ಕುನಾಲ್ ಶಾ: ಸ್ಟಾರ್ಟ್ಅಪ್ಗಳಲ್ಲಿ ಅತಿ ಹೆಚ್ಚು ಹೂಡಿಕೆಗಳನ್ನು ಹೊಂದಿರುವ ಉದ್ಯಮಿಗಳ ಪಟ್ಟಿಯಲ್ಲಿ ಕುನಾಲ್ ಶಾ ಅಗ್ರಸ್ಥಾನದಲ್ಲಿದ್ದಾರೆ.ಫಿನ್ಟೆಕ್ ಸಂಸ್ಥೆಯ ಕ್ರೆಡ್ ಸಂಸ್ಥಾಪಕರಾಗಿರುವ ಕುನಾಲ್,ಯುನಿಕಾರ್ನ್ ಮೆನ್ಸಾ ಬ್ರಾಂಡ್ಗಳು, ಬೈಕ್ ಟ್ಯಾಕ್ಸಿ ಪ್ಲಾಟ್ಫಾರ್ಮ್ ರಾಪಿಡೊ ಮತ್ತು ಲಾಜಿಸ್ಟಿಕ್ಸ್ ಅಗ್ರಿಗೇಟರ್ ಶಿಪ್ರೊಕೆಟ್ ಸೇರಿ 78 ಸ್ಟಾರ್ಟ್ಅಪ್ಗಳ ಮೇಲೆ ಹೂಡಿಕೆ ಮಾಡಿರುವ ಕುನಾಲ್ ಶಾ ಭವಿಷ್ಯದಲ್ಲಿ ಈ ಬಾರಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆಯಲ್ಲಿದ್ದಾರೆ.
ಕುನಾಲ್ ಬಹ್ಲ್: ಭಾರತೀಯ ಇ ಕಾಮರ್ಸ್ ಕಂಪನಿ ಸ್ನಾಪ್ಡೀಲ್ ಸಹ-ಸಂಸ್ಥಾಪಕ ಉದ್ಯಮಿ ಹೂಡಿಕೆದಾರ. ಕುನಾಲ್ ಸ್ನಾಪ್ಡೀಲ್ ಸಹ-ಸಂಸ್ಥಾಪಕ ರೋಹಿತ್ ಬನ್ಸಾಲ್ ಅವರ ಸಹಭಾಗಿತ್ವದಲ್ಲಿ ಮತ್ತೆ ತಂತ್ರಜ್ಞಾನ ಕಂಪನಿಗಳಲ್ಲಿ ಸಕ್ರಿಯ ಆರಂಭಿಕ ಹಂತದ ಹೂಡಿಕೆದಾರರಾಗಿದ್ದಾರೆ. ತಮ್ಮ ಆರಂಭಿಕ ಹಂತದ ಹೂಡಿಕೆ ಸಂಸ್ಥೆ, ಟೈಟಾನ್ ಕ್ಯಾಪಿಟಲ್ ಮೂಲಕ , ಅವರು ಓಲಾ , ರೇಜರ್ಪೇ , ಅರ್ಬನ್ ಕಂಪನಿ ಮುಂತಾದ ಯುನಿಕಾರ್ನ್ಗಳನ್ನು ಒಳಗೊಂಡಂತೆ ಭಾರತ, ಯುಎಸ್ ಮತ್ತು ಆಗ್ನೇಯ ಏಷ್ಯಾದಲ್ಲಿ 150 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ರೋಹಿತ್ ಬನ್ಸಾಲ್: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿಯ ಹಳೆಯ ವಿದ್ಯಾರ್ಥಿಯಾದ ರೋಹಿತ್ ಬನ್ಸಾಲ್ ತಮ್ಮ ಸ್ನೇಹಿತ ಕುನಾಲ್ ಬಹ್ಲ್ ಜೊತೆಗೆ ಸೇರಿಕೊಂಡು ಸ್ನ್ಯಾಪ್ಡೀಲ್ ಆರಂಭ ಮಾಡಿದರು..ಗೇಮಿಂಗ್ ಸ್ಟಾರ್ಟ್ಅಪ್ ಹೈಕ್ನಲ್ಲಿ ಟಿಂಡರ್ನ ಸಹ-ಸಂಸ್ಥಾಪಕ ಜಸ್ಟಿನ್ ಮಾಟೀನ್ ಜೊತೆಗೆ ಸೇರಿಕೊಂಡು ಹಲವು ಉದ್ದಿಮೆಗಳಲ್ಲಿ ರೋಹಿತ್ ಬನ್ಸಾಲ್ ಹೂಡಿಕೆ ಮಾಡಿದ್ದಾರೆ.
ರಮಾಕಾಂತ್ ಶರ್ಮಾ: ಹೋಮ್ ಮತ್ತು ಇಂಟೀರಿಯರ್ ಪ್ಲಾಟ್ಫಾರ್ಮ್ ಲಿವ್ಸ್ಪೇಸ್ನ ಸಂಸ್ಥಾಪಕ ರಮಾಕಾಂತ್ ಶರ್ಮಾ ಅವರು 2021 ರಲ್ಲಿ ಕನಿಷ್ಠ 33 ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡಿ 2021ರಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದ ವ್ಯಕ್ತಿಗಳ ಸಾಲಿನಲ್ಲಿ ಸೇರ್ಪಡೆಯಾಗಿದ್ದಾರೆ. ಬೈಜೂಸ್ ನಂತಹ ಹಲವು ಕಂಪನಿಗಳ ಜೊತೆಗೆ ಹೂಡಿಕೆ ಮಾಡಿರುವ ರಮಾಕಾಂತ ಶರ್ಮ ಇನ್ನು ಹಲವಾರು ಕಂಪನಿಗಳ ಜೊತೆ ತಮ್ಮ ಪಾಲುದಾರಿಕೆ ಹೊಂದಿದ್ದಾರೆ.