತ್ಯಂತ ಶ್ರೀಮಂತ ಮಹಿಳೆ, 73 ವರ್ಷದ ರಾಜಕಾರಣಿ ಮತ್ತು ಜಿಂದಾಲ್ ಗ್ರೂಪ್‌ನ ಮಾಜಿ ಅಧ್ಯಕ್ಷೆ ಸಾವಿತ್ರಿ ಜಿಂದಾಲ್ ಅವರ ನಿವ್ವಳ ಮೌಲ್ಯ $17 ಬಿಲಿಯನ್. ಇವರ ನಂತರ ರೋಹಿಕಾ ಸೈರಸ್ ಮಿಸ್ತ್ರಿ ಮತ್ತು ರೇಖಾ ಜುಂಜುನ್ವಾಲಾ ಸ್ಥಾನ ಪಡೆದಿದ್ದಾರೆ. 65 ವರ್ಷದ ಲೀನಾ ತಿವಾರಿ ಮತ್ತು 77 ವರ್ಷದ ವಿನೋದ್ ರಾಯ್ ಗುಪ್ತಾ ಕೂಡ ಅಗ್ರ ಭಾರತದ ಶ್ರೀಮಂತ ಮಹಿಳೆಯರು ಎಂದೆನಿಸಿದ್ದಾರೆ.